ವಿಜಯವಾಡ:ಒಂಬತ್ತು ತಿಂಗಳ ಹಿಂದೆ ಫೇಸ್​ಬುಕ್​ನಲ್ಲಿ ಪರಸ್ಪರ ಪರಿಚಿತರಾದ ಯುವಕ ಮತ್ತು ಯುವತಿ ಪ್ರೀತಿಯ ಬಲೆಯಲ್ಲಿ ಬಿದ್ದು ಕೊನೆಗೆ ದುರಂತ ಸಾವಿಗೀಡಾದ ಘಟನೆ ಆಂಧ್ರ ಪ್ರದೇಶದ ಒಂಗೋಲ್​ ಉಪನಗರದಲ್ಲಿ ನಡೆದಿದೆ. ಮಂಗಳವಾರ ಪೆಲ್ಲೂರ್​ ಸಮೀಪದ ರೈಲ್ವೆ ಹಳಿಯ ಮೇಲೆ ಪತ್ತೆಯಾದ ಜೋಡಿಯ ಮೃತದೇಹ ಮಾಹಿತಿಯನ್ನು ಪತ್ತೆಹಚ್ಚುವಾಗ ಫೇಸ್​​ಬುಕ್​ ಪ್ರೇಮ್​ ಕಹಾನಿ ಬೆಳಕಿಗೆ ಬಂದಿದೆ.
ಒಂಗೋಲ್​ ಉಪನಗರದ ಕೊಪ್ಪಳ್​ ಮೂಲದ ವೆಂಕಟೇಶ್ವರ ರೆಡ್ಡಿ ಮತ್ತು ಸುಜಾತ ದಂಪತಿಯ ದ್ವಿತೀಯ ಪುತ್ರ ವಿಷ್ಣುವರ್ಧನ್​ ರೆಡ್ಡಿ ದ್ವಿತೀಯ ವರ್ಷದ ಬಿಟೆಕ್​ ವಿದ್ಯಾರ್ಥಿಯಾಗಿದ್ದ. ಸ್ಮಾರ್ಟ್​ ಫೋನ್​ಗಾಗಿ ಮಗ ದುಂಬಾಲು ಬಿದ್ದಿದ್ದರಿಂದ ಹೇಗೋ 12 ಸಾವಿರ ರೂಪಾಯಿಯ ಫೋನ್​ ಕೊಡಿಸಿದ್ದರು. ಹೆಚ್ಚು ಕಾಲ ಫೋನ್​ನಲ್ಲೇ ಕಾಲ ಕಳೆಯುತ್ತಿದ್ದ ವಿಷ್ಣುಗೆ ಒಂಗೋಲ್​ನ ವೆಂಕಟೇಶ್ವರ ಕಾಲನಿಯಲ್ಲಿ ವಾಸವಿದ್ದ ಹಿಂದು ಎಂಬ ಯುವತಿಯ ಪರಿಚಯವಾಗಿತ್ತು.
ಇದನ್ನೂ ಓದಿರಿ:ಚೆನ್ನಾಗಿದೆ ಅಂತಾ ಪುಟ್ಟ ಪ್ರಾಣಿಯ ಜತೆ ಪೋಸ್​ ಕೊಟ್ಟ ಮಹಿಳೆ ಅದರ ಹಿನ್ನೆಲೆ ತಿಳಿದು ಬೆಚ್ಚಿಬಿದ್ದಳು!
ಅಂದಹಾಗೆ ಹಿಂದು ಕುಟುಂಬದ ಮೂಲ ವೆಲಿಗಂಡಾ ವಲಯದ ಗನ್ನವರಂ ಗ್ರಾಮ. ವೆಂಕಟೇಶ್ವರ ಕಾಲನಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದೆ. ತಂದೆ ಒಂದು ವರ್ಷಗಳ ಹಿಂದೆ ಮೃತಪಟ್ಟಿದ್ದರಿಂದ ಹಿಂದುವನ್ನು ತಾಯಿ ಮತ್ತು ಸಹೋದರ ನೋಡಿಕೊಳ್ಳುತ್ತಿದ್ದರು. ಬಿಎಸ್ಸಿ ಪ್ರಥಮ ವರ್ಷದ ವಿದ್ಯಾರ್ಥಿನಿಯಾಗಿದ್ದಳು. ಈಕೆಗೆ ಫೇಸ್​ಬುಕ್​ ಮೂಲಕವೇ ವಿಷ್ಣು ಪರಿಚಿತನಾಗಿದ್ದ.
ಕೆಲವು ದಿನಗಳಿಂದ ನಿರಂತರವಾಗಿ ಯುವತಿಯೊಬ್ಬಳು ವಿಷ್ಣುಗೆ ಕರೆ ಮಾಡುವುದನ್ನು ಆತನ ತಾಯಿ ಸುಜಾತ ಗಮನಿಸಿದ್ದಾರೆ. ಮಗನ ಪ್ರೀತಿಯ ವಿಚಾರ ಗೊತ್ತಾದಾಗ ಬೆನ್ನಲ್ಲೇ ಅವನ ಮೊಬೈಲ್​ ಫೋನ್​ ಅನ್ನು ಒಡೆದು ಹಾಕಿ ಬುದ್ಧಿವಾದ ಹೇಳಿದ್ದಾರೆ. ಆದರೆ, ವಿಷ್ಣು ಸ್ನೇಹಿತರ ಮೊಬೈಲ್​ ಮೂಲಕ ಹಿಂದು ಜತೆ ಮಾತು ಮುಂದುವರಿಸಿದ್ದ. ಇದಾದ ಬಳಿಕ ಇಬ್ಬರು ನಾಪತ್ತೆಯಾಗಿದ್ದರು. ಎರಡು ಕುಟುಂಬ ಈ ಬಗ್ಗೆ ದೂರು ಸಹ ನೀಡಿತ್ತು.
ಹೀಗಿರುವಾಗ ಮಂಗಳವಾರ ಬೆಳಗ್ಗೆ 10 ಗಂಟೆ ಸುಮಾರಿಗೆ ರೈಲ್ವೆ ಹಳಿಯಲ್ಲಿ ಯುವ ಜೋಡಿ ಆತ್ಮಹತ್ಯೆ ಮಾಡಿಕೊಂಡಿರುವ ಮಾಹಿತಿ ಸುರಾರೆಡ್ಡಿಪಾಳ್ಯಂನ ಪೊಲೀಸರಿಗೆ ತಿಳಿಯುತ್ತದೆ. ತಕ್ಷಣ ಅಲ್ಲಿಗೆ ಹೋದಾಗ ಇಬ್ಬರ ಮೃತದೇಹದ ಗುರುತೇ ಹಿಡಿಯಲಾರದಷ್ಟು ಬರ್ಬರವಾಗಿರುತ್ತದೆ. ಹಾಲ್​ ಟಿಕೆಟ್​ ಆಧಾರದ ಮೇಲೆ ಯುವಕನ ಗುರುತು ಪತ್ತೆಹಚ್ಚಿದಾಗ ಆತ ಇಂಜಿನಿಯರ್​ ಕಾಲೇಜು ವಿದ್ಯಾರ್ಥಿ ಎಂಬುದು ತಿಳಿಯುತ್ತದೆ. ಬಳಿಕ ಕಾಲೇಜಿಗೆ ಹೋಗಿ ವಿಚಾರಿಸಿದಾಗ ವಿಷ್ಣು (19) ಎಂಬುದು ತಿಳಿಯುತ್ತದೆ.
ಇದನ್ನೂ ಓದಿರಿ:ಪಬ್​ನಲ್ಲಿ ಯುವತಿಯ ಭುಜ ಕಚ್ಚಿ ವಿಕೃತಿ ಮೆರೆದ ಕಾಮುಕ: ಕೃತ್ಯಕ್ಕೂ ಮುನ್ನ ಈತನ ಸಂಚು ಭಯಾನಕ!
ವಿಷ್ಣು ಸ್ನೇಹಿತರ ಪ್ರಕಾರ ಮತ್ತೊಂದು ಮೃತದೇಹ ಹಿಂದು (18) ಎಂದು ತಿಳಿಯುತ್ತದೆ. ಇಬ್ಬರ ಪ್ರೀತಿಗೆ ಮನೆಯವರು ಒಪ್ಪಿಗೆ ನೀಡಿದಿದ್ದರಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ. ಹಿಂದು ಲವ್​ ಮಾಡುತ್ತಿದ್ದಳು ಎಂಬುದು ನಮಗೆ ತಿಳಿದಿರಲಿಲ್ಲ ಎಂದು ಆಕೆ ಪಾಲಕರು ಕಣ್ಣೀರಿಟ್ಟಿದ್ದಾರೆ. ಅಂತರ್ಜಾತಿ ವಿವಾಹಕ್ಕೆ ಒಪ್ಪುವುದಿಲ್ಲ ಎಂಬ ಭಯದಿಂದ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.(ಏಜೆನ್ಸೀಸ್​)
ಶೃಂಗೇರಿಯಲ್ಲಿ ಅಪ್ರಾಪ್ತೆ ಮೇಲೆ 30ಕ್ಕೂ ಹೆಚ್ಚು ಜನರಿಂದ ಗ್ಯಾಂಗ್​ರೇಪ್ ಪ್ರಕರಣಕ್ಕೆ ಸ್ಫೋಟಕ ತಿರುವು!

ಹಿಂದೂ ಹುಡುಗಿ ಬೇಕು, ಈ ಸಂಪ್ರದಾಯನಂತೆ ಮದುವೆಯಾಗುವೆ ಎಂದ ಪಪ್ಪು: ನಡೆಯಿತು ಅದ್ಧೂರಿ ವಿವಾಹ

ದಾರಿಹೋಕರು ನೀಡುವ ಜಂಕ್​ ಫುಡ್​ ತಿಂದು ಬೊಜ್ಜು ಬೆಳೆಸಿಕೊಂಡು ಪರದಾಡುತ್ತಿರುವ ಕೋತಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one + 18 =
Remember me
