ನವದೆಹಲಿ:ಹಬ್ಬದ ಋತುವಿನಲ್ಲಿ ಖಾದ್ಯ ತೈಲಗಳ ಕೊರತೆ ಆಗಬಾರದು ಮತ್ತು ಬೆಲೆ ಏರಿಕೆ ಕಾಡಬಾರದು ಎಂಬ ಉದ್ದೇಶದೊಂದಿಗೆ ಕೇಂದ್ರ ಸರ್ಕಾರ ಬುಧವಾರ ಸೀಮಾ ಸುಂಕವನ್ನು ರದ್ದುಗೊಳಿಸಿದೆ. ಈ ಆದೇಶವು ತಾಳೆ, ಸೋಯಾ, ಸೂರ್ಯಕಾಂತಿ ಕಚ್ಚಾ ತೈಲಗಳಿಗೆ ಅನ್ವಯ. ಅಷ್ಟೇ ಅಲ್ಲ, ಇದು ಇಂದಿನಿಂದ 2022ರ ಮಾರ್ಚ್ 31ರ ತನಕ ಊರ್ಜಿತದಲ್ಲಿ ಇರಲಿದೆ. ಈ ವಿದ್ಯಮಾನವು ಖಾದ್ಯ ತೈಲಗಳ ಬೆಲೆ ಇಳಿಕೆಯನ್ನು ನಿರೀಕ್ಷಿಸುವಂತೆ ಮಾಡಿದೆ.
ಕಚ್ಚಾ ತಾಳೆ ಎಣ್ಣೆ ಮೇಲೆ ಕೃಷಿ ಮೂಲಸೌಕರ್ಯ ಅಭಿವೃದ್ಧಿ ಸೆಸ್ ಶೇಕಡ 7.5 ಇತ್ತು. ಕಚ್ಚಾ ಸೋಯಾಬೀನ್ ಎಣ್ಣೆ ಮತ್ತು ಕಚ್ಚಾ ಸೂರ್ಯಕಾಂತಿ ಎಣ್ಣೆ ಮೇಲಿನ ಕೃಷಿ ಸೆಸ್ ಶೇಕಡ 5 ಇತ್ತು. ಇದೇ ರೀತಿ ಕಚ್ಚಾ ತಾಳೆ ಎಣ್ಣೆ ಮೇಲಿನ ಸೀಮಾ ಸುಂಕ ಶೇಕಡ 8.25, ಸೋಯಾಬೀನ್ ಮತ್ತು ಸೂರ್ಯಕಾಂತಿ ಕಚ್ಚಾ ತೈಲದ ಮೇಲಿನ ಸೀಮಾ ಸುಂಕ ಶೇಕಡ 5.5 ಇತ್ತು. ಇದಕ್ಕೆ ಹೊರತಾಗಿ ಸೂರ್ಯಕಾಂತಿ, ಸೋಯಾಬೀನ್, ಪಾಮೋಲಿನ್, ಪಾಮ್ ಆಯಿಲ್​ಗಳ ವಿವಿಧ ರೀಫೈನ್ಡ್ ತೈಲಗಳ ಮೇಲಿನ ಮೂಲ ಸೀಮಾ ಸುಂಕವನ್ನು ಈಗಿರುವ ಶೇಕಡ 32.5ರಿಂದ ಶೇಕಡ 17.5ಕ್ಕೆ ಇಳಿಸಲಾಗಿದೆ ಎಂದು ಕೇಂದ್ರೀಯ ಪರೋಕ್ಷ ತೆರಿಗೆ ಮತ್ತು ಸೀಮಾ ಸುಂಕ ಮಂಡಳಿ(ಸಿಬಿಡಿಟಿ) ತಿಳಿಸಿದೆ.
ವರ್ಷದಲ್ಲಿ ಶೇ. 46.15 ದರ ಏರಿಕೆ: ಜಾಗತಿಕ ವಹಿವಾಟು ಮತ್ತು ಸ್ಥಳೀಯ ಪೂರೈಕೆಯಲ್ಲಿನ ಹಿಡಿತದ ಕಾರಣ ಕಳೆದ ಒಂದು ವರ್ಷದಿಂದ ಖಾದ್ಯ ತೈಲದ ಧಾರಣೆ ಲೀಟರ್​ಗೆ ಸರಾಸರಿ 46.15ರಷ್ಟು ಏರಿಕೆ ಆಗಿದೆ. ಹೀಗಾಗಿ ಸರ್ಕಾರ ಈ ನಿರ್ಧಾರ ಕೈಗೊಂಡಿದೆ ಎಂದು ಇಲಾಖೆ ಹೇಳಿಕೆಯಲ್ಲಿ ತಿಳಿಸಿದೆ.
ಎಣ್ಣೆ ಮಿಲ್, ರಫ್ತು- ಆಮದು ದಾಸ್ತಾನುದಾರರು, ಸಗಟು ಮತ್ತು ಚಿಲ್ಲರೆ ಮಾರಾಟಗಾರರಿಗೆ ದಾಸ್ತಾನು ಮಿತಿಯನ್ನು ಸರ್ಕಾರ ಕಳೆದ ವಾರ ವಿಧಿಸಿತ್ತು. ಈ ಮಿತಿ ಪ್ರಮಾಣವನ್ನು ರಾಜ್ಯ ಸರ್ಕಾರ ನಿರ್ಧರಿಸಲಿದೆ ಎಂದು ಕೇಂದ್ರ ಆಹಾರ ಮತ್ತು ಪಡಿತರ ವಿತರಣೆ ಸಚಿವಾಲಯ ಹೇಳಿತ್ತು. ದೇಶದ ಒಟ್ಟಾರೆ ಖಾದ್ಯ ತೈಲ ಬಳಕೆಯಲ್ಲಿ ಶೇ. 60ರಷ್ಟು ಆಮದಾಗುತ್ತದೆ.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 − one =
Remember me
