ನವದೆಹಲಿ:ದ್ವೇಷಪೂರಿತ ಪೋಸ್ಟ್​ಗಳನ್ನು ಹಾಕುವ ಬಿಜೆಪಿ ನಾಯಕರ ವಿರುದ್ಧ ಫೇಸ್​ಬುಕ್ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಅಮೆರಿಕದ ಪತ್ರಿಕೆ ದಿ ವಾಲ್ ಸ್ಟ್ರೀಟ್ ಜರ್ನಲ್ ವರದಿ ಮಾಡಿದ ಹಿನ್ನೆಲೆಯಲ್ಲಿ ಉಂಟಾಗಿರುವ ವಿವಾದ ಕುರಿತು ಸೋಮವಾರ ಫೇಸ್​ಬುಕ್ ಸ್ಪಷ್ಟನೆ ನೀಡಿದೆ.
ಹಿಂಸಾಚಾರ, ದ್ವೇಷಕ್ಕೆ ಪ್ರಚೋದನೆ ನೀಡುವ ಭಾಷಣ, ಪೋಸ್ಟ್​ಗಳನ್ನು ಫೇಸ್​ಬುಕ್ ಖಂಡಿಸುತ್ತದೆ. ಇದಕ್ಕೆ ಸಂಸ್ಥೆ ಬೆಂಬಲ ನೀಡುವುದಿಲ್ಲ. ಜಾಗತಿಕವಾಗಿ ಯಾವುದೇ ರಾಜಕೀಯ ಹಾಗೂ ಪಕ್ಷದಭೇದ ಇಲ್ಲದೇ ಕ್ರಮ ಜರುಗಿಸಲಾಗುತ್ತಿದೆ. ಯಾವುದೇ ರಾಜಕೀಯ ಪಕ್ಷದ ಆಧಾರದ ಮೇಲೆ ನಿಯಮಗಳನ್ನು ರಚಿಸಲಾಗುವುದಿಲ್ಲ. ನಿಗದಿತ ಅವಧಿಗೆ ಆಡಿಟ್​ಗಳನ್ನೂ ನಡೆಸಲಾಗುತ್ತದೆ ಎಂದು ಫೇಸ್​ಬುಕ್ ವಕ್ತಾರರು ತಿಳಿಸಿದ್ದಾರೆ.
ಬಿಜೆಪಿ ನಾಯಕರು, ಮೂವರು ಹಿಂದು ಸಂಘಟನೆ ನಾಯಕರು, ಹಿಂಸಾಚಾರಕ್ಕೆ ಪ್ರಚೋದನೆ ನೀಡುವ ಪೋಸ್ಟ್ ಗಳನ್ನು ಹಾಕಿದ್ದರೂ ಅವರ ಮೇಲೆ ಫೇಸ್​ಬುಕ್ ಕ್ರಮ ಕೈಗೊಳ್ಳುತ್ತಿಲ್ಲ. ದ್ವೇಷ ಭಾಷಣಗಳನ್ನು ಪೋಸ್ಟ್ ಮಾಡುವ ಬಿಜೆಪಿ ನಾಯಕರ ವಿರುದ್ಧ ಫೇಸ್​ಬುಕ್ ಹಾಗೂ ವಾಟ್ಸ್ ಆಪ್ ಮೃದು ಧೋರಣೆ ಅನುಸರಿಸುತ್ತಿವೆ. ತೆಲಂಗಾಣ ಶಾಸಕರೊಬ್ಬರು ಅಲ್ಪಸಂಖ್ಯಾತರ ವಿರುದ್ಧ ಪ್ರಚೋದನಾಕಾರಿ ಹೇಳಿಕೆ ನೀಡಿದ್ದರು. ನಿಯಮದ ಪ್ರಕಾರ ಅವರ ಖಾತೆಯನ್ನು ನಿಷ್ಕ್ರಿಯ ಮಾಡಬೇಕಿತ್ತು. ಆದರೆ ಹಿರಿಯ ಅಧಿಕಾರಿಗಳು ಅವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಿರಲು ನಿರ್ಧರಿಸಿದರು. ಇವರ ಮೇಲೆ ನಿರ್ಬಂಧ ಹೇರಿದರೆ ಭಾರತದಲ್ಲಿ ಕಂಪನಿಯ ವಹಿವಾಟಿಗೆ ಧಕ್ಕೆ ಆಗುತ್ತದೆ ಎಂಬ ಕಾರಣಕ್ಕೆ ಈ ರೀತಿ ನಡೆದುಕೊಳ್ಳಲಾಗುತ್ತಿದೆ ಎಂದು ದಿ ವಾಲ್ ಸ್ಟ್ರೀಟ್ ಜರ್ನಲ್ ವರದಿ ಮಾಡಿತ್ತು.
ಕಾಂಗ್ರೆಸ್ – ಅನಾಲಿಟಿಕಾ ನಂಟು:ಕಳೆದ ಲೋಕಸಭಾ ಚುನಾವಣೆ ವೇಳೆ ಬ್ರಿಟನ್ ಮೂಲದ ಕೇಂಬ್ರಿಜ್ ಅನಲಿಟಿಕಾ ಎಂಬ ಕಂಪನಿ ಪ್ರಚಾರಾಂದೋಲನ ವೇಳೆ ಕಾಂಗ್ರೆಸ್​ಗೆ ನೆರವು ನೀಡಿತ್ತು ಎಂಬ ಮಾತು ಕೇಳಿಬಂದಿತ್ತು. ಭಾರತದ ಕೋಟ್ಯಂತರ ಫೇಸ್​ಬುಕ್ ಬಳಕೆದಾರರ ಡೇಟಾಗಳನ್ನು ಸಂಗ್ರಹಿಸಿ, ಅವರ ಮೇಲೆ ಪ್ರಭಾವ ಬೀರಲು ಯತ್ನಿಸಿತ್ತು. ಮತದಾರರನ್ನು ಕಾಂಗ್ರೆಸ್​ನತ್ತ ಸೆಳೆಯುವುದು ಇದರ ಯೋಜನೆಯಾಗಿತ್ತು ಎಂಬ ಮಾಹಿತಿ ಬೆಳಕಿಗೆೆ ಬಂದಿತ್ತು. ಆದರೆ ಇದನ್ನು ಕಾಂಗ್ರೆಸ್ ಅಲ್ಲಗಳೆದಿತ್ತು. 2016ರ ಅಮೆರಿಕ ಅಧ್ಯಕ್ಷೀಯ ಚುನಾಚಣೆಯಲ್ಲಿ ಡೊನಾಲ್ಡ್ ಟ್ರಂಪ್ ಇದೇ ಸಂಸ್ಥೆಯ ನೆರವನ್ನು ಪಡೆದಿದ್ದರು ಎನ್ನಲಾಗಿದೆ.
ಹಿರಿಯ ಅಧಿಕಾರಿಗೆ ಜೀವ ಬೆದರಿಕೆ ಕರೆ:ಭಾರತದಲ್ಲಿನ ಫೇಸ್​ಬುಕ್ ಹಿರಿಯ ಅಧಿಕಾರಿ ಅಂಕಿ ದಾಸ್​ಗೆ ಆನ್​ಲೈನ್ ಮೂಲಕ ಜೀವ ಬೆದರಿಕೆ ಬರುತ್ತಿದ್ದು, ಈ ಕುರಿತು ಅವರು ದೆಹಲಿಯ ಸೈಬರ್ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ. ಫೇಸ್​ಬುಕ್ ಕುರಿತು ಅಮೆರಿಕ ಮಾಧ್ಯಮದಲ್ಲಿ ವರದಿ ಪ್ರಕಟವಾದ ಬಳಿಕ ಬೆದರಿಕೆಗಳು ಬರುತ್ತಿವೆ. ತಮ್ಮ ವರ್ಚಸ್ಸಿಗೆ ಹಾನಿ ಉಂಟುಮಾಡುವ ಯತ್ನವನ್ನೂ ಮಾಡಲಾಗುತ್ತದೆ. ತಾವು ಭಯದಿಂದ ಬದುಕುತ್ತಿದ್ದು, ತಕ್ಷಣ ದುಷ್ಕರ್ವಿುಗಳನ್ನು ಬಂಧಿಸಬೇಕು ಮತ್ತು ತಮಗೆ ಹಾಗೂ ಕುಟುಂಬಕ್ಕೆ ರಕ್ಷಣೆ ನೀಡಬೇಕು ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಜೆಪಿಸಿ ತನಿಖೆಗೆ ಆಗ್ರಹ:ಈ ಬೆಳವಣಿಗೆಯಿಂದ ಭಾರತದ ಪ್ರಜಾಪ್ರಭುತ್ವದ ಅಡಿಪಾಯಕ್ಕೆ ಧಕ್ಕೆಯಾಗಿದೆ. ಫೇಸ್​ಬುಕ್ ವಿವಾದ ಕುರಿತು ಜಂಟಿ ಸಂಸದೀಯ ಸಮಿತಿ ಯಿಂದ (ಜೆಪಿಸಿ) ತನಿಖೆ ನಡೆಯಬೇಕು ಎಂದು ಕಾಂಗ್ರೆಸ್ ಆಗ್ರಹಿಸಿದೆ.
ರಾಹುಲ್​ಗೆ ತಿರುಗೇಟು:ಭಾರತದಲ್ಲಿ ಫೇಸ್​ಬುಕ್, ವಾಟ್ಸ್ ಆಪ್​ನ್ನು ಬಿಜೆಪಿ ಮತ್ತು ಆರ್​ಎಸ್​ಎಸ್ ನಿಯಂತ್ರಣ ಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿದ್ದ ರಾಹುಲ್ ಗಾಂಧಿಗೆ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ತಿರುಗೇಟು ನೀಡಿದ್ದರು. ಇಡೀ ಜಗತ್ತಿನ ಮೇಲೆ ಬಿಜೆಪಿ ಹಾಗೂ ಆರ್​ಎಸ್​ಎಸ್ ಪ್ರಭಾವ ಬೀರಲು ಯತ್ನಿಸುತ್ತಿದೆ ಎಂಬ ಆರೋಪ ಮಾಡುತ್ತಾರೆ ಎಂದಿದ್ದರು.
ಫೇಸ್​ಬುಕ್ ವಿವಾದವನ್ನು ಜೆಪಿಸಿ ತನಿಖೆಗೆ ಒಪ್ಪಿಸಬೇಕು ಎಂಬ ಕಾಂಗ್ರೆಸ್ ಒತ್ತಾಯ ಅರ್ತಾಕ. 2019ರ ಚುನಾವಣೆಯಲ್ಲಿ ಹೀನಾಯ ಸೋಲಿನ ಹತಾಶೆಯಿಂದ ಈ ಆಗ್ರಹ ಮಾಡಲಾಗಿದೆ.
| ಪ್ರಲ್ಹಾದ್ ಜೋಶಿ,ಕೇಂದ್ರ ಸಂಸದೀಯ ವ್ಯವಹಾರ ಸಚಿವ
https://www.vijayavani.net/lpg-cng-likely-to-be-cheaper-soon/
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × two =
Remember me
