|ಪಿ.ಎಸ್. ಶ್ರೀಕಂಠದತ್ತಅಧ್ಯಕ್ಷ, ಲಘು ಉದ್ಯೋಗ ಭಾರತಿ-ಕರ್ನಾಟಕ
ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿರುವ ಆಯವ್ಯಯದಲ್ಲಿ ಸೂಕ್ಷ್ಮ ಹಣಕಾಸು ವ್ಯವಸ್ಥೆಗೆ ಉತ್ತೇಜನ ನೀಡುವ ಮೂಲಕ ದೇಶದ ಬೆಳವಣಿಗೆಗೆ ಪೂರಕವಾಗುವಂತೆ ನೋಡಿಕೊಂಡಿದ್ದಾರೆ. ಪ್ರಮುಖ ವಲಯಗಳಾದ ಮೂಲಸೌಕರ್ಯ, ಆರೋಗ್ಯ, ಕೃಷಿ, ಗ್ರಾಮೀಣ ವಲಯಗಳ ಬೆಳವಣಿಗೆಗೆ ಒತ್ತು ನೀಡಿರುವುದು ದೇಶ ಎದುರಿಸುತ್ತಿರುವ ಸಂಕಷ್ಟವನ್ನು ದೂರ ಮಾಡಲು ಸಹಕಾರಿಯಾಗಲಿದೆ. ಕೃಷಿ, ಕೈಗಾರಿಕೆ ಹೀಗೆ ವಿವಿಧ ವಲಯಗಳಲ್ಲಿ ಮೂಲಸೌಕರ್ಯಗಳನ್ನು ಹೆಚ್ಚಿಸಲು ಆದ್ಯತೆ ನೀಡಿರುವುದರಿಂದ ಉದ್ಯೋಗ ಸೃಷ್ಟಿಗೆ ಅವಕಾಶ ಲಭ್ಯವಾಗಲಿದೆ. ಆರ್ಥಿಕ ಆದಾಯವನ್ನು ಸಮಾನವಾಗಿ ವಿತರಣೆ ಮಾಡುವ ಮೂಲಕ ಆರ್ಥಿಕ ಪರಿಸ್ಥಿತಿಯನ್ನು ಸರಿದಾರಿಯಲ್ಲಿ ಕಟ್ಟುವ ಸಮಯ ಇದಾಗಿದೆ ಎಂಬುದನ್ನು ಎಲ್ಲ ವಲಯಗಳನ್ನು ಸಮಾನವಾಗಿ ನೋಡುವ ಮೂಲಕ ನಿರೂಪಿಸಿದ್ದಾರೆ. ವಿಮಾ ವಲಯದಲ್ಲಿ ವಿದೇಶಿ ನೇರ ಹೂಡಿಕೆಗೆ ಅವಕಾಶ, ಮೂಲಸೌಕರ್ಯಕ್ಕೆ ಆಸ್ತಿಗಳ ಸದ್ಬಳಕೆ, ರೈಲ್ವೆ, ರಸ್ತೆ, ಆರ್ಥಿಕ ಮತ್ತು ಲಾಜಿಸ್ಟಿಕ್ ಕಾರಿಡಾರ್​ಗಳಿಂದ ಜಾಗತಿಕ ಮಟ್ಟದಲ್ಲಿ ಬೆಳವಣಿಗೆ ಸಾಧಿಸಿ ಎಂಎಸ್​ಎಂಇ ಹಾಗೂ ಬೃಹತ್ ಕೈಗಾರಿಕೆ ಕ್ಷೇತ್ರಕ್ಕೆ ಹೂಡಿಕೆ ಹೆಚ್ಚಾಗಲು ಸಹಕಾರಿಯಾಗುತ್ತದೆ. ರಸ್ತೆ, ರೈಲ್ವೆ, ಹೆದ್ದಾರಿಗಳಿಗೆ ಅನುದಾನ ಹೆಚ್ಚಿಸಿರುವುದರಿಂದ ಆರ್ಥಿಕ ಪುನಶ್ಚೇತನಕ್ಕೆ ಅನುಕೂಲಕರವಾಗಿದೆ. ಮೆಟ್ರೋ, ರಸ್ತೆ ಹಾಗೂ ಸಾರ್ವಜನಿಕ ಸಾರಿಗೆಗೆ ಆದ್ಯತೆ ನೀಡಿರುವುದರಿಂದ ಉದ್ಯೋಗ ಅವಕಾಶ ಹೆಚ್ಚುವುದನ್ನು ನಿರೀಕ್ಷೆ ಮಾಡಬಹುದಾಗಿದೆ. ಸಾರಿಗೆ ವಲಯಕ್ಕೆ ಸ್ಪಲ್ವ ಮಟ್ಟಿನ ಅನುದಾನ ಹೆಚ್ಚಳದಿಂದ ಸರಕು ಸಾಗಣೆಗೆ, ಗುಜರಿ ನೀತಿಯನ್ನು ಸರ್ಕಾರ ಪ್ರಕಟಿಸಿರುವುದರಿಂದ ಉತ್ಪಾದನಾ ವಲಯಕ್ಕೆ ಅನುಕೂಲವಾಗಲಿದೆ. ನಗರ ಪ್ರದೇಶಗಳಲ್ಲಿ ವಾಯುಮಾಲಿನ್ಯ ನಿಯಂತ್ರಣ ಮಾಡುವುದರಿಂದ ಬಂಡವಾಳ ಹೂಡುವವರನ್ನು ಆಹ್ವಾನಿಸಬಹುದಾಗಿದೆ. ರಿಯಲ್ ಎಸ್ಟೇಟ್ ಮತ್ತು ಹೂಡಿಕೆ ವಲಯದಲ್ಲಿ ಹೆಚ್ಚಿನ ಬೆಳವಣಿಗೆ ಸಾಧಿಸುವ ಉದ್ದೇಶದಿಂದ ಕೆಲವೊಂದು ತಿದ್ದುಪಡಿಗಳನ್ನು ತರಲಾಗಿದೆ. ಇದು ದೇಶದಲ್ಲಿನ ಬಹುಮುಖಿ ಅಭಿವೃದ್ಧಿಗೆ ಸಹಕಾರಿಯಾಗುವ ದೂರದೃಷ್ಟಿಯನ್ನು ಹೊಂದಿದೆ. ಕರೊನಾದಿಂದ ಸಂಕಷ್ಟಕ್ಕೆ ಒಳಗಾಗಿರುವ ರಿಯಲ್ ಎಸ್ಟೇಟ್ ಉದ್ಯಮದ ಬೆಳವಣಿಗೆಗೂ ಅನುಕೂಲವಾಗಲಿದೆ. ವಿದೇಶಿ ಹೂಡಿಕೆಗೆ ಹೆಚ್ಚು ಅವಕಾಶ ನೀಡುತ್ತಿರುವುದರಿಂದ ದುಡಿಯುವ ಬಂಡವಾಳ ಲಭ್ಯವಾಗಲಿವೆ. ಉದ್ದಿಮೆಗಳ ಬೆಳವಣಿಗೆ ದೃಷ್ಠಿಯಿಂದ ಇದೊಂದು ಅತ್ಯುತ್ತಮ ನಿರ್ಧಾರವಾಗುತ್ತದೆ.
ಜಿಎಸ್​ಟಿ ಅನುಷ್ಠಾನದಲ್ಲಿ ತಡೆರಹಿತ ಹಾಗೂ ಏಕೀಕೃತವಾದ ಸುಧಾರಣೆಗಳಿಂದ ಸರ್ಕಾರ ಕೆಲವೊಂದು ಕಠಿಣ ಸುಧಾರಣೆಗಳನ್ನು ತರಲು ಹಿಂಜರಿಯಲಾರದು, ಸರ್ಕಾರ ಸುಧಾರಣೆಗಳ ಪರವಾಗಿದೆ ಮತ್ತು ಅದರಿಂದ ಅನುಕೂಲವಾಗುತ್ತದೆ ಎಂಬ ಭಾವನೆಯನ್ನು ಮೂಡಿಸಲಾಗುತ್ತದೆ. ಕೇಂದ್ರ ಜಾರಿಗೆ ತಂದಿರುವ ಆತ್ಮನಿರ್ಭರ ಮಿಷನ್​ನಂತೆಯೇ ಎಲ್ಲ ಕ್ಷೇತ್ರಗಳ ಅಭಿವೃದ್ಧಿಯನ್ನು ಕೈಗೊಳ್ಳಲಾಗುತ್ತದೆ ಎಂದು ಬಜೆಟ್​ನಲ್ಲಿ ನಿರ್ಮಲಾ ಸೀತಾರಾಮನ್ ತೋರಿಸಿದ್ದಾರೆ. ಸ್ಥಿರವಾದ, ಊಹಿಸಬಹುದಾದ ಸುಧಾರಣೆಯ ಕ್ರಮಗಳ ಮೂಲಕ ಶೇ.7ರಷ್ಟು ಬೆಳವಣಿಗೆಯನ್ನು ಸಾಧಿಸಬಹುದು ಎಂಬ ಆಶಾಭಾವನೆ ಮೂಡಿದೆ. ಬೆಳೆಯುತ್ತಿರುವ ಮಾರುಕಟ್ಟೆಗೆ ಬಜೆಟ್​ನಲ್ಲಿರುವ ಘೋಷಣೆಗಳು ಅನುಕೂಲಕರವಾಗಿವೆ ಎಂಬುದನ್ನು ಕಾಣಬಹುದಾಗಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:10 + 16 =
Remember me
