ತಮಿಳುನಾಡಿನಲ್ಲಿರುವ ಡಿಫೆನ್ಸ್​ ಸವಿರ್ಸ್​ ಸ್ಟಾಫ್‌ ಕಾಲೇಜಿನಲ್ಲಿ​ (ಡಿಎಸ್​ಎಸ್​ಸಿ) ವಿವಿಧ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿ ಅಧಿಸೂಚನೆ ಹೊರಡಿಸಲಾಗಿದೆ. ಲಿಖಿತ ಪರೀಕ್ಷೆಗೆ ಹಾಜರಾಗುವ ಅಭ್ಯಥಿರ್ಗಳು ಕಡ್ಡಾಯವಾಗಿ ಕರೊನಾ ನಿಯಮಾವಳಿ ಪಾಲಿಸಲು ಸೂಚಿಸಲಾಗಿದೆ. ಹಲವು ಹುದ್ದೆಗೆ ಅಜಿರ್ ಸಲ್ಲಿಸಲುವ ಅಭ್ಯರ್ಥಿಗಳು ಪ್ರತ್ಯೇಕ ಅರ್ಜಿ ಸಲ್ಲಿಸಲು ಸೂಚಿಸಲಾಗಿದೆ.
ಒಟ್ಟು ಹುದ್ದೆಗಳು: 83
ಹುದ್ದೆ ವಿವರ* ಸ್ಟೆನೋಗ್ರಫರ್​ ಗ್ರೇಡ್​ 2 – 4* ಲೋವರ್​ ಡಿವಿಷನ್​ ಕ್ಲರ್ಕ್​ (ಎಲ್​ಡಿಸಿ) – 10* ಸಿವಿಲಿಯನ್​ ಮೋಟಾರ್​ ಡೆವರ್​ (ಆಡಿರ್ನರಿ ಗ್ರೇಡ್​) – 7* ಸುಖಾನಿ – 1* ಕಾರ್ಪೆಂಟರ್​ – 1* ಮಲ್ಟಿ ಟಾಸ್ಕಿಂಗ್​ ಸ್ಟಾಫ್​ ಆಫೀಸ್​ ಆ್ಯಂಡ್​ ಟೆನಿಂಗ್​ – 60
ವಿದ್ಯಾರ್ಹತೆ:ಸ್ಟೆನೋಗ್ರಫರ್​ ಹುದ್ದೆಗೆ ದ್ವೀತಿಯ ಪಿಯುಸಿ ಉತ್ತೀರ್ಣರಾಗಿದ್ದು, 10 ನಿಮಿಷದಲ್ಲಿ 80 ಪದ ಡಿಕ್ಟೇಷನ್​ ಹಾಗೂ 50 ನಿಮಿಷದಲ್ಲಿ ಇಂಗ್ಲಿಷ್​ ಹಾಗೂ 65 ನಿಮಿಷದಲ್ಲಿ ಹಿಂದಿ ಟ್ರಾನ್ಸ್​ಕ್ರಿಷನ್​ ಮಾಡಲು ತಿಳಿದಿರಬೇಕು. ಎಲ್​ಡಿಸಿ ಹುದ್ದೆಗೆ ದ್ವೀತಿಯ ಪಿಯುಸಿ ಜತೆ ಪ್ರತಿ ನಿಮಿಷಕ್ಕೆ 35 ಪದ ಟೈಪ್​ ಮಾಡುವ ವೇಗ ಹೊಂದಿರಬೇಕು. ಡೆವರ್​ ಹುದ್ದೆಗೆ ದ್ವೀತಿಯ ಪಿಯು ಜತೆ ಚಾಲನಾ ಪರವಾನಗಿ ಹೊಂದಿರಬೇಕು. ಸುಖಾನಿಗೆ ದ್ವೀತಿಯ ಪಿಯು ಜತೆ ಈಜುವ ಪ್ರಮಾಣಪತ್ರ, ನೌಕಾಯಾನ ಜ್ಞಾನ / ಸಣ್ಣ ದೋಣಿ ಚಲಾಯಿಸಿರುವ 2 ವರ್ಷದ ವೃತ್ತಿ ಅನುಭವ ಅವಶ್ಯ. ಕಾರ್ಪೆಂಟರ್​ಗೆ ದ್ವೀತಿಯ ಪಿಯು/ ಕಾರ್ಪೆಂಟರ್​ ಆಗಿ ಇಂಡಸ್ಟ್ರಿಯಲ್​ ಟ್ರೇನಿಂಗ್​ ಇನ್​ಸ್ಟಿಟ್ಯೂಟ್​ನಲ್ಲಿ ಪ್ರಮಾಣ ಪತ್ರ ಪಡೆದಿರಬೇಕು. ಮಲ್ಟಿ ಟಾಸ್ಕಿಂಗ್​ ಹುದ್ದೆಗೆ ಪ್ರೌಢಶಿಕ್ಷಣ ಪಡೆದಿರಬೇಕು.
ವಯೋಮಿತಿ:ಎಲ್ಲ ಹುದ್ದೆಗಳಿಗೂ ಕನಿಷ್ಠ ವಯೋಮಿತಿ 18 ವರ್ಷ ಇದೆ. ಸ್ಟೆನೋಗ್ರಫರ್​, ಲೋವರ್​ ಡಿವಿಷನ್​ ಕ್ಲರ್ಕ್​, ಡೆವರ್​ ಹುದ್ದೆಗೆ ಗರಿಷ್ಠ ವಯೋಮಿತಿ 27 ವರ್ಷ, ಉಳಿದ ಹುದ್ದೆಗಳಿಗೆ ಗರಿಷ್ಠ ವಯೋಮಿತಿ ಗರಿಷ್ಠ 25 ವರ್ಷ ನಿಗದಿಪಡಿಸಲಾಗಿದೆ. ಮೀಸಲಾತಿ ಅಭ್ಯರ್ಥಿಗಳಿಗೆ ವಯೋ ಸಡಿಲಿಕೆ ಇದೆ.
ಮೀಸಲಾತಿ:ಸಾಮಾನ್ಯವರ್ಗದ ಅಭ್ಯರ್ಥಿಗೆ 37 ಸ್ಥಾನ, ಇತರ ಹಿಂದುಳಿದ ವರ್ಗಕ್ಕೆ 30, ಎಸ್ಸಿಗೆ 7, ಎಸ್ಟಿಗೆ 3, ಆಥಿರ್ಕವಾಗಿ ದುರ್ಬಲವಾಗಿರುವ ಅಭ್ಯರ್ಥಿಗಳಿಗೆ 6 ಸ್ಥಾನ ಮೀಸಲಿರಿಸಲಾಗಿದೆ.
ವೇತನ:ಸ್ಟೆನೋಗ್ರರ್​ಗೆ ಮಾಸಿಕ 25,500-81,100 ರೂ. ವೇತನ ಇದೆ, ಮಲ್ಟಿ ಟಾಸ್ಕಿಂಗ್​ ಸ್ಟಾಫ್‌ಗೆ ಮಾಸಿಕ 18,000 ರೂ.ನಿಂದ 56,900 ರೂ. ವೇತನ ನೀಡಲಾಗುವುದು. ಉಳಿದ ಹುದ್ದೆಗಳಿಗೆ ಮಾಸಿಕ 19,900 ರೂ. ನಿಂದ 63,200 ರೂ. ವೇತನ ನೀಡಲಾಗುವುದು.
ಆಯ್ಕೆ ಪ್ರಕ್ರಿಯೆ:ಶೈಕ್ಷಣಿಕ ಅಂಕ, ಮೀಸಲಾತಿ, ವಯಸ್ಸು ಆಧರಿಸಿ ಶಾರ್ಟ್​ ಲಿಸ್ಟ್​ ಮಾಡಲಾದ ಅಭ್ಯರ್ಥಿಗಳನ್ನು ಇಂಗ್ಲಿಷ್​ ಮತ್ತು ಹಿಂದಿ ಭಾಷೆಯಲ್ಲಿರುವ ಲಿಖಿತ ಪರೀಕ್ಷೆ ಆಹ್ವಾನಿಸಲಾಗುವುದು. ನಂತರ ಕೌಶಲ ಪರೀಕ್ಷೆ/ ಫಿಜಿಕಲ್​ ಪರೀಕ್ಷೆ ನಡೆಸಿ ಅಂತಿಮ ಆಯ್ಕೆ ಮಾಡಲಾಗುವುದು. ಲಿಖಿತ ಪರೀಕ್ಷೆಯು ವೆಲ್ಲಿಂಗ್​ಟನ್​ನಲ್ಲಿ ನಡೆಯಲಿದೆ.
ಅರ್ಜಿ ಸಲ್ಲಿಸಲು ಕೊನೇ ದಿನ: 22.5.2021ಅಧಿಸೂಚನೆಗೆ:https://bit.ly/3xzAd6Vಮಾಹಿತಿಗೆ:http://www.dssc.gov.in
ಸಿವಿಲ್‌, ಮೆಕ್ಯಾನಿಕಲ್‌, ಇಲೆಕ್ಟ್ರಿಕಲ್‌ ಇಂಜಿನಿಯರಿಂಗ್‌ ಪದವೀಧರರಿಂದ ಅರ್ಜಿ ಆಹ್ವಾನ

ಕೇಂದ್ರ ಸರ್ಕಾರಿ ಸ್ವಾಮ್ಯದ ಕಂಪೆನಿಯಲ್ಲಿ ಡಿಪ್ಲೊಮಾ ಪದವೀಧರರಿಗೆ ಭರ್ಜರಿ ಅವಕಾಶ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three + 8 =
Remember me
