|ಪ್ರೊ.ಜಿ.ಹೇಮಂತಕುಮಾರ್ಕುಲಪತಿ, ಮೈಸೂರು ವಿಶ್ವವಿದ್ಯಾಲಯ
ಕೇಂದ್ರ ಸರ್ಕಾರದ ಬಜೆಟ್ ದೇಶದ ಉನ್ನತ ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ ಒತ್ತು ನೀಡಿದೆ. ನೂತನ ರಾಷ್ಟ್ರೀಯ ಶಿಕ್ಷ್ಷ ನೀತಿ (ಎನ್​ಇಪಿ) ಅಡಿಯಲ್ಲಿ 15,000 ಶಾಲೆಗಳ ಸಬಲೀಕರಣ, 1,000 ಸೈನಿಕ್ ಶಾಲೆಗಳ ಸ್ಥಾಪನೆ, ಬುಡಕಟ್ಟು ಪ್ರದೇಶಗಳಲ್ಲಿ 750 ಏಕಲವ್ಯ ಶಾಲೆಗಳ ಸ್ಥಾಪನೆ, ಲಡಾಕ್​ನಲ್ಲಿ ಸೆಂಟ್ರಲ್ ಯುನಿವರ್ಸಿಟಿಯನ್ನು ಸ್ಥಾಪಿಸುವ ಉದ್ದೇಶ ಸ್ವಾಗತಾರ್ಹ. ಈ ಕ್ರಮಗಳಿಂದಾಗಿ ಶಿಕ್ಷಣ ಕ್ಷೇತ್ರಕ್ಕೆ ಕೇಂದ್ರ ಸರ್ಕಾರ ಉತ್ತಮವಾಗಿ ಸ್ಪಂದಿಸಿದೆ ಎನ್ನಬಹುದು.
ಉನ್ನತ ಶಿಕ್ಷಣ ಆಯೋಗವನ್ನು 9 ನಗರಗಳಲ್ಲಿ ರಚಿಸಲಿದ್ದು, ಇವು ಸ್ಟ್ಯಾಂಡರ್ಡ್-ಸೆಟ್ಟಿಂಗ್, ಮಾನ್ಯತೆ, ನಿಯಂತ್ರಣ ಮತ್ತು ಧನಸಹಾಯಕ್ಕಾಗಿ ಇರುವ ಸಂಸ್ಥೆಗಳಾಗಿ ಕಾರ್ಯನಿರ್ವಹಿಸಲಿರುವುದು ಸ್ವಾಗತಾರ್ಹವಾದ ವಿಷಯ. ಎನ್​ಇಪಿ ಅಡಿಯಲ್ಲಿ ಅಂತಾರಾಷ್ಟ್ರೀಯ ಸಂಶೋಧನಾ ಸಹಯೋಗ ಮತ್ತು ಉನ್ನತ ಶಿಕ್ಷಣ ಆಯೋಗಕ್ಕೆ ಒತ್ತು ನೀಡಲಾಗಿದೆ. ಆತ್ಮ ನಿರ್ಭರ ಭಾರತಕ್ಕಾಗಿ ದೇಶೀಯ ಶಿಕ್ಷಣ ತಂತ್ರಜ್ಞಾನ ಕಂಪನಿಗಳನ್ನು ಉತ್ತೇಜಿಸುವ ಸರ್ಕಾರದ ಕ್ರಮವು ಸೂಕ್ತವಾಗಿದೆ ಮತ್ತು ಸ್ವಾಗತಾರ್ಹವೂ ಆಗಿದೆ.
ಇಡೀ ವಿಶ್ವವನ್ನೇ ತಲ್ಲಣಗೊಳಿಸಿದ ಕೋವಿಡ್-19 ಸಮಸ್ಯೆ ಉನ್ನತ ಶಿಕ್ಷಣ ಕ್ಷೇತ್ರವನ್ನು ಗಮನಾರ್ಹವಾಗಿ ತೊಂದರೆಗೀಡುಮಾಡಿದೆ. ಜತೆಗೆ ವಿದೇಶಿ ವಿದ್ಯಾರ್ಥಿಗಳ ಪ್ರವೇಶಾತಿಗಾಗಿ ತೊಡಕನ್ನುಂಟುಮಾಡಿದೆ. ಇಂತಹ ವಿಷಯಗಳು ಅಂತಾರಾಷ್ಟ್ರೀಯ ಉನ್ನತ ಶಿಕ್ಷಣದ ಬೇಡಿಕೆಯಲ್ಲಿ ಇಳಿಕೆಗೆ ಕಾರಣವಾಗಬಹುದು. ಚೀನಾದ ನಂತರ ಭಾರತೀಯ ಯುವಕರು ಉನ್ನತ ಶಿಕ್ಷ್ಷಕ್ಕಾಗಿ ವಿದೇಶಿ ದಾಖಲಾತಿಯಲ್ಲಿ 2ನೇ ಅತಿದೊಡ್ಡ ಸಮುದಾಯವಾಗಿದ್ದಾರೆ. ಬಜೆಟ್ ವಿದೇಶಿ ನೇರ ಹೂಡಿಕೆಗೆ (ಎಫ್​ಡಿಐ) ಅವಕಾಶ ನೀಡಿದ್ದರು ಸಹ ಹೆಚ್ಚಿನ ಪ್ರೋತ್ಸಾಹದೊಂದಿಗೆ ಭಾರತದಲ್ಲಿ ವಿದೇಶಿ ವಿಶ್ವವಿದ್ಯಾಲಯಗಳ ವೇಗದ ಉಪಸ್ಥಿತಿಯನ್ನು ಉತ್ತೇಜಿಸುವ ಅಗತ್ಯವಿದೆ.
ಕೋವಿಡ್-19 ಸಾಂಕ್ರಾಮಿಕವು ಶಿಕ್ಷಣದಲ್ಲಿ ಅಸಮಾನತೆಯನ್ನು ಹೆಚ್ಚಿಸಿದೆ. ಡಿಜಿಟಲ್ ಅಂತರವನ್ನು ವಿಸ್ತರಿಸಿದೆ. ಆದ್ದರಿಂದ ಶೈಕ್ಷಣಿಕ ಅಸಮಾನತೆಯನ್ನು ಕಡಿಮೆ ಮಾಡುವಲ್ಲಿ ತೀವ್ರವಾಗಿ ವಿಫಲವಾದ ಆನ್​ಲೈನ್ ಪ್ಲಾಟ್​​ಫಾರ್ಮ್​ಗಳು ಮತ್ತು ಅಸ್ತಿತ್ವದಲ್ಲಿರುವ ಎಐ ಪ್ರೊಕ್ಟರಿಂಗ್ ವ್ಯವಸ್ಥೆಗಳನ್ನು ಮೀರಿ ಇನ್ನೂ ಹೆಚ್ಚಿನದನ್ನು ಸಾಧಿಸುವ ಅವಶ್ಯಕತೆ ಇದೆ. ಈ ಬಗ್ಗೆ ಹೆಚ್ಚಿನ ಗಮನಹರಿಸುವುದು ಅಗತ್ಯವಾಗಿದೆ. ನೂತನ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಸೂಚಿಸಿರುವಂತೆ ಅಸ್ತಿತ್ವದಲ್ಲಿರುವ ರಾಷ್ಟ್ರೀಯ ಸಂಸ್ಥೆ ಮತ್ತು ಕೌಶಲಾಭಿವೃದ್ಧಿಗಾಗಿ ವಿಶ್ವವಿದ್ಯಾಲಯಗಳಲ್ಲಿ ಗುಣಮಟ್ಟದ ಶಿಕ್ಷಣ ತಜ್ಞರೊಂದಿಗೆ ಹೊಸ ಇಲಾಖೆಗಳನ್ನು ಸ್ಥಾಪಿಸಲು ಹೆಚ್ಚಿನ ಹಣವನ್ನು ವಿನಿಯೋಗಿಸಬೇಕಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two + seven =
Remember me
