ನವದೆಹಲಿ:ದೇಶದಲ್ಲಿ ಮೂರನೇ ಹಂತದ ಲಾಕ್​ಡೌನ್ ಘೋಷಣೆ ಹಾಗೂ ಕೆಲ ಆರ್ಥಿಕ ಚಟುವಟಿಕೆಗಳಿಗೆ ಅನುಮತಿ ನೀಡಿರುವ ಬೆನ್ನಲ್ಲೇ, ಕೇಂದ್ರ ಸರ್ಕಾರ ಮತ್ತೊಂದು ಹಂತದ ಪ್ಯಾಕೇಜ್ ಘೋಷಣೆಗೆ ಸಿದ್ಧತೆ ನಡೆಸಿದೆ. ಸಣ್ಣ ಉದ್ಯಮ, ಕೃಷಿ ಕ್ಷೇತ್ರಗಳನ್ನು ಪ್ರಮುಖವಾಗಿ ಗಮನದಲ್ಲಿಟ್ಟುಕೊಂಡು ಸರ್ಕಾರ ಯೋಜನೆ ರೂಪಿಸುತ್ತಿದೆ ಎನ್ನಲಾಗಿದೆ. ಕರೊನಾ ಕಾರಣ ಸಂಕಷ್ಟದಲ್ಲಿರುವ ವಲಯಗಳಿಗೆ ವಿಶೇಷ ಪ್ಯಾಕೇಜ್​ನಿಂದ ತುಸು ನಿರಾಳತೆ ಸಿಗುವ ನಿರೀಕ್ಷೆ ಇದೆ.
ಲಾಕ್​ಡೌನ್ ಕಾರಣ ತೀವ್ರ ಬಿಕ್ಕಟ್ಟು ಎದುರಿಸುತ್ತಿರುವ, ಕಿರು, ಸಣ್ಣ, ಮಧ್ಯಮ ಗಾತ್ರದ ಉದ್ದಿಮೆ (ಎಂಎಸ್​ಎಂಇ), ಕೃಷಿ ಇನ್ನಿತರ ಕ್ಷೇತ್ರಗಳಿಗೆ ವಿಶೇಷ ಪ್ಯಾಕೇಜ್ ಘೋಷಣೆಯಾಗುವ ಸಂಭವ ಇದೆ ಎಂದು ಹೇಳಲಾಗುತ್ತಿದೆ. ಕಳೆದ ಮಾರ್ಚ್​ನಲ್ಲಿ ಮೊದಲ ಹಂತದ ಲಾಕ್​ಡೌನ್ ಘೋಷಿಸಿದ ನಂತರ ಕೇಂದ್ರ ಸರ್ಕಾರ -ಠಿ; 1.70 ಲಕ್ಷ ಕೋಟಿ ವಿಶೇಷ ಪ್ಯಾಕೇಜ್ ಪ್ರಕಟಿಸಿತ್ತು. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಶನಿವಾರ ಮಹತ್ವದ ಸಭೆ ನಡೆದಿದೆ. ಕೇಂದ್ರ ಗೃಹ ಸಚಿವ ಅಮಿತ್ ಷಾ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಸಣ್ಣ ಕೈಗಾರಿಕೆ ಸಚಿವ ಗಿರಿರಾಜ್ ಸಿಂಗ್ ಸೇರಿ ಹಲವು ಸಚಿವರು, ವಿತ್ತ ಸಚಿವಾಲಯದ ಉನ್ನತ ಅಧಿಕಾರಿಗಳು ಭಾಗವಹಿಸಿದ್ದರು. ದೇಶದ ವಿತ್ತೀಯ ಸ್ಥಿತಿಗತಿ, ಅರ್ಥಿಕತೆಗೆ ವೇಗ ನೀಡಲು ಕೈಗೊಂಡಿರುವ ಕ್ರಮಗಳ ಬಗ್ಗೆ ಅಧಿಕಾರಿಗಳು ವಿವರ ಮಾಹಿತಿಯನ್ನು ಪ್ರಧಾನಿಗೆ ನೀಡಿದ್ದಾರೆ. ಆರ್ಥಿಕ ಚೇತರಿಕೆಗೆ ಕ್ರಮ ಕೈಗೊಳ್ಳುವುದು ಹಾಗೂ ಪ್ಯಾಕೇಜ್ ಘೋಷಣೆಯ ಪೂರ್ವ ಸಿದ್ಧತೆಯಾಗಿ ಈ ಸಭೆ ನಡೆದಿದೆ ಎನ್ನಲಾಗಿದೆ.
ನಾಗರಿಕ ವಿಮಾನಯಾನ, ಕಾರ್ವಿುಕ, ಇಂಧನ, ವಾಣಿಜ್ಯ ಇನ್ನಿತರ ಮಹತ್ವದ ಖಾತೆಯ ಸಚಿವರ ಜತೆಗೆ ಮೋದಿ ಶುಕ್ರವಾರ ಮತ್ತು ಗುರುವಾರ ಸಭೆ ನಡೆಸಿದ್ದರು. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಜತೆ ಗುರುವಾರ ನಡೆಸಿದ ಸಭೆಯಲ್ಲಿ ವಿದೇಶಿ ಬಂಡವಾಳವನ್ನು ಹೆಚ್ಚಿನ ಮಟ್ಟದಲ್ಲಿ ಆಕರ್ಷಿಸುವ ಕುರಿತು ಪ್ರಧಾನಿ ರ್ಚಚಿಸಿದ್ದರು.
ಲಾಕ್​ಡೌನ್​ನಿಂದ ಕೃಷಿ ವಲಯ ಎದುರಿಸುತ್ತಿರುವ ಬಿಕ್ಕಟ್ಟು ಮತ್ತು ನೀಡಬೇಕಿರುವ ಉತ್ತೇಜನ ಕುರಿತು ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್, ಕೃಷಿ ಸಚಿವಾಲಯದ ಉನ್ನತ ಅಧಿಕಾರಿಗಳು, ಕೃಷಿಗೆ ಸಂಬಂಧಿಸಿದ ಇನ್ನಿತರ ಇಲಾಖೆಗಳ ಮುಖ್ಯಸ್ಥರ ಜತೆ ಪ್ರಧಾನಿ ಮೋದಿ ಸಭೆ ನಡೆಸಿದ್ದಾರೆ. ಕೃಷಿ ಉತ್ಪನ್ನ ಮಾರುಕಟ್ಟೆ, ನಿರ್ವಹಣೆ, ಆವಕ, ರೈತರಿಗೆ ಸಾಂಸ್ಥಿಕ ಸಾಲದ ಲಭ್ಯತೆ, ಕೃಷಿ ವಲಯವನ್ನು ನಿರ್ಬಂಧ ಮುಕ್ತಗೊಳಿಸುವಿಕೆ ಕುರಿತು ಚರ್ಚೆ ನಡೆದಿದೆ. ಕೃಷಿ ಅರ್ಥ ವ್ಯವಸ್ಥೆಗೆ ತಾಂತ್ರಿಕತೆ ಮತ್ತು ಬಂಡವಾಳ ಒದಗಿಸುವುದು, ಜೈವಿಕ ತಂತ್ರಜ್ಞಾನದ ಅಭಿವೃದ್ಧಿಯ ಸಾಧ್ಯಾಸಾಧ್ಯತೆ, ಪರಿಸರಸ್ನೇಹಿ ಕೃಷಿಯಲ್ಲಿ ಕ್ಷಿಪ್ರ ಸುಧಾರಣೆ, ಕೃಷಿ ಮೂಲಸೌಕರ್ಯ ಕಲ್ಪಿಸಿಕೊಳ್ಳಲು ಅಗ್ಗದ ಬಡ್ಡಿಗೆ ಸಾಲ, ಪಿಎಂ-ಕಿಸಾನ್ ಫಲಾನುಭವಿಗಳಿಗಾಗಿ ಕಿಸಾನ್ ಕ್ರೆಡಿಟ್​ಕಾರ್ಡ್ ವಿಶೇಷ ಅಭಿಯಾನ, ಕೃಷಿ ಉತ್ಪನ್ನಗಳ ಅಂತರರಾಜ್ಯ ವ್ಯಾಪಾರಕ್ಕೆ ಅನುವು ಹಾಗೂ ಕೃಷಿ ಉತ್ಪನ್ನಗಳ ಇ-ವ್ಯಾಪಾರದ ವೇದಿಕೆಗಳಿಗೆ ವೇದಿಕೆಯನ್ನಾಗಿ ಇ-ನ್ಯಾಮ್ ಅಭಿವೃದ್ಧಿ ಕುರಿತು ಚರ್ಚೆ ನಡೆಸಲಾಯಿತು.
ಭಾರತೀಯ ರಿಸರ್ವ್ ಬ್ಯಾಂಕ್ (ಆರ್​ಬಿಐ) ಗವರ್ನರ್ ಶಕ್ತಿಕಾಂತ ದಾಸ್, ಸರ್ಕಾರಿ ಸ್ವಾಮ್ಯ ಮತ್ತು ಖಾಸಗಿ ವಲಯದ ಬ್ಯಾಂಕ್​ಗಳ ಮುಖ್ಯಸ್ಥರ ಜತೆ ಶನಿವಾರ ವಿಡಿಯೋ ಕಾನ್ಪರೆನ್ಸ್ ಮೂಲಕ ಸಭೆ ನಡೆಸಿದರು.
ಲಾಕ್​ಡೌನ್ ಕಾರಣ ಸಾಲದ ಕಂತು ಪಾವತಿಗೆ ನೀಡಲಾಗಿರುವ 3 ತಿಂಗಳ ವಿನಾಯಿತಿ ಮತ್ತು ಸಾಲ ವಿತರಣೆ ಕುರಿತು ಚರ್ಚೆ ನಡೆಸಿದರು. ಬ್ಯಾಂಕೇತರ ಹಣಕಾಸು ಸಂಸ್ಥೆ, ಕಿರುಹಣಕಾಸು ಸಂಸ್ಥೆ, ಗೃಹ ಸಾಲ ವಿತರಣೆ ಕಂಪನಿಗಳು ಮತ್ತು ಮ್ಯೂಚುವಲ್ ಫಂಡ್​ಗಳಿಗೆ ಸಾಲ ವಿತರಣೆ ಬಗ್ಗೆ ದಾಸ್ ಮಾಹಿತಿ ಪಡೆದುಕೊಂಡರು. ಜತೆಗೆ ಲಾಕ್​ಡೌನ್ ತೆರವಿನ ನಂತರ ಸಾಲದ ವಿತರಣಾ ಹರಿವು, ಎಂಎಸ್​ಎಂಇಗಳಿಗೆ ಸಾಲ ವಿತರಣೆ, ಕಾರ್ಯನಿರ್ವಹಣಾ ಬಂಡವಾಳ ಕುರಿತು ಚರ್ಚೆ ನಡೆಸಿದರು.
ಮೇ 4 ರಿಂದ ಕೇದಾರನಾಥ ದರ್ಶನಕ್ಕೆ ಅವಕಾಶ, ಹಸಿರು ವಲಯದ ಜಿಲ್ಲೆಗಳ ಭಕ್ತರು ಭೇಟಿ ನೀಡಬಹುದು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen − four =
Remember me
