ತೆರಿಗೆ ಪದ್ಧತಿಯಲ್ಲಿ ಬಹುದೊಡ್ಡ ಸುಧಾರಣೆ ಎಂದು ಬಣ್ಣಿಸಲಾಗಿರುವ ಜಿಎಸ್​ಟಿ ಜಾರಿಯಾಗಿ ಇಂದಿಗೆ ಮೂರು ವರ್ಷ. ಇದರ ಸಾಧನೆಗಳೇನು, ಆಗಬೇಕಾದ ಸುಧಾರಣೆಗಳೇನು ಎಂಬ ಬಗ್ಗೆ ವಿವರಿಸಿರುವ ತಜ್ಞರು, ಸಾಧಕ-ಬಾಧಕಗಳನ್ನು ತೆರೆದಿಟ್ಟಿದ್ದಾರೆ.
| ಎನ್.ನಿತ್ಯಾನಂದ
ಜಿಎಸ್​ಟಿ ದಿನದಂದು ಜಿಎಸ್​ಟಿಯ ಎಲ್ಲ ಪಾತ್ರಧಾರಿಗಳಿಗೆ ಅಭಿನಂದನೆ ಗಳು. ಕೊವಿಡ್-19 ಪರಿಸ್ಥಿತಿಯಲ್ಲಿ ವ್ಯಾಪಾರಿ-ಕೈಗಾರಿಕೋದ್ಯಮಿ ಸಮುದಾಯದ ಕಷ್ಟನಷ್ಟಗಳಿಗೆ ಸ್ಪಂದನೆ-ಸಹಕಾರ ನೀಡಿದ ವಿತ್ತಮಂತ್ರಿ ನಿರ್ಮಲಾ ಸೀತಾರಾಮನ್ ಅವರಿಗೆ ಧನ್ಯವಾದಗಳು. ಮುಂಬರುವ ದಿನಗಳಲ್ಲಿ ಜಿಎಸ್​ಟಿಯಲ್ಲಿ ಕೆಳಕೆಂಡ ಸುಧಾರಣೆಗಳ ನಿರೀಕ್ಷೆ ಇದೆ.
ಸಾಫ್ಟ್​ವೇರ್:ನೂತನ ತೆರಿಗೆ ಪದ್ಧತಿಗೆ ಸಹಕರಿಸದ ರಕ್ಕಸ ಇದಾಗಿದೆ. ಇದರಿಂದ ತೆರಿಗೆದಾರರಿಗೆ ಅನಾನಕೂಲ ಅಪಾರ. ಸಮಯ-ಶ್ರಮಗಳ ವ್ಯರ್ಥದ ಜೊತೆಗೆ ತೆರಿಗೆ ನಿಯಮ ಅನುಸರಣೆ ಮಾಡದಿರುವ ಆತಂಕ ಬೇರೆ. ಇದು ಚೆನ್ನಾಗಿ ಕಾರ್ಯನಿರ್ವಹಿಸುವುದು ಕೊವಿಡ್ ಸಮಯದಲ್ಲಿ ಮಾತ್ರ! (ಏಕೆಂದರೆ ಯಾರೂ ಅದನ್ನು ಉಪಯೋಗಿಸುತ್ತಿಲ್ಲ) ಸರ್ಕಾರದಿಂದ ಸಾವಿರಾರು ಕೋಟಿ ಕಾಂಟ್ರಾಕ್ಟ್ ಗಿಟ್ಟಿಸಿ ಕಳಪೆ ಕೆಲಸ ಮಾಡುತ್ತಿರುವ ಕಂಪನಿಯನ್ನು ದಂಡಿಸಿ, ಸರಿದಾರಿಗೆ ತರಲೇಬೇಕು.
ಅಧಿಸೂಚನೆ ಹಾವಳಿ:ಜಿಎಸ್​ಟಿ ಸರಳ ತೆರಿಗೆ ಪದ್ಧತಿ ಆಗುವ ಭಾವನೆ ಇತ್ತು. ದಿನಕ್ಕೊಂದು-ಕ್ಷಣಕ್ಕೊಂದು ಅಧಿಸೂಚನೆ ಹೊರಡಿಸುತ್ತಿರುವುದು ಬಳಕೆದಾರರಿಗೆಲ್ಲ ತಲೆನೋವಾಗಿದೆ. ಇದರಿಂದ ಕಾನೂನು ಉಲ್ಲಂಘನೆ, ಅಪೀಲುಗಳು-ಕಾನೂನು ಕಟ್ಟಳೆಗಳು ಹೆಚ್ಚುವ ಸಂಭವ ಇದೆ. ಅಧಿಸೂಚನೆಗಳಿಗೆ ಇತಿ-ಮಿತಿ ಇರಲಿ.
ದಂಡಗಳು ಬಹು ಭಾರಿ:ದಂಡಗಳು ಎಲ್ಲ ತೆರಿಗೆ ಕಾನೂನುಗಳಲ್ಲಿ ಅತ್ಯಗತ್ಯ. ಒಳ್ಳೆಯ ತೆರಿಗೆ ಪದ್ಧತಿಗಳಲ್ಲಿ ದಂಡ ಉಲ್ಲಂಘನೆಯ ತೀವ್ರತೆಯನ್ನು ಆಧರಿಸುತ್ತಿದೆ. ಜಿಎಸ್​ಟಿ ತೆರಿಗೆ ಕಾನೂನಿನಲ್ಲಿ ದಂಡಗಳು ತೀರಾ ಹೆಚ್ಚು. ಚಿಕ್ಕ ಅಪರಾಧಕ್ಕೆ ಗಲ್ಲು ಶಿಕ್ಷೆ ವಿಧಿಸುವುದು ನಾಗರಿಕ ಸಮಾಜಕ್ಕೆ ಅನುಗುಣವಲ್ಲ. ದಂಡಗಳನ್ನು ಪುನರ್ ಪರಿಶೀಲಿಸಿ, ನಿರ್ಧರಿಸಲಿ.
ಮುಂಗಡ ತೀರ್ಪು ಪ್ರಾಧಿಕಾರ:ತೆರಿಗೆದಾರರು ತಮ್ಮ ಸರಕು-ಸೇವೆಗಳ ಮೇಲೆ ತೆರಿಗೆ ದರ-ಇತರ ವಿಷಯಗಳ ಬಗ್ಗೆ ಪ್ರಾಧಿಕಾರದಿಂದ ಮುಂಗಡವಾಗಿ ತೀರ್ಪು ಪಡೆದು ನಿರಾತಂಕವಾಗಿ ವ್ಯವಹರಿಸುವುದು. ಈ ತೀರ್ಪಿಗೆ ತೆರಿಗೆ ಸಂಗ್ರಾಹಕರು-ತೆರಿಗೆದಾರರು ಬದ್ಧ. ಪುನರಾವರ್ತಿತ ವಿಷಯಗಳಿಗೆ (ಛಿಟಛಿಠಿಜಿಠಿಜಿಡಛಿ ಞಚಠಿಠಿಛ್ಟಿಠಚ್ಝ್ಟಚಛಢ ಛಛ್ಚಿಜಿಛಛಿಛ) ತೆರಿಗೆದಾರರು ಅರ್ಜಿ ಸಲ್ಲಿಸುವಾಗ ತುಂಬಬೇಕಾದ ಶುಲ್ಕ (-ಠಿ; 10 ಸಾವಿರ)ವನ್ನು ಅರ್ಧದಷ್ಟಕ್ಕೆ ಇಳಿಸಿದರೆ, ಸಣ್ಣ ಉದ್ಯಮಿಗಳಿಗೆ ಅನುಕೂಲವಾಗುತ್ತದೆ.
ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಬೇಕೆ?:್ಝರೀದಿಸುವ ತೆರಿಗೆದಾರರು ್ಝಾನೂನಾತ್ಮಕವಾಗಿ ವ್ಯವಹರಿಸಿ ಕೊಂಡ ಪದಾರ್ಥಗಳ ಮೇಲಿನ ಜಿಎಸ್​ಟಿ ಜಮಾ ್ಝಾರುವ ತೆರಿಗೆದಾರರ ತೆರಿಗೆ ತುಂಬುವಿಕೆ ಹಾಗೂ ರಿಟರ್ನ್ಸ್ ಸಲ್ಲಿಸುವಿಕೆ ಮೇಲೆ ಆಧರಿಸಿರುವುದು ಸಮಂಜಸವಲ್ಲ. ಸರ್ಕಾರ ಉಲ್ಲಂಘಿಸುವವರ ಮೇಲೆ ಕ್ರಮ ತೆಗೆದುಕೊಳ್ಳುವುದನ್ನು ಬಿಟ್ಟು, ಖರೀದಿಸುವ ತೆರಿಗೆದಾರರಿಗೆ ಜಮಾವನ್ನು ನಿರಾಕರಿಸುವುದು ಎತ್ತೆಗೆ ಜ್ವರ ಬಂದರೆ ಎಮ್ಮೆಗೆ ಬರೆ ಎಳೆದಂತೆ.
ಇ-ವೇ ಬಿಲ್ಸ್:ಎಲ್ಲ ವಹಿವಾಟುಗಳಿಗೆ (-ಠಿ; 50 ಸಾವಿರ ಮೇಲ್ಪಟ್ಟು) ಇ-ವೇ ಬಿಲ್​ಗಳ ಅವಶ್ಯಕತೆ ಇದೆ. ಇದನ್ನು ಸ್ವಾಗತಿಸುತ್ತೇವೆ. ಇ-ವೇ ಬಿಲ್​ಗಳ ಸಿಂಧುತ್ವ ಕೇವಲ 48 ಗಂಟೆಗಳು. ವ್ಯವಹಾರದಲ್ಲಿ ಕೆಲ ವಿಶೇಷ ಪರಿಸ್ಥಿತಿಗಳಲ್ಲಿ ಈ ಸಮಯ ಖರೀದಿಸುವ ತೆರಿಗೆದಾರರು, 6 ತಿಂಗಳ ಅವಧಿಯಲ್ಲಿ ಖರೀದಿಸಿರುವ ವಸ್ತುವಿಗೆ/ಸೇವೆಗೆ ಹಣವನ್ನು ಮರುತೆರಿಗೆದಾರನಿಗೆ ಕೊಡದಿದ್ದರೆ ಜಿಎಸ್​ಟಿ ಜಮಾವನ್ನು ಹಿಂದಿರುಗಿಸಬೇಕಾಗಿದೆ. ಇದು ವ್ಯಾಪಾರದಲ್ಲಿ ಒಳ್ಳೆಯ ಶಿಸ್ತನ್ನು ತರುವುದಲ್ಲಿ ಸಂಶಯವಿಲ್ಲ. ಆದರೆ ವ್ಯವಹಾರದಲ್ಲಿ ಕೆಲ ಸಂದರ್ಭಗಳಲ್ಲಿ ಹಣ ಪಾವತಿ ಮಾಡಲು ಸಾಧ್ಯವಾಗುವುದಿಲ್ಲ. ಉದಾಹರಣೆಗೆ-ಕೊವಿಡ್ 19ನಿಂದ ಉದ್ಭವವಾಗಿರುವ ಹಣದ ಅಭಾವ ಹಾಗೇ ಖರೀದಿಸುವ ವಸ್ತುಗಳು ದೊಡ್ಡ ಯಂತ್ರಗಳ ಭಾಗವಾಗಿರುವಾಗ, ಯಂತ್ರಪೂರೈಕೆ ವಿಳಂಬವಾದಾಗ ಹಣಪಾವತಿಯೂ ವಿಳಂಬವಾಗುತ್ತದೆ. ಇಂತಹ ಸಂದರ್ಭಗಳಿಗೆ ಬೇಕಾದ ಮಾರ್ಪಾಡು ಮಾಡಿದರೆ ಒಳಿತು.
ಇಬ್ಬರು ಹೆಂಡಿರ ಚಿಂತೆ:ಈ ತೆರಿಗೆ ಪದ್ಧತಿಯಲ್ಲಿ ಅನೇಕ ತೆರಿಗೆಗಳು ಒಂದಾಗಿರುವುದರಿಂದ ತೆರಿಗೆಯ ಆಡಳಿತ ಕೆಲ ತೆರಿಗೆದಾರರಿಗೆ ರಾಜ್ಯ ಜಿಎಸ್​ಟಿ ಇಲಾಖೆಗೆ ಒಳಪಡುತ್ತದೆ. ಇತರರು ಕೇಂದ್ರ ಜಿಎಸ್​ಟಿ ಇಲಾಖೆಗೆ ಒಳಪಡುತ್ತಾರೆ. ಕೇಂದ್ರ ಇಲಾಖೆಗೆ ವ್ಯಾಪಾರಿಗಳ ತೆರಿಗೆ ಮೌಲ್ಯಮಾಪನ ಹೊಚ್ಚ ಹೊಸದು. ಅವರಿಗೆ ಇಲ್ಲಿಯವರೆಗೆ ಉತ್ಪಾದಕರು ಹಾಗೂ ಸೇವಾವಲಯದ ಮೌಲ್ಯಮಾಪನ ಮಾಡಿರುವ ಅನುಭವ ಮಾತ್ರ ಇದೆ. ಕೇಂದ್ರ ಜಿಎಸ್​ಟಿ ಅಧಿಕಾರಿಗಳಿಗೆ ಹೆಚ್ಚಿನ ಶಿಕ್ಷಣ-ವ್ಯಾಪಾರಿಗಳ ಮೌಲ್ಯಮಾಪನದ ವಿಶೇಷತೆಗಳ ಬಗ್ಗೆ ಹೆಚ್ಚಿನ ಅರಿವು ಮೂಡಿಸಿದರೆ ವ್ಯಾಪಾರಿಗಳಿಗೂ ಇಲಾಖೆಗೂ ಉತ್ತಮ. ಭಿನ್ನಾಭಿಪ್ರಾಯಗಳನ್ನೂ ತೆರಿಗೆ ತಕರಾರುಗಳನ್ನೂ ಮಿತಿಗೊಳಿಸಬಹುದು.
ತೆರಿಗೆ ವ್ಯೂಹದಿಂದ ಹೊರಗಿನ ಗ್ರಹಗಳು:ನಮ್ಮ ದೇಶದ ವ್ಯಾಪಾರ-ವಹಿವಾಟುಗಳನ್ನು ನೋಡಿದರೆ, ಜಿಎಸ್​ಟಿಗೆ ನೋಂದಣಿಯಾದವರ ಸಂಖ್ಯೆ ಚಿಕ್ಕದಾಗಿ ಕಾಣಿಸುತ್ತದೆ. ಇಲಾಖೆಗಳು ನೋಂದಾಯಿತ ವ್ಯಾಪಾರಿಗಳ ವ್ಯವಹಾರದ ಮೇಲೆ ಇಟ್ಟಿರುವ ಗಮನ-ವ್ಯಯಿಸುತ್ತಿರುವ ಸಮಯದ ಸಮಪಾಲು, ತೆರಿಗೆವ್ಯೂಹದಿಂದ ಹೊರಗಿರುವ, ತೆರಿಗೆ ವಂಚಕರ ಮೇಲೂ ಇಡಬೇಕು. ಎಲ್ಲರೂ ನೋಂದಾಯಿಸಿ, ಸರಿಯಾದ ತೆರಿಗೆ ಕಟ್ಟಿದರೆ, ತೆರಿಗೆ ವ್ಯವಸ್ಥೆ ಸುಭದ್ರ. ಇಲ್ಲದಿದ್ದರೆ ನೋಂದಾಯಿತ ವ್ಯಾಪಾರಿಗಳ ಸರಕು-ಸೇವೆಗಳು ಇತರರಿಗಿಂತ ದುಬಾರಿಯಾಗಲಿದೆ.
ತೆರಿಗೆದಾರರ ಬಗ್ಗೆ ಗೌರವ-ಹೆಮ್ಮೆ ಇರಲಿ:ದೇಶದಲ್ಲಿ ತೆರಿಗೆದಾರ ರನ್ನು ನೋಡುವ-ನಡೆಸಿಕೊಳ್ಳುವ ಪರಿ ಸರಿಯಾಗಬೇಕಿದೆ. ತೆರಿಗೆದಾರನ ಪರಿಶ್ರಮದಿಂದ ದೇಶದ ಆರ್ಥಿಕತೆ ಬಲಗೊಳ್ಳುತ್ತದೆ. ತೆರಿಗೆಯಿಂದ ದೇಶ ಪ್ರಗತಿಪಥದಲ್ಲಿದೆ. ತೆರಿಗೆದಾರರನ್ನು ಗೌರವಿಸಿ-ಆದರಿಸಿ. ಸಂಶಯಾತ್ಮಕ ಮನೋಭಾವದಿಂದ ಸಂಯಮ-ಅನುಭೂತಿಯ ಪಥಕ್ಕೆ ಚಲಿಸೋಣ.
(ಲೇಖಕರು ಆರ್ಥಿಕ ತಜ್ಞರು)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × 2 =
Remember me
