ಬೆಂಗಳೂರು:ಸೋಷಿಯಲ್ ಮೀಡಿಯಾ ಬಳಕೆದಾರರು ಆಗಾಗ ಏನಾದರೂ ಒಂದು ಸಮಸ್ಯೆಗೆ ಒಳಗಾಗುವುದು ಸಹಜ. ಹಾಗೇ ಫೇಸ್​ಬುಕ್​ನಲ್ಲೀಗ ‘ಬ್ಯಾಕ್​ ಪೇನ್​’ ಕಾಣಿಸಿಕೊಂಡಿದೆ. ಅರ್ಥಾತ್​, ಫೇಸ್​ಬುಕ್​ನಲ್ಲಿ ಬ್ಯಾಕ್ ಬಟನ್ ಕೆಲಸ ಮಾಡದ್ದರಿಂದ ಬಳಕೆದಾರರು ನೋವು ವ್ಯಕ್ತಪಡಿಸಿದ್ದಾರೆ. ಮಾತ್ರವಲ್ಲ, ಕೆಲವರು ವಿಶೇಷ ಬೇಡಿಕೆಯನ್ನೂ ಸಲ್ಲಿಸಿದ್ದಾರೆ.
ಸೋಷಿಯಲ್ ಮೀಡಿಯಾ ಆ್ಯಪ್​ಗಳ ಪೈಕಿ ಮುಂಚೂಣಿಯಲ್ಲಿರುವ ಫೇಸ್​ಬುಕ್​ನಲ್ಲಿ ಯಾವುದಾದರೂ ಒಂದು ಪೋಸ್ಟ್​​ ನೋಡಲು ಕ್ಲಿಕ್ ಮಾಡಿದ ನಂತರ ಪುನಃ ಟೈಮ್​ಲೈನ್​ಗೆ ಮರಳಲು ಫೋನ್​ನಲ್ಲಿನ ಬ್ಯಾಕ್​ ಬಟನ್ ಒತ್ತಿದರೆ ಸಾಕು. ಆದರೆ ಕಳೆದ ಕೆಲವು ದಿನಗಳಿಂದ ಫೇಸ್​ಬುಕ್ ಬಳಕೆದಾರರು ಬ್ಯಾಕ್​ ಬಟನ್ ಅದುಮಿದರೂ ಅದು ಕೆಲಸ ಮಾಡದಂತಾಗಿದೆ.
ಇದನ್ನೂ ಓದಿ:10 ಸಾವಿರ ಮಂದಿಗೆ ಉಚಿತವಾಗಿ ಸಿಗಲಿದೆ ಟೆಲಿಗ್ರಾಂ ಪ್ರೀಮಿಯಂ ಸಬ್​ಸ್ಕ್ರಿಪ್ಷನ್​: ನೀವು ಮಾಡಬೇಕಾದ್ದೇನು?
ಬಹಳಷ್ಟು ಮಂದಿ ತಮ್ಮ ಫೋನ್​ನಲ್ಲೇ ಏನೋ ಸಮಸ್ಯೆ ಆಗಿದೆ ಎಂದು ರಿಸ್ಟಾರ್ಟ್ ಇತ್ಯಾದಿ ಮಾಡಿ ತಲೆಕೆಡಿಸಿಕೊಂಡಿದ್ದರು. ಆದರೆ ಇದು ಫೋನ್​ ಸಮಸ್ಯೆ ಅಲ್ಲ ಎಂಬುದು ಬಳಿಕ ಖಚಿತಗೊಂಡಿದೆ. ಫೇಸ್​ಬುಕ್​ ಆ್ಯಪ್​ನಲ್ಲಿ ಮಾತ್ರ ಮಾಮೂಲಿ ಆಗಿರುವ ಕೆಳಗಿನ ಬ್ಯಾಕ್ ಬಟನ್ ವರ್ಕ್ ಆಗುತ್ತಿಲ್ಲ. ಆದರೆ ಮೇಲಿರುವ ಬ್ಯಾಕ್ ಬಟನ್ ಒತ್ತಿದರೆ ಟೈಮ್​ಲೈನ್​ಗೆ ಮರಳಲು ಸಾಧ್ಯವಾಗುತ್ತಿದೆ. ಈ ಸಮಸ್ಯೆ ಬೇರೆ ಆ್ಯಪ್​ಗಳ ಬಳಕೆ ವೇಳೆ ಕಂಡುಬಂದಿಲ್ಲ.
ಇದನ್ನೂ ಓದಿ:ಹಾಲು ಕುಡಿಯಲು ಯಾವ ಸಮಯ ಉತ್ತಮ?: ಆಯುರ್ವೇದ ಏನು ಹೇಳುತ್ತದೆ?
ಈ ಬಗ್ಗೆ ಹಲವಾರು ಬಳಕೆದಾರರು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಈ ಮೊದಲಿದ್ದಂತೆ ನಮಗೆ ಬಾಟಮ್​ನಲ್ಲಿ ಇರುವ ಬ್ಯಾಕ್​ ಬಟನ್ ಬೇಕು, ಬ್ಯಾಕ್ ಬಟನ್ ಮೇಲಿರುವುದು ಬೇಡ ಎಂದು ಆಗ್ರಹಿಸಿದ್ದಾರೆ. ಅದಾಗ್ಯೂ ಈ ಸಮಸ್ಯೆ ಯಾಕಾಯಿತು, ಏನು ಎಂದು ಫೇಸ್​ಬುಕ್​ ಅಥವಾ ಅದರ ಮಾತೃಸಂಸ್ಥೆ ಮೆಟಾದಿಂದ ಯಾವುದೇ ಮಾಹಿತಿ ಅಪ್​ಡೇಟ್ ಆಗಿಲ್ಲ.
Fix my back button@facebook🤬🤬🤬#Facebook#backbutton#back#fyppic.twitter.com/ML5sYVtQKQ
— Ben – The Lost Boys (David Cosplayer) 🥡🥡🥡 (@TheLostBoysVamp)November 6, 2023

@Metafix the Facebook app as our phones back button's aren't working with the app anymore, we know have to reach to the top left corner of the screen and press ⬅️, not good!
— 👻 Elliott Ainley 👻 (@InspGadget)November 6, 2023

@facebookCan you please fix this back button nonsense for Android? I'm not on an iPhone, I don't need your stupid top back arrow when I have my own. Now, I have two and only the annoying top one works. It's against the way every thing else works on Android.pic.twitter.com/eslfRdxjWo
— Anex (@AnexRavensong)November 5, 2023

ಚಿರತೆಯನ್ನೇ ಎದುರಿಸಿ ಏಳು ವರ್ಷದ ಮಗಳನ್ನು ರಕ್ಷಿಸಿದ ತಂದೆ!

ಅಧಿಕಾರಕ್ಕೆ ಬಂದರೆ ಒಬಿಸಿಯವರಿಗೇ ಸಿಎಂ ಪಟ್ಟ: ಪ್ರಧಾನಿ ಮೋದಿ ಭರವಸೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 + four =
Remember me
