ತ್ರಿಶೂರ್​:ರಸ್ತೆಯಲ್ಲಿ ಸಂಚರಿಸುವ ವೇಳೆ ಏಕಾಏಕಿ ಆನೆ ಎದುರಾದರೆ ಏನಾಗಬಹುದು, ಇಂತಹದ್ದೇ ಘಟನೆಯೊಂದು ಕೇರಳದಲ್ಲಿ ನಡೆದಿದೆ.
ರಸ್ತೆಯಲ್ಲಿ ಬೈಕ್​ ಸವಾರ ತನ್ನ ಪಾಡಿಗೆ ತಾನು ಹೋಗುತ್ತಿದ್ದ, ಇದೇ ವೇಳೆ ತನ್ನ ಎದುರೇ ಬೃಹತ್ ಗಾತ್ರದ ಆನೆ ಬಂದೇ ಬಿಡ್ತು. ಬೆಚ್ಚಿ ಬಿದ್ದ ಸವಾರ ಮಾತ್ರ ಏನು ಮಾಡಬೇಕೆಂದು ತೋಚಲೇ ಇಲ್ಲ.
ಕೆಲ ಕ್ಷಣದವರೆಗೆ ಎದುರು ಬದರು ಹಾಗೆ ನಿಂತಿ ಆನೆ ಹಾಗೂ ಬೈಕ್​ ಸವಾರ ಮುಂದೇನಾಗಿರಬಹುದು ಎಂಬ ಕುತೂಹಲ ಎಲ್ಲರಲ್ಲೂ ಮನೆ ಮಾಡಿದ್ದಂತೂ ಸತ್ಯ. ಅದೃಷ್ಟವಶಾತ್​ ಆನೆಗೆ ಕೋಪ ಬಂದಿರಲಿಲ್ಲ, ಇತ್ತ ಈ ಸವಾರನ ಹಣೆಬರಹವೂ ಚೆನ್ನಾಗಿತ್ತು. ಮುಂದಾಗಬಹುದಾದ ಅನಾಹುತವೊಂದು ತಪ್ಪಿತು.
Mr. Datsun, a tile worker from Mala town of Thrissur District, Kerala, comes face-to-face – unexpectedly at a road bend, with a wild elephant. He was returning home after completing a work. The elephant inspected his bike and the person and left.His presence of mind saved him.pic.twitter.com/OihoNKvHbb
— Nelliyamlamanna🇮🇳 (@BilluNelli)July 20, 2022

ಆನೆಯನ್ನು ನೋಡಿ ಬೆಚ್ಚಿ ಬಿದ್ದ ಸವಾರ ಮಾತ್ರ ಅಲುಗಾಡದೇ ಅಲ್ಲೇ ನಿಂತಿದ್ದ, ಆನೆಯೂ ಅವನನ್ನು ಕೆಲಕಾಲ ದಿಟ್ಟಿಸಿತು. ನಂತರ ತನ್ನ ಪಾಡಿಗೆ ಹೋಯಿತು.
ಅಷ್ಟಕ್ಕೂ ಈ ಘಟನೆ ನಡೆದಿದ್ದು ಕೇರಳದ ತ್ರಿಶೂರ್​ ಜಿಲ್ಲೆಯ ಅಥಿರ್​​ಪಲಿ-ವಲಪಾರಿ ಅರಣ್ಯ ಪ್ರದೇಶದಲ್ಲಿ ಹಾದುಹೋಗುವ ರಸ್ತೆಯಲ್ಲಿ ಕೇರಳ ಜಿಲ್ಲೆಯ ಮಧ್ಯಭಾಗಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆ ಇದಾಗಿದೆ. ಅಂದಹಾಗೆ ಈ ದೃಶ್ಯವನ್ನು ಅಣತಿ ದೂರದಲ್ಲಿ ಪ್ರಯಾಣಿಸುತ್ತಿದ್ದ ಮತ್ತೊಬ್ಬ ಪ್ರಯಾಣಿಕರು ತಮ್ಮ ಮೊಬೈಲ್​ನಲ್ಲಿ ಸೆರೆ ಹಿಡಿದಿದ್ದಾರೆ. ಸದ್ಯ ಈ ವಿಡಿಯೋ ಭಾರೀ ವೈರಲ್​ ಆಗುತ್ತಿದೆ.(ಏಜೆನ್ಸೀಸ್​)
ಅಮೆರಿಕದಲ್ಲಿದ್ದ ಭಾರತೀಯ ವಿದ್ಯಾರ್ಥಿನಿ 3 ವರ್ಷಗಳಿಂದ ನಾಪತ್ತೆ! ಕುಟುಂಬಸ್ಥರಿಂದ ತನಿಖಾ ಸಂಸ್ಥೆ ಮೊರೆ

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:16 − seven =
Remember me
