ನವದೆಹಲಿ:ದೆಹಲಿಯ ಸದನ ಸಮಿತಿ ನೀಡಿದ್ದ ನೋಟಿಸ್​ ಸಂಬಂಧ ಫೇಸ್​ಬುಕ್​ ಇಂಡಿಯಾ ಸುಪ್ರೀಂಕೋರ್ಟ್​ ಮೆಟ್ಟಿಲೇರಿದ್ದು, ಬುಧವಾರ ಫೇಸ್​ಬುಕ್​ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಅಜಿತ್ ಮೋಹನ್ ಸರ್ವೋಚ್ಚ ನ್ಯಾಯಾಲಯದ ಮುಂದೆ ಹಾಜರಾಗಲಿದ್ದಾರೆ.
ದೆಹಲಿ ವಿಧಾನಸಭೆಯ ಶಾಂತಿ ಹಾಗೂ ಸೌಹಾರ್ದ ಸಮಿತಿಯು ಎರಡು ದಿನಗಳ ಹಿಂದೆ ಫೇಸ್​ಬುಕ್​ ಸಂಸ್ಥೆಗೆ ಹೊಸ ಹಾಗೂ ಅಂತಿಮ ಸಮನ್ಸ್ ಜಾರಿ ಮಾಡಿತ್ತು. ಮಾತ್ರವಲ್ಲ ಫೇಸ್​ಬುಕ್​ ಇಂಡಿಯಾದ ಪ್ರತಿನಿಧಿಗಳು ಬುಧವಾರದೊಳಗೆ ಸಮಿತಿ ಮುಂದೆ ಹಾಜರಾಗಬೇಕು ಎಂಬುದಾಗಿ ಸಮನ್ಸ್​ ಮೂಲಕ ತಾಕೀತು ಮಾಡಿತ್ತು.
ದ್ವೇಷಪೂರಿತ ಪೋಸ್ಟ್ ಸಂಬಂಧ ನಿಯಮ ರೂಪಿಸಲು ಫೇಸ್​ಬುಕ್​ ಉದ್ದೇಶಪೂರ್ವಕವಾಗಿ ನಿರಾಸಕ್ತಿ ತೋರುತ್ತಿದೆ ಎಂಬ ಹಿನ್ನೆಲೆಯಲ್ಲಿ ಈ ಸಮನ್ಸ್ ಜಾರಿಗೊಳಿಸಲಾಗಿತ್ತು. ಹೀಗಾಗಿ ಫೇಸ್​ಬುಕ್​ ಇಂಡಿಯಾ ಇದೀಗ ಆ ಸಮನ್ಸ್​ ಔಚಿತ್ಯ ಪ್ರಶ್ನಿಸಿ ಸುಪ್ರೀಂಕೋರ್ಟ್​ ಮೆಟ್ಟಿಲೇರಿದೆ. (ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen − thirteen =
Remember me
