ನವದೆಹಲಿ:ಗುಜರಾತ್​ನಲ್ಲಿನ ವಿಧಾನಸಭೆಗೆ ಇಂದು ಚುನಾವಣೆ ಕೊನೆಗೊಂಡಿದ್ದು ಹಾಗೂ ಈಗಾಗಲೇ ಚುನಾವಣೆ ಮುಗಿದಿರುವ ಹಿಮಾಚಲಪ್ರದೇಶಕ್ಕೆ ಸಂಬಂಧಿಸಿದಂತೆ ಚುನಾವಣೋತ್ತರ ಸಮೀಕ್ಷೆ ಬಹಿರಂಗಗೊಂಡಿದ್ದು, ಗುಜರಾತಲ್ಲಿ ಬಿಜೆಪಿ ಜಯಭೇರಿ ಬಾರಿಸಲಿದೆ ಎಂಬುದು ನಿಚ್ಚಳವಾಗಿದೆ.
ಗುಜರಾತ್​ನ 182 ಮತ್ತು ಹಿಮಾಚಲಪ್ರದೇಶದ 68 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ಮುಗಿದಿದ್ದು, ಮತದಾನದ ಫಲಿತಾಂಶವು ಡಿ.8ರಂದು ಪ್ರಕಟವಾಗಲಿದೆ. ಈ ಮಧ್ಯೆ ಇಂದು ಚುನಾವಣೋತ್ತರ ಸಮೀಕ್ಷೆ ಹೊರಬಿದ್ದಿದೆ. ವಿವಿಧ ಏಜೆನ್ಸಿಗಳು ನಡೆಸಿರುವ ಸಮೀಕ್ಷೆಗಳ ಫಲಿತಾಂಶದ ಪ್ರಕಾರ ಗುಜರಾತಲ್ಲಿ ಬಿಜೆಪಿ ಜಯಭೇರಿ ಖಚಿತ ಎಂಬಂತಿದೆ.
ಅಂದಹಾಗೆ ಗುಜರಾತ್​ನಲ್ಲಿ ಬಹುಮತಕ್ಕೆ 92 ಸ್ಥಾನಗಳಲ್ಲಿ ಮತ್ತು ಹಿಮಾಚಲಪ್ರದೇಶದಲ್ಲಿ ಬಹುಮತಕ್ಕೆ 35 ಸ್ಥಾನಗಳು ಬರಬೇಕಿದೆ. ಆದರೆ ಚುನಾವಣೋತ್ತರ ಸಮೀಕ್ಷೆಗಳ ಒಟ್ಟಾರೆ ಫಲಿತಾಂಶದ ಪ್ರಕಾರ ಗುಜರಾತ್​ನಲ್ಲಿ ಬಿಜೆಪಿ 131 ಸ್ಥಾನಗಳನ್ನು ಗಳಿಸುವ ಮೂಲಕ ಜಯಭೇರಿ ಬಾರಿಸಲಿದೆ. ಕಾಂಗ್ರೆಸ್​-41, ಆಪ್​-7 ಮತ್ತು ಇತರ-3 ಸ್ಥಾನಗಳನ್ನು ಗೆಲ್ಲಲಿವೆ. ಹಿಮಾಚಲಪ್ರದೇಶದಲ್ಲಿ ಬಹುಮತಕ್ಕೆ ಬೇಕಿರುವ 35 ಸ್ಥಾನಗಳನ್ನಷ್ಟೇ ಗಳಿಸಲಿರುವುದರಿಂದ ಅಧಿಕಾರ ಚಂಚಲ ಎಂಬಂತಾಗುವ ಸಾಧ್ಯತೆ ಇದೆ. ಉಳಿದಂತೆ ಕಾಂಗ್ರೆಸ್-29, ಇತರ-4 ಸ್ಥಾನಗಳಲ್ಲಿ ಗೆಲ್ಲಲಿದ್ದು, ಆಪ್​ ಶೂನ್ಯದಲ್ಲಿ ಇರಲಿದೆ.
ಈ ಮಧ್ಯೆ ದೆಹಲಿಯ ಮಹಾನಗರ ಪಾಲಿಕೆಯ ಚುನಾವಣೆಗೆ ಸಂಬಂಧಿಸಿದಂತೆಯೂ ಚುನಾವಣೋತ್ತರ ಸಮೀಕ್ಷೆಯ ಫಲಿತಾಂಶ ಹೊರಹೊಮ್ಮಿದ್ದು, ಅಲ್ಲಿ ಆಪ್​ ಜಯಭೇರಿ ಬಾರಿಸಲಿದೆ ಎನ್ನಲಾಗಿದೆ. 250 ವಾರ್ಡ್​ಗಳ ಪೈಕಿ ಅಧಿಕಾರ ಹಿಡಿಯಲು 126 ಸ್ಥಾನಗಳನ್ನು ಗೆಲ್ಲಬೇಕಾಗಿದೆ. ಆದರೆ ಸಮೀಕ್ಷೆಯ ಒಟ್ಟಾರೆ ಫಲಿತಾಂಶದ ಪ್ರಕಾರ ದೆಹಲಿಯ ಪಾಲಿಕೆ ಚುನಾವಣೆಯಲ್ಲಿ ಆಪ್​-159 ಸ್ಥಾನಗಳೊಂದಿಗೆ ಭರ್ಜರಿ ಜಯ ಗಳಿಸಲಿದೆ. ಬಿಜೆಪಿ-83, ಕಾಂಗ್ರೆಸ್-6, ಇತರ-2 ಸ್ಥಾನಗಳನ್ನು ಗೆಲ್ಲಲಿವೆ.

ಖ್ಯಾತ ಗಾಯಕನ ಆಸ್ತಿಯೇ ಒತ್ತುವರಿ; ಭೂಮಾಫಿಯಾಗೆ ಕೈಜೋಡಿಸಿದ ಐಎಎಸ್​ ಅಧಿಕಾರಿ ರೋಹಿಣಿ ಸಿಂಧೂರಿ!?

ದೇಶದಲ್ಲಿ ಟ್ರೆಂಡಿಂಗ್​ನಲ್ಲಿದೆ ‘ಹಾರ್ಟ್ ಅಟ್ಯಾಕ್’; ಅದರ ಬಗ್ಗೆಯೇ ಮಾತಾಡುತ್ತಿದ್ದಾರೆ ಹಲವರು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 + 14 =
Remember me
