ಹೈದರಾಬಾದ್​:ಮಂತ್ರದಿಂದ ರೋಗ ಗುಣಪಡಿಸುವುದಾಗಿ ಪಾಲಕರನ್ನು ನಂಬಿಸಿ 14 ವರ್ಷದ ಅಪ್ರಾಪ್ತೆಯನ್ನು ಮೂರು ತಿಂಗಳವರೆಗೆ ನಿರಂತರವಾಗಿ ಮಾಂತ್ರಿಕನೊಬ್ಬ ಅತ್ಯಾಚಾರ ಎಸಗಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ.
ಆರೋಪಿ ಮಾಂತ್ರಿಕ ಪಿ. ಶಿವಪ್ರಸಾದ್ (45)​ ಕರಾಳ ಮುಖ ಬಯಲಾದ ಬೆನ್ನಲ್ಲೇ ಸಂತ್ರಸ್ತೆಯ ಕುಟುಂಬಸ್ಥರು ಆತನ​ ಕಚೇರಿಗೆ ನುಗ್ಗಿ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಇದರೊಂದಿಗೆ ಆತನಿಗೆ ಚಪ್ಪಲಿ ಸೇವೆಯನ್ನು ಮಾಡಿದ್ದು, ಈ ಪ್ರಸಂಗ ತೆಲಂಗಾಣದ ನಿಜಾಮಾಬಾದ್​ನಲ್ಲಿ ನಡೆದಿದೆ.
ಅನೇಕ ಕಾಯಿಲೆಗಳನ್ನು ಗುಣಪಡಿಸುವ ಶಕ್ತಿ ನನ್ನಲ್ಲಿದೆ ಎಂದು ಹೇಳುತ್ತಿದ್ದ ಶಿವಪ್ರಸಾದ್​ನನ್ನು ನಂಬಿ ಸಂತ್ರಸ್ತೆಯ ಪಾಲಕರು ಆಕೆಯನ್ನು ಕಳೆದ ಜುಲೈನಲ್ಲಿ ಆತನ ಬಳಿ ಕರೆದೊಯ್ದಿದ್ದರು. ಮಗಳ ದೈಹಿಕ ಮತ್ತು ಮಾನಸಿಕ ರೋಗಕ್ಕೆ ಏನಾದರೂ ಔಷಧ ಸಿಗಬಹುದೆಂಬ ಆಸೆ ಪಾಲಕರಲ್ಲಿತ್ತು.
ಇದನ್ನೂ ಓದಿ:VIDEO: ಟ್ರಾಫಿಕ್​ ಪೊಲೀಸ್​ನನ್ನೇ ಎಳೆದೊಯ್ದ ಕಾರುಚಾಲಕ- ಸಿಸಿಟಿವಿಯಲ್ಲಿ ಸೆರೆ
ಬಳಿಕ ಸಂತ್ರಸ್ತೆಯ ಪಾಲಕರೊಂದಿಗೆ ಮಾತನಾಡಿದ್ದ ಶಿವಪ್ರಸಾದ್​, ಪ್ರತಿವಾರ ತನ್ನ ಕಚೇರಿಗೆ ಕರೆತರುವುದಾಗಿ ಹೇಳಿದ್ದ. ಹೀಗೆ ವಾರವಾರ ಕರೆತರುತ್ತಿದ್ದರೂ. ಮೂರು ತಿಂಗಳಲ್ಲಿ ಪ್ರತಿ ಬಾರಿಯೂ ಆಕೆಯ ಮೇಲೆ ಅತ್ಯಾಚಾರ ಎಸಗುತ್ತಿದ್ದ. ಪಾಲಕರು ಕೇಳಿದ್ರೆ ವಿಶೇಷ ಮಂತ್ರದ ಮೂಲಕ ವಾಸಿ ಮಾಡುತ್ತಿದ್ದೇನೆಂದು ಹೇಳುತ್ತಿದ್ದ. ಯಾರಿಗಾದರೂ ಹೇಳಿದರೆ ಕೊಲೆ ಮಾಡುವುದಾಗಿ ಸಂತ್ರಸ್ತೆಗೆ ಬೆದರಿಕೆ ಹಾಕಿದ್ದ.
ಹೀಗೆ ಇರುವಾಗ ಸಂತ್ರಸ್ತೆಯ ಆರೋಗ್ಯ ಮತ್ತಷ್ಟು ಬಿಗಡಾಯಿಸಿ, ತೀವ್ರ ಹೊಟ್ಟೆ ನೋವೆಂದು ಆಸ್ಪತ್ರೆಗೆ ಹೋದಾಗ ಆಕೆಯ ಮೇಲೆ ನಡೆದ ದೌರ್ಜನ್ಯ ಗೊತ್ತಾಗಿದೆ. ಬಾಲಕಿಯು ಸಹ ಎಲ್ಲವನ್ನು ಪಾಲಕರ ಮುಂದೆ ಬಿಚ್ಚಿಟ್ಟಿದ್ದಾಳೆ. ಬಳಿಕ ಕೊಪಗೊಂಡ ಪಾಲಕರು ಮಹಿಳಾ ಹಕ್ಕುಳ ಕಾರ್ಯಕರ್ತರ ಸಹಾಯದಿಂದ ಮಾಂತ್ರಿಕ ಕಚೇರಿಗೆ ನುಗ್ಗಿ ಚೆನ್ನಾಗಿ ಥಳಿಸಿದ್ದಾರೆ. ಬಳಿಕ ಆರೋಪಿಯನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.(ಏಜೆನ್ಸೀಸ್​)
ಆದಾಯ ತೆರಿಗೆ ಉಳಿಸೋದಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಏನು ಮಾಡ್ತಾರೆ?

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:12 − two =
Remember me
