ಸ್ಯಾನ್ ಫ್ರಾನ್ಸಿಸ್ಕೊ:ಸೋಷಿಯಲ್ ಮೀಡಿಯಾ ಕಂಪನಿ ಎಂಬ ಛಾಯೆಯಿಂದ ಹೊರಬರುವ ಸಲುವಾಗಿ ಫೇಸ್​ಬುಕ್ ಮಾತೃಸಂಸ್ಥೆ ತನ್ನ ಹೆಸರನ್ನು ‘ಮೆಟಾ’ ಎಂದು ಬದಲಾಯಿಸಿಕೊಂಡಿದೆ. ಕೋಟ್ಯಂತರ ಬಳಕೆದಾರರನ್ನು ಹೊಂದಿರುವ ಫೇಸ್​ಬುಕ್, ಇನ್​ಸ್ಟಾಗ್ರಾಂ ಮತ್ತು ವಾಟ್ಸ್​ಆಪ್​ಗಳ ಹೆಸರು ಹಾಗೆಯೇ ಮುಂದುವರಿಯಲಿದೆ ಎಂದು ಕಂಪನಿ ಸ್ಪಷ್ಟಪಡಿಸಿದೆ. ತನ್ನ ಭವಿಷ್ಯದ ವರ್ಚುವಲ್ ರಿಯಾಲಿಟಿ ವಿಷನ್ ಬಲಪಡಿಸಲು ಈ ಕ್ರಮ ತೆಗೆದುಕೊಂಡಿದೆ. ಮಹತ್ವಾಕಾಂಕ್ಷೆಯ ‘ಮೆಟಾವರ್ಸ್’ ನಿರ್ವಿುಸುವ ಮೂಲಕ ಭೌತಿಕ ಜಗತ್ತು ಮತ್ತು ಭ್ರಾಮಕ ಜಗತ್ತಿನ ನಡುವಿನ ತೆಳು ಪರದೆಯನ್ನು ಸರಿಸಲು ಮುಂದಾಗಿದೆ.
ಮೆಟಾವರ್ಸ್ ಎಂದರೆ?
ಇದೊಂದು ‘ವರ್ಚುವಲ್ ಎನ್ವಿರಾನ್​ವೆುಂಟ್’. ಪರದೆ ಮೇಲೆ ನೋಡುವುದಷ್ಟೇ ಅಲ್ಲ, ಈ ವಾತಾವರಣದೊಳಕ್ಕೆ ಜನರು ಪ್ರವೇಶ ಮಾಡಬಹುದು. ಇದು ಕೊನೆ ಇಲ್ಲದ ಪ್ರಪಂಚ. ಇಲ್ಲಿ ಜನರು ವರ್ಚುವಲ್ ಕಮ್ಯೂನಿಟಿಗಳ ಮೂಲಕ ಪರಸ್ಪರ ಸಂಪರ್ಕ ಸಾಧಿಸಿಕೊಂಡು, ಒಟ್ಟಾಗಿ ಕೆಲಸ ಮಾಡಬಹುದು, ಆಟ ಆಡಬಹುದು. ಇದಕ್ಕಾಗಿ ಅವರು ವರ್ಚುವಲ್ ರಿಯಾಲಿಟಿ ಹೆಡ್​ಸೆಟ್, ಆಗುಮೆಂಟೆಡ್ ರಿಯಾಲಿಟಿ ಗ್ಲಾಸ್​ಗಳನ್ನು, ಸ್ಮಾರ್ಟ್​ಫೋನ್ ಆಪ್ ಮತ್ತು ಇತರೆ ಉಪಕರಣಗಳನ್ನು ಬಳಸಬೇಕಾಗುತ್ತದೆ ಎಂದು ಪೇಸ್​ಬುಕ್ ಮುಖ್ಯಸ್ಥ ಮಾರ್ಕ್ ಜುಕರ್​ಬರ್ಗ್ ವಿವರಿಸಿದ್ದಾರೆ.
ಮುಂದಿನ ಹಂತದ ಬೆಳವಣಿಗೆ
ಮೆಟಾವರ್ಸ್​ನ ಅಭಿಮಾನಿಗಳು ಈ ವಿದ್ಯಮಾನವನ್ನು ಇಂಟರ್​ನೆಟ್ ಜಗತ್ತಿನ ಮುಂದಿನ ಹಂತದ ಅಭಿವೃದ್ಧಿ ಅಥವಾ ಬೆಳವಣಿಗೆ ಎಂದು ಬಣ್ಣಿಸುತ್ತಿದ್ದಾರೆ. ಸದ್ಯ, ಸೋಷಿಯಲ್ ಮೀಡಿಯಾ ಆಪ್ ಮತ್ತು ಇತರೆ ಆಪ್​ಗಳ ನೆರವಿನೊಂದಿಗೆ ಜನರು ಈಗ ಪರಸ್ಪರ ಸಂವಹನ ನಡೆಸುತ್ತಿದ್ದಾರೆ. ಮೆಟಾವರ್ಸ್​ನಲ್ಲಿ ಈ ಸಂವಹನಕ್ಕೆ ವರ್ಚುವಲ್ ರಿಯಾಲಿಟಿ, ಆಗುಮೆಂಟೆಡ್ ರಿಯಾಲಿಟಿ ಮತ್ತು ಇತರೆ ತಂತ್ರಾಂಶಗಳ ಮೂಲಕ ಬಹು ಆಯಾಮಗಳು ಸಿಗಲಿವೆ.
ಮೆಟಾವರ್ಸ್ ಪ್ರವೇಶ
ಮೆಟಾವರ್ಸ್​ಗೆ ಪ್ರವೇಶ ಬಗ್ಗೆ ಫೇಸ್​ಬುಕ್ ಕಂಪನಿ ಸಿಇಒ ಜುಲೈನಲ್ಲೇ ಸುಳಿವು ನೀಡಿದ್ದರು. ಮುಂದಿನ ಐದು ವರ್ಷಗಳ ಅವಧಿಯಲ್ಲಿ ಫೇಸ್​ಬುಕ್ ಕಂಪನಿ ಮೆಟಾವರ್ಸ್ ಕಂಪನಿಯಾಗಿ ರೂಪುಗೊಳ್ಳಲಿದೆ. ಇದೇ ರೀತಿ, ಮೈಕ್ರೋಸಾಫ್ಟ್, ರೊಬ್ಲಾಕ್ಸ್, ಫೋರ್ಟ್​ನೈಟ್ ಕಂಪನಿಗಳು ಮೆಟಾವರ್ಸ್​ಗೆ ಪ್ರವೇಶ ಪಡೆಯುತ್ತಿವೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × 5 =
Remember me
