ನವದೆಹಲಿ:ರಾಷ್ಟ್ರಾದ್ಯಂತ ಕೋವಿಡ್​-19 ಪಿಡುಗು ದಿನೇದಿನೆ ಹೆಚ್ಚಾಗುತ್ತಿದ್ದರೂ ಫೇಸ್​ ಮಾಸ್ಕ್​ ಮತ್ತು ಹ್ಯಾಂಡ್​ ಸ್ಯಾನಿಟೈಸರ್​ಗಳು ಅಗತ್ಯವಸ್ತುಗಳಲ್ಲ. ಅವುಗಳ ಪೂರೈಕೆ ಹೆಚ್ಚಾಗಿರುವ ಕಾರಣ ಅಗತ್ಯವಸ್ತುಗಳ ಕಾಯ್ದೆ, 1955ರಿಂದ ಅವನ್ನು ಹೊರಗಿಡುತ್ತಿರುವುದಾಗಿ ಕೇಂದ್ರ ಗ್ರಾಹಕ ವ್ಯವಹಾರಗಳ ಕಾರ್ಯದರ್ಶಿ ಲೀನಾ ನಂದನ್​ ಹೇಳಿದ್ದಾರೆ.
2020ರ ಮಾರ್ಚ್​ 13ರಂದು ಮಾಸ್ಕ್​ ಮತ್ತು ಸ್ಯಾನಿಟೈಸರ್​ಗಳನ್ನು 100 ದಿನಗಳಿಗೆ ಅಗತ್ಯವಸ್ತುಗಳು ಎಂದು ಘೋಷಿಸಿ ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವಾಲಯ ಆದೇಶ ಹೊರಡಿಸಿತ್ತು. ಇವುಗಳ ಪೂರೈಕೆಯನ್ನು ಉತ್ತೇಜಿಸುವ ಜತೆಗೆ ಕಾಳಸಂತೆ ಮಾರಾಟವನ್ನು ತಡೆಗಟ್ಟುವುದು ಇದರ ಉದ್ದೇಶವಾಗಿತ್ತು.
ಇದನ್ನೂ ಓದಿ:ನೇಪಾಳದ ರಾಜಕೀಯ ರಂಗಸ್ಥಳಕ್ಕೆ ಚೀನಾದ ನೇರ ಪ್ರವೇಶ, ವಿವಾದದಲ್ಲಿ ಚೀನಾ ರಾಯಭಾರಿ
ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಲೀನಾ ನಂದನ್​, ಜೂ.30ರವರೆಗೆ ಇವರೆಡನ್ನೂ ಅಗತ್ಯವಸ್ತುಗಳು ಎಂದು ಪರಿಗಣಿಸಲಾಗಿತ್ತು. ಈ ನಿರ್ಧಾರವನ್ನು ಮತ್ತೆ ವಿಸ್ತರಿಸದಿರಲು ಈಗ ನಿರ್ಧರಿಸಲಾಗಿದೆ. ರಾಷ್ಟ್ರಾದ್ಯಂತ ಇವುಗಳ ಬೇಡಿಕೆ ಮತ್ತು ಪೂರೈಕೆಯಲ್ಲಿ ಸಮತೋಲನ ಕಂಡುಬಂದಿದೆ ಎಂದು ಹೇಳಿದ್ದಾರೆ.
ಎಲ್ಲ ರಾಜ್ಯ ಸರ್ಕಾರಗಳೊಂದಿಗೆ ಚರ್ಚಿಸಿದ ಬಳಿಕ ಈ ನಿರ್ಧಾರ ಕೈಗೊಳ್ಳಲಾಗಿದೆ. ಎಲ್ಲ ರಾಜ್ಯಗಳಲ್ಲೂ ಈ ಎರಡು ವಸ್ತುಗಳು ಹೆಚ್ಚಿನ ಸಂಖ್ಯೆಯಲ್ಲಿ ಲಭ್ಯವಿದೆ. ಎಲ್ಲಿಯೂ ಕೊರತೆ ಕಂಡುಬಂದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಎಂಸಿಎ ಇನ್ನು ಎರಡು ವರ್ಷದ ಕೋರ್ಸ್​; ಎಇಸಿಟಿಇ ಆದೇಶ; ಹೇಗಿರಲಿದೆ ಪಠ್ಯಕ್ರಮ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 + two =
Remember me
