ಮುಂಬೈ:ನಟ ಸುಶಾಂತ್ ಸಿಂಗ್ ಸಾವಿನ ಪ್ರಕರಣದ ತನಿಖೆ ವಿಚಾರವಾಗಿ ಮತ್ತು ಮುಂಬೈನಲ್ಲಿರುವ ತಮ್ಮ ಕಚೇರಿಯ ಕೆಲ ಭಾಗ ಧ್ವಂಸಗೊಳಿಸಿದ್ದರ ಕುರಿತು ಮಹಾರಾಷ್ಟ್ರ ಸರ್ಕಾರದೊಂದಿಗೆ ತೀವ್ರ ಜಟಾಪಟಿ ನಡೆಸುತ್ತಿರುವ ನಟಿ ಕಂಗನಾ ರಣಾವತ್ ಭಾನುವಾರ ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿಯವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.
‘ಮಹಾರಾಷ್ಟ್ರ ಸರ್ಕಾರದಿಂದ ನಾನು ಅನುಭವಿಸಿದ ಅನ್ಯಾಯದ ಬಗ್ಗೆ ರಾಜ್ಯಪಾಲರಿಗೆ ತಿಳಿಸಿದ್ದೇನೆ. ಸಮಾಜದಲ್ಲಿ ಯುವತಿಯರು ಸೇರಿ ಎಲ್ಲ ನಾಗರಿಕರ ನಂಬಿಕೆಯನ್ನು ಪುನಃಸ್ಥಾಪಿಸಲು ನನಗೆ ನ್ಯಾಯ ದೊರಕುತ್ತದೆ ಎಂದು ಭಾವಿಸುತ್ತೇನೆ. ರಾಜ್ಯಪಾಲರು ನನ್ನನ್ನು ಸ್ವಂತ ಮಗಳಂತೆ ಭಾವಿಸಿ ಮಾತುಗಳನ್ನು ಕೇಳಿದರು’ ಎಂದು ಕಂಗನಾ ಹೇಳಿದ್ದಾರೆ. ಮುಂಬೈನ ಪಾಲಿಹಿಲ್​ನಲ್ಲಿರುವ ಕಂಗನಾರ ಮಣಿಕರ್ಣಿಕ ಚಿತ್ರದ ಪೊ›ಡಕ್ಷನ್ ಹೌಸ್ ಅನ್ನು ಬೃಹನ್ ಮುಂಬೈ ಮಹಾನಗರ ಪಾಲಿಕೆ ಅಧಿಕಾರಿಗಳು ಧ್ವಂಸಗೊಳಿಸಿದ ಕ್ರಮದ ಬಗ್ಗೆ ರಾಜ್ಯಪಾಲ ಕೋಶ್ಯಾರಿ ಅಸಮಾಧಾನ ವ್ಯಕ್ತಪಡಿಸಿದ್ದರು. ಜತೆಗೆ ಸಿಎಂ ಉದ್ಧವ್ ಠಾಕ್ರೆಯವರ ಸಲಹೆಗಾರರನ್ನು ಕರೆಸಿಕೊಂಡು ಬಿಎಂಸಿ ಕ್ರಮದ ಬಗ್ಗೆಚರ್ಚಿಸಿದ್ದರು.ಇದನ್ನೂ ಓದಿ:ಹೊಸ ಪಾತ್ರದ ಮೂಲಕ ಐಪಿಎಲ್‌ಗೆ ಮರಳಿದ ಮೂವರು ಕ್ರಿಕೆಟಿಗರು
ಬಿಜೆಪಿ ಬೆಂಬಲ ದುರದೃಷ್ಟಕರ
ಮುಂಬೈಯನ್ನು ಪಾಕಿಸ್ತಾನ ಆಕ್ರಮಿತ ಕಾಶ್ಮೀರಕ್ಕೆ (ಪಿಒಕೆ) ಹೋಲಿಸಿದವರಿಗೆ ಬಿಜೆಪಿ ಬೆಂಬಲ ನೀಡುತ್ತಿರುವುದು ದುರದೃಷ್ಟಕರ ಎಂದು ಶಿವಸೇನೆ ಸಂಸದ ಸಂಜಯ್ ರಾವುತ್ ಹೇಳಿದ್ದಾರೆ. ಇದೇ ವೇಳೆ ಕಂಗನಾ ವಿರುದ್ಧ ಪರೋಕ್ಷವಾಗಿ ಹರಿಹಾಯ್ದಿರುವ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ, ತಮ್ಮ ಮೌನವನ್ನು ಅಸಹಾಯಕತೆ ಎಂದು ಭಾವಿಸಬೇಡಿ. ರಾಜಕೀಯ ಬಿರುಗಾಳಿಗಳು ಬರುತ್ತಲೇ ಇರುತ್ತವೆ ಹಾಗೂ ತಾವು ಅದನ್ನು ಎದುರಿಸುತ್ತಲೇ ಇರುತ್ತೇವೆ ಎಂದಿದ್ದಾರೆ.
https://www.vijayavani.net/sanjana-called-sheikh-fazil-before-arrest/
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen − ten =
Remember me
