ಅಹಮದಾಬಾದ್:ಇದೊಂದು ಎರಡು ದೇಶಗಳ ಪ್ರೇಮಿಗಳ ಕಥೆ. ಯುವಕ ಮಹಾರಾಷ್ಟ್ರದವ, ಯುವತಿ ಪಾಕಿಸ್ತಾನದ ಕರಾಚಿಯವಳು. ಇಬ್ಬರಿಗೂ ಫೇಸ್‌ಬುಕ್‌ನಲ್ಲಿ ಪರಿಚಯವಾಗಿ, ಅದು ಪ್ರೇಮಕ್ಕೆ ತಿರುಗಿದೆ.
ಫೋನ್‌ನಲ್ಲಿಯೇ ಇಬ್ಬರಿಗೂ ಮಾತುಕತೆಯಾಗಿದ್ದು ಯುವತಿ ತನ್ನನ್ನು ನೋಡಲು ಪಾಕಿಸ್ತಾನಕ್ಕೆ ಬರುವಂತೆ ಹೇಳಿದ್ದಾಳೆ. ತನ್ನ ಪ್ರೇಯಸಿಯನ್ನು ನೋಡಲು 20 ವರ್ಷ ಜಿಷಾನ್‌ ಮೊಹಮ್ಮದ್‌ ಸಿದ್ಧಿಕಿ ರೆಡಿ ಆಗಿ ಹೊರಟೇ ಬಿಟ್ಟಿದ್ದಾನೆ. ಈತ ಇಂಜಿನಿಯರಿಂಗ್‌ ವಿದ್ಯಾರ್ಥಿ.
ಮಹಾರಾಷ್ಟ್ರದಿಂದ ಗುಜರಾತ್‌ ರಾಜ್ಯದ ಗಡಿಯವರೆಗೂ ಬೈಕ್‌ನಲ್ಲಿ ಈತ ಬಂದಿದ್ದಾನೆ. ಆದರೆ ಗುಜರಾತ್‌ ಗಡಿಯಲ್ಲಿ ಕಚ್‌ ಪ್ರದೇಶದಲ್ಲಿ ಬಿಎಸ್‌ಎಫ್‌ ಯೋಧರು ಈತನನ್ನು ಬಂಧಿಸಿದ್ದಾರೆ.
ತಾನು ತನ್ನ ಪ್ರೇಯಸಿ ನೋಡಲು ಪಾಕಿಸ್ತಾನಕ್ಕೆ ಹೊರಟಿರುವುದಾಗಿ ಯುವಕ ಹೇಳಿದರೂ ಯೋಧರು ಕೇಳಲಿಲ್ಲ. ಏಕೆಂದರೆ ಒಂದು ದೇಶದಿಂದ ಇನ್ನೊಂದು ದೇಶಕ್ಕೆ ಈ ರೀತಿ ಹೋಗುವುದು ಕಾನೂನುಬಾಹಿರ. ಅದಕ್ಕಾಗಿಯೇ ಯುವಕನನ್ನು ಹೋಗಲು ಯೋಧರು ಬಿಟ್ಟಿಲ್ಲ.
ಇದನ್ನೂ ಓದಿ:ಪಾಸಿಟಿವ್‌ ರಿಪೋರ್ಟ್‌ ಇಟ್ಕೊಂಡು ವಿಮಾನದಲ್ಲಿ ಮೂರು ರಾಜ್ಯ ಸುತ್ತಿದ ಭೂಪ!
ನಂತರ ಅವರನ್ನು ಯುವಕ ಕಾಡಿ ಬೇಡಿದ್ದಾನೆ. ಭಾರತ-ಪಾಕಿಸ್ತಾನ ಅಂತರಾಷ್ಟ್ರೀಯ ಗಡಿಯಿಂದ ಕೇವಲ ಒಂದೂವರೆ ಕಿ. ಮೀ. ದೂರದಲ್ಲಿದ್ದ ಯುವಕ ತಾನು ಪ್ರೀತಿಸುವ ಹುಡುಗಿ ಕರಾಚಿಯಲ್ಲಿದ್ದಾಳೆ. ಅವಳನ್ನು ಭೇಟಿಯಾಗಬೇಕು ಎಂದು ಹೊರಟಿದ್ದೆ ಎಂದು ವಿವರಣೆ ನೀಡಿದ್ದಾನೆ. ಗೂಗಲ್‌ ಮ್ಯಾಪ್‌ ಸಹಾಯದಿಂದ ಇಲ್ಲಿಯವರೆಗೆ ಬಂದಿರುವುದಾಗಿ ಹೇಳಿದ್ದಾನೆ. ಮಾತ್ರವಲ್ಲದೇ ತನ್ನ ಫೇಸ್‌ಬುಕ್‌ ಕಥೆಯನ್ನೂ ಹೇಳಿದ್ದಾನೆ. ಆಕೆಯ ಜತೆ ವಾಟ್ಸ್‌ಆ್ಯಪ್‌ ಚಾಟ್ ನಡೆಸಿದ್ದನ್ನೂ ಅಧಿಕಾರಿಗಳಿಗೆ ತೋರಿಸಿದ್ದಾನೆ.
ಆದರೆ ಪ್ರೀತಿ ಪ್ರೇಮ ಏನೇ ಇದ್ದರೂ ಎರಡು ದೇಶಗಳ ನಡುವಿನ ಗಡಿಯೊಳಕ್ಕೆ ನುಸುಳಿ ಹೋಗುವುದು ಸಾಧ್ಯವಿಲ್ಲದ ಕಾರಣ, ಆತನನ್ನು ಹೀಗೆ ಕಳುಹಿಸುವುದು ಕಷ್ಟ ಎಂದು ಯೋಧರು ಹೇಳಿದ್ದಾರೆ. ಮುಂದಿನ ವಿಚಾರಣೆ ನಡೆಯುತ್ತಿದೆ.
ಯುವತಿಯ ಮಾತು ಕೇಳಿ ಬೆತ್ತಲಾದ- ಮುಂದೆ ಸುಸ್ತೋ ಸುಸ್ತು!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:seven − two =
Remember me
