ನವದೆಹಲಿ:ಕೆಲವು ದಿನಗಳ ಹಿಂದೆ ಭಾರತದ ಕಂಪನಿಯೊಂದರ ಕಾಫ್​ ಸಿರಪ್​ ವಿದೇಶದಲ್ಲಿ ಮಕ್ಕಳ ಸಾವಿಗೆ ಕಾರಣವಾದ ಪ್ರಸಂಗವೊಂದು ನಡೆದಿತ್ತು. ಈಗ ಅದೇ ಜಾಡಿನಲ್ಲಿ ಐ ಡ್ರಾಪ್ಸ್​ ಆತಂಕ ಹುಟ್ಟಿಸಿದ್ದು, ಅದನ್ನು ಬಳಸಿದರೆ ದೃಷ್ಟಿ ಕಳೆದುಕೊಳ್ಳುವ ಅದರಲ್ಲೂ ತೀರಾ ಗ್ರಹಚಾರ ಕೆಟ್ಟಿದ್ದರೆ ಪ್ರಾಣವೂ ಹೋಗಬಹುದಾದ ಸಾಧ್ಯತೆ ಇದೆ ಎನ್ನಲಾಗಿದೆ.
ಭಾರತ ಮೂಲದ ಔಷಧ ಉತ್ಪಾದಕ ಕಂಪನಿ ಗ್ಲೋಬಲ್ ಫಾರ್ಮಾದ ಎಝ್ರಿಕೇರ್​ (EzriCare) ಐ ಡ್ರಾಪ್ಸ್​ ಕುರಿತು ಈ ಅಪವಾದ ಕೇಳಿಬಂದಿದೆ. ಯುಎಸ್​ ಫುಡ್ ಆ್ಯಂಡ್ ಡ್ರಗ್​ ಅಡ್ಮಿನಿಸ್ಟ್ರೇಷನ್​ ಹಾಗೂ ಸೆಂಟರ್ಸ್​​ ಫಾರ್​ ಡಿಸೀಸ್ ಕಂಟ್ರೋಲ್​ ಆ್ಯಂಡ್ ಪ್ರಿವೆನ್ಷನ್​ ಎರಡೂ ಈ ಕುರಿತು ಎಚ್ಚರಿಕೆ ನೀಡಿವೆ. ಇಝ್ರಿಕೇರ್​ ಆರ್ಟಿಫಿಷಿಯಲ್ ಟಿಯರ್ಸ್ (EzriCare Artificial Tears)​ ಅಥವಾ ಡೆಲ್ಸಮ್ ಫಾರ್ಮಾಸ್ ಆರ್ಟಿಫಿಷಿಯಲ್ ಟಿಯರ್ಸ್ (Delsam Pharma’s Artificial Tears)​ ಬಳಸದಂತೆ ಇವು ಎಚ್ಚರಿಕೆ ನೀಡಿವೆ.
ಈ ಐ ಡ್ರಾಪ್ಸ್​ಗಳಿಂದ ತೀವ್ರ ಅನಾರೋಗ್ಯ ಕಂಡುಬಂದಿರುವ ಹಿನ್ನೆಲೆಯಲ್ಲಿ ಅಲ್ಲಿ ಇವುಗಳನ್ನು ಕಂಪನಿ ವಾಪಸ್ ಪಡೆದಿದೆ. ಯುಎಸ್​ನಲ್ಲಿ ಇವುಗಳನ್ನು ಬಳಸಿದ 50ಕ್ಕೂ ಅಧಿಕ ಮಂದಿ ಸೋಂಕಿಗೆ ಒಳಗಾಗಿದ್ದು, ಕೆಲವು ಶಾಶ್ವತವಾಗಿ ದೃಷ್ಟಿ ಕಳೆದುಕೊಂಡಿದ್ದಾರೆ. ಕೆಲವೊಂದು ಗಂಭೀರ ಸಂದರ್ಭಗಳಲ್ಲಿ ರಕ್ತದಲ್ಲಿ ಸೋಂಕು ಉಂಟಾಗಿ ಸಾವೂ ಸಂಭವಿಸಿದೆ ಎನ್ನಲಾಗಿದೆ.
ಸಿಟ್ಟು ಸಿಕ್ಕಾಪಟ್ಟೆ ಹೆಚ್ಚಾಗಲೆಂದು 2 ತಿಂಗಳು ಔಷಧ ಬಿಟ್ಟಿದ್ದ; ಸಚಿವರನ್ನು ಕೊಂದ ಎಎಸ್​ಐ ಬಾಯ್ಬಿಟ್ಟ ರಹಸ್ಯ

ಮದುವೆ ದಿನವೇ ಫಿಸಿಯೋಥೆರಪಿ ಎಕ್ಸಾಂ; ವಿವಾಹದ ದಿರಿಸಿನಲ್ಲೇ ಪರೀಕ್ಷೆಗೆ ಬಂದ ವಧು

2021ರಲ್ಲಿ ನಾಪತ್ತೆಯಾಗಿದ್ದ 14 ವರ್ಷದ ಹುಡುಗಿ ಗರ್ಭಿಣಿಯಾಗಿ ಪತ್ತೆ!

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:ten + twelve =
Remember me
