ನವದೆಹಲಿ:ದ್ವೇಷಯುಕ್ತ ಪೋಸ್ಟ್​ಗಳು, ದ್ವೇಷ ಭಾಷಣದ ವಿಡಿಯೋಗಳ ಅಪ್ಲೋಡ್​​ ವಿಚಾರದಲ್ಲಿ ತಾರತಮ್ಯ ತೋರುತ್ತಿದ್ದಾರೆ, ಆಡಳಿತರೂಢ ಪಕ್ಷ ಬಿಜೆಪಿ ಪರ ಒಲವು ತೋರಿಸುತ್ತಿದ್ದಾರೆ ಎಂಬಿತ್ಯಾದಿ ಆರೋಪ ಎದುರಿಸುತ್ತಿದ್ದ ಫೇಸ್​ಬುಕ್​ ಇಂಡಿಯಾದ ಸಾರ್ವಜನಿಕ ನೀತಿ ನಿರ್ದೇಶಕಿ ಅಂಖಿ ದಾಸ್​​ ಇಂದು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಅಂಖಿ ದಾಸ್​ ಅವರು 9 ವರ್ಷಗಳಿಂದಲೂ ಫೇಸ್​ಬುಕ್​ ಕಂಪನಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಫೇಸ್​​ಬುಕ್​ನ ಭಾರತ, ದಕ್ಷಿಣ ಮತ್ತು ಮಧ್ಯ ಏಷ್ಯಾ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದರು. ದ್ವೇಷ ಭಾಷಣ, ಪೋಸ್ಟ್​​ಗೆ ಸಂಬಂಧಪಟ್ಟಂತೆ ಇರುವ ಫೇಸ್​​ಬುಕ್​ ನೀತಿ ಅನುಷ್ಠಾನದಲ್ಲಿ ಹಸ್ತಕ್ಷೇಪ ಮಾಡಿದ್ದಾರೆ. ಬಿಜೆಪಿಗೆ ಅನುಕೂಲವಾಗುವಂತೆ ತಾರತಮ್ಯ ಮಾಡಿದ್ದಾರೆ ಎಂಬ ಆರೋಪ ಇವರ ವಿರುದ್ಧ ಕೇಳಿಬಂದಿತ್ತು. ಇದರ ವಿಚಾರಣೆಯ ಸಲುವಾಗಿ ಅಂಖಿ ದಾಸ್​ ಹಾಗೂ ಫೇಸ್​​ಬುಕ್​ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಅಜಿತ್​ ಮೋಹನ್​ ಸಂಸದೀಯ ಸಮಿತಿ ಎದುರು ಹಾಜರಾಗಿದ್ದರು.ಇದನ್ನೂ ಓದಿ:ಮಧ್ಯರಾತ್ರಿ ಫೋನ್​ ಸಂಭಾಷಣೆ, ಮರುದಿನವೇ ನಡೆಯಿತು ಯುವತಿ ಹತ್ಯೆ: ಕಾರಣ ಬಿಚ್ಚಿಟ್ಟ ಆರೋಪಿ
ಅಂತಿಮವಾಗಿ ಅಂಖಿ ದಾಸ್​ ತಮ್ಮ ಸ್ಥಾನ ತೊರೆದಿದ್ದಾರೆ. ಸಾರ್ವಜನಿಕ ಹಿತಾಸಕ್ತಿ ದೃಷ್ಟಿಯಿಂದ ಅಂಖಿ ರಾಜೀನಾಮೆ ಸಲ್ಲಿಸಿದ್ದಾರೆ. ಅಂಖಿ ದಾಸ್​ ಅವರು ನಮ್ಮ ಸಂಸ್ಥೆಯಲ್ಲಿ ಹಲವು ವರ್ಷಗಳಿಂದ ಇದ್ದವರು. ಭಾರತದಲ್ಲಿ ಫೇಸ್​ಬುಕ್​ ಶುರುವಾದ ಆರಂಭದ ಕಾಲದಿಂದಲೂ ಇದ್ದರು. ಕಂಪನಿಯ ಏಳ್ಗೆಯಲ್ಲಿ ಮುಖ್ಯ ಪಾತ್ರ ವಹಿಸಿದ್ದಾರೆ ಎಂದು ಅಜಿತ್​ ಮೋಹನ್​ ತಿಳಿಸಿದ್ದಾರೆ. (ಏಜೆನ್ಸೀಸ್​)
ಮದರಸಾದ ಮೇಲೆ ಬಾಂಬ್​ ದಾಳಿ: ಏಳು ಮಕ್ಕಳು ಬಲಿ- ಉಳಿದವರ ಸ್ಥಿತಿ ಚಿಂತಾಜನಕ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen − 8 =
Remember me
