ಬೆಂಗಳೂರು:ಡಿಜಿಟಲ್ ಮೀಡಿಯಾದಲ್ಲಿ ಭಾರಿ ದೊಡ್ಡ ಭಾಗವನ್ನೇ ಹೊಂದಿರುವ ಫೇಸ್​ಬುಕ್​, ವಾಟ್ಸ್​ಆ್ಯಪ್​ ಹಾಗೂ ಇನ್​ಸ್ಟಾಗ್ರಾಮ್​ ಸರ್ವರ್​ ಇದ್ದಕ್ಕಿದ್ದಂತೆ ಕೈಕೊಟ್ಟಿರುವುದರಿಂದ ಬರೀ ಸಂವಹನದಲ್ಲಷ್ಟೇ ವ್ಯತ್ಯಯವಾಗಿರುವುದಲ್ಲ. ಜತೆಗೆ ಜಾಗತಿಕ ಆರ್ಥಿಕತೆಯಲ್ಲೂ ಭಾರಿ ನಷ್ಟ ಉಂಟಾಗಿದೆ.
ಸದ್ಯ ಒಂದು ಗಂಟೆಗೂ ಹೆಚ್ಚು ಕಾಲದಿಂದ ಈ ಮೂರೂ ಆ್ಯಪ್​ಗಳಿಗೆ ಸಂಬಂಧಿಸಿದಂತೆ ಸರ್ವರ್​ ಡೌನ್​ ಆಗಿದ್ದು, ಪರ್ಸನಲ್​ ಮೆಸೇಜಿಂಗ್ ಹಾಗೂ ಸೋಷಿಯಲ್ ಕಮ್ಯುನಿಕೇಷನ್​ ಎರಡೂ ಸಾಧ್ಯವಾಗುತ್ತಿಲ್ಲ. ಸದ್ಯ ಇವುಗಳಿಗೆ ಪರ್ಯಾಯವಾಗಿ ಡಿಜಿಟಲ್​ ಬಳಕೆದಾರರು ಟ್ವಿಟರ್​, ಟೆಲಿಗ್ರಾಂ ಹಾಗೂ ಸಿಗ್ನಲ್​ಗೆ ಮೊರೆ ಹೋಗಿದ್ದಾರೆ.

ಈ ನಡುವೆ ನೆಟ್​ಬ್ಲಾಕ್ಸ್​ನ ದ ಕಾಸ್ಟ್​ ಆಫ್​ ಶಟ್​ಡೌನ್​ ಟೂಲ್​ (COST) ಫೇಸ್​ಬುಕ್​, ವಾಟ್ಸ್​ಆ್ಯಪ್​, ಇನ್​ಸ್ಟಾಗ್ರಾಮ್​ನಿಂದ ಜಗತ್ತಿನ ಆರ್ಥಿಕತೆಗೆ ಗಂಟೆಯೊಂದರಲ್ಲಿ ಆಗಿರುವ ನಷ್ಟವನ್ನು ಅಂದಾಜಿಸಿದೆ. ಕಾಸ್ಟ್​ನ ಒಂದು ಅಂದಾಜಿನ ಪ್ರಕಾರ ಜಾಗತಿಕ ಆರ್ಥಿಕತೆಗೆ ಗಂಟೆಗೆ ಸುಮಾರು 160 ಮಿಲಿಯನ್​ ಡಾಲರ್ ನಷ್ಟ ಆಗುತ್ತಿದೆ. ಇದು ಇನ್ನೂ ಮುಂದುರಿಯುತ್ತಿದೆ. ಈ ತಾಂತ್ರಿಕ ವೈಫಲ್ಯ ಜಾಗತಿಕವಾಗಿ ಸಂಭವಿಸಿರುವುದರಿಂದ ಫೇಸ್​​ಬುಕ್​ನ ಷೇರು ಕೂಡ ಶೇ. 6 ಕುಸಿದಿದೆ.
ತಮ್ಮ ಸರ್ವರ್​ ಡೌನ್​ ಆಗಿರುವುದನ್ನು ಟ್ವಿಟರ್​ ಮೂಲಕ ಹೇಳಿಕೊಂಡಿರುವ ಫೇಸ್​ಬುಕ್​, ಅದಕ್ಕಾಗಿ ಬಳಕೆದಾರರ ಕ್ಷಮೆಯನ್ನೂ ಕೋರಿದೆ. ಆದರೆ ಸರ್ವರ್​ ಡೌನ್​ಗೆ ಕಾರಣ ಏನು ಎಂಬುದನ್ನು ತಿಳಿಸಿಲ್ಲ. ನಿಜವಾಗಿಯೂ ಸರ್ವರ್​ ಡೌನ್​ ಆಗಿದೆಯೇ ಅಥವಾ ಏನಾದರೂ ಹ್ಯಾಕ್​ ಆಗಿದೆಯೇ ಎಂಬುದು ಇನ್ನಷ್ಟೇ ತಿಳಿದುಬರಬೇಕಿದೆ. (ಏಜೆನ್ಸೀಸ್)
ಕೈಕೊಟ್ಟ ಫೇಸ್​ಬುಕ್​, ವಾಟ್ಸ್​ಆ್ಯಪ್​, ಇನ್​ಸ್ಟಾಗ್ರಾಮ್​; ಮೆಸೇಜಿಂಗ್​ನಲ್ಲಿ ಭಾರಿ ವ್ಯತ್ಯಯ!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 − 17 =
Remember me
