ನವದೆಹಲಿ:ಗೂಗಲ್, ಮೆಟಾ, ಎಕ್ಸ್ ನಂತಹ ಸಂಸ್ಥೆಗಳಿಗೆ ಶೀಘ್ರದಲ್ಲೇ ಭಾರತ ಭಾರಿ ಶಾಕ್​ ನೀಡಲಿದೆ. ಶೇ.೧೮ ಇಂಟಿಗ್ರೇಟೆಡ್​ ಗೂಡ್ಸ್​ ಅಂಡ್​ ಸರ್ವೀಸ್​ ಟ್ಯಾಕ್ಸ್​(ಐಜಿಎಸ್​ಟಿ) ವಿಧಿಸುವ ಸಾಧ್ಯತೆಯಿದೆ.
ಕೇಂದ್ರದ ಸೆಂಟ್ರಲ್​ ಬೋರ್ಡ್​ ಆಫ್​ ಡೈರೆಕ್ಟ್​ ಟ್ಯಾಕ್ಸ್​ ಅಂಡ್​ ಕಸ್ಟಮ್ಸ್​ ವಿಭಾಗವು ಐಜಿಎಸ್​ಯಿಂದ ಗೂಗಲ್, ಮೆಟಾ, ಎಕ್ಸ್ ನಂತಹಒಐಡಿಎಆರ್​ ಸಂಸ್ಥೆಗಳಿಗೆ ನೀಡಿರುವ ವಿನಾಯಿತಿ ರದ್ದಾಗಲಿದೆ. ಇದೇ ಅಕ್ಟೋಬರ್​ ನಿಂದ ಭಾರತದಲ್ಲಿ ಕಾರ್ಯನಿರ್ವಹಿಸುತ್ತಿರುವ ವಿದೇಶಿ ಜಾಹೀರಾತು, ಕ್ಲೌಡ್​ ಸರ್ವೀಸ್​, ಮ್ಯಾಜಿಕ್​, ಸಬ್​ಸ್ಕ್ರಿಪ್ಷನ್​ ಸರ್ವೀಸ್​, ಆನ್​ಲೈನ್​ ಶಿಕ್ಷಣ ನೀಡುತ್ತಿರುವ ಆಯಾ ಕಂಪೆನಿಗಳಿಂದ ಐಜಿಎಸ್​ಟಿಯನ್ನು ವಸೂಲಿ ಮಾಡಲು ಕೇಂದ್ರ ಸಿದ್ಧತೆ ನಡೆಸಿದೆ ಎಂದು ಕೇಂದ್ರದ ಅಧಿಕಾರಿಯೊಬ್ಬರು ಇತ್ತೀಚೆಗೆ ಹೇಳಿದ್ದಾರೆ.
ಪ್ರಸ್ತುತ ಓಐಡಿಎಆರ್​ ಸಂಸ್ಥೆಗಳು ಯಾವುದೇ ರೀತಿಯ ಟ್ಯಾಕ್ಸ್​ ಸಲ್ಲಿಸುತ್ತಿಲ್ಲ. ಕೇಂದ್ರ, ಆಯಾ ರಾಜ್ಯ ಸರ್ಕಾರಗಳು ತೆರಿಗೆ ವ್ಯಾಪ್ತಿಯಿಂದ ವಿನಾಯಿತಿ ನೀಡಿವೆ. ಕೇವಲ ಮಾರಾಟ ಸಂಸ್ಥೆಗಳು ಮಾತ್ರ ತೆರಿಗೆ ಸಲ್ಲಿಸುತ್ತಿವೆ. ಕೇಂದ್ರ ವಾಣಿಜ್ಯ ಇಲಾಖೆ ತೆಗೆದುಕೊಳ್ಳಲಿರುವ ಈ ನಿರ್ಧಾರವು ಗೂಗಲ್, ಮೆಟಾ, ಎಕ್ಸ್ ನಂತಹ ಕಂಪೆನಿಗಳು ಸಮಗ್ರ ಸರಕು ಮತ್ತು ಸೇವಾ ತೆರಿಗೆ ವ್ಯಾಪ್ತಿಗೆ ಒಳಪಡಲಿವೆ.
ಓಡಿಐಆರ್​ ಎಂದರೇನು?:ಓಡಿಐಆರ್ ಅನ್ನು ಆನ್​ಲೈನ್​ ಇನ್ಫರ್ ಮೇಷನ್​ ಡೇಟಾಬೇಸ್​ ಯಾಕ್ಸಿಸ್​ ಅಂಡ್​ ರಿಟ್ರೀವಲ್​ ಸರ್ವೀಸಸ್ ​ಎನ್ನುತ್ತಾರೆ. ಈ ವಿಭಾಗದಲ್ಲಿ ಸೇವೆ ಒದಗಿಸುವ ಸಂಸ್ಥೆಗಳಿಗೆ ಗ್ರಾಹಕರ ಜತೆ ಯಾವುದೇ ರೀತಿಯ ಭೌತಿಕ ಸಂಬಂಧವಿರುವುದಿಲ್ಲ. ಆನ್​ಲೈನ್​ ಮೂಲಕ ಗ್ರಾಹಕರ ಅಗತ್ಯತೆಗಳನ್ನು ತೀರಿಸುತ್ತವೆ. ಗೂಗಲ್, ಮೆಟಾ, ಎಕ್ಸ್ ನಂತಹ ಕಂಪೆನಿಗಳು ಇದೇ ಓಡಿಐಆರ್​ವ್ಯಾಪ್ತಿಗೆ ಬರುತ್ತವೆ.
ಇದನ್ನೂ ಓದಿ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × 4 =
Remember me
