|ಐ.ಎಸ್. ಪ್ರಸಾದ್ಅಧ್ಯಕ್ಷ, ಎಫ್​ಕೆಸಿಸಿಐ
ಕೇಂದ್ರ ಬಜೆಟ್​ನಲ್ಲಿ ಎಂಎಸ್​ಎಂಇ ಹಾಗೂ ತೆರಿಗೆ ಕ್ಷೇತ್ರದಲ್ಲಿ ತಂದಿರುವ ಬದಲಾವಣೆಗಳು ಆರ್ಥಿಕ ಸುಧಾರಣೆಗೆ ಪೂರಕವಾಗಿವೆ. ಎಸ್​ಎಂಇ ವಲಯ ಬೆಲೆ ಏರಿಕೆಯಿಂದ ಶೇ.85 ರಷ್ಟು ಹಾಗೂ ಕೋವಿಡ್​ನಿಂದ ಶೆ.15ರಷ್ಟು ಸಮಸ್ಯೆಗೆ ಒಳಗಾಗಿತ್ತು. ಇಂತಹ ಸಂದರ್ಭದಲ್ಲಿ ಸಾಲ ಹಾಗೂ ಕ್ರೆಡಿಟ್ ಗ್ಯಾರಂಟಿ ನೀಡುವುದರಿಂದ 2 ಲಕ್ಷ ಕೋಟಿ ರೂ.ಗಳ ತನಕ ನೆರವು ನೀಡಲು ಯೋಜನೆ ರೂಪಿಸಲಾಗಿದೆ. ಇದರಿಂದ ಸಣ್ಣ ಹಾಗೂ ಅತಿಸಣ್ಣ ಉದ್ದಿಮೆಗಳಿಗೆ ದುಡಿಯುವ ಬಂಡವಾಳ ಸಿಗುತ್ತದೆ. ಕೋವಿಡ್​ನಿಂದ ನಷ್ಟವಾಗಿದ್ದ ಉದ್ಯೋಗದ ಅವಕಾಶಗಳನ್ನು ಮತ್ತೆ ತುಂಬಿಕೊಳ್ಳಲು ಅನುಕೂಲವಾಗುತ್ತದೆ. ಸಣ್ಣ ಹಾಗೂ ಅತಿ ಸಣ್ಣ ಕೈಗಾರಿಕೆಗಳು ಸರಬರಾಜು ಮಾಡುವ ಉತ್ಪನ್ನಗಳಿಗೆ ಬಿಲ್ ಬರುವುದು ತಡವಾಗುತ್ತಿತ್ತು. ಈಗ ಅದನ್ನು 11 ದಿನಕ್ಕೆ ಇಳಿಸುವುದಾಗಿ ಘೋಷಣೆ ಮಾಡಿದ್ದಾರೆ. ಇದು ಜಾರಿಯಾದರೆ ಸಣ್ಣ ಕೈಗಾರಿಕೆ ವಲಯ ಉಸಿರಾಟ ಮಾಡಲು ಅನುಕೂಲವಾಗುತ್ತದೆ.
ಒನ್ ಸ್ಟೇಷನ್ ಒನ್ ಪ್ರಾಡಕ್ಟ್ ಯೋಜನೆಯಿಂದ ಗ್ರಾಮೀಣ ಭಾಗದಲ್ಲಿ ಕೈಗಾರಿಕೆಗಳ ಬೆಳವಣಿಗೆಗೆ ಸಹಕಾರಿಯಾಗಲಿದೆ. ಇದರಿಂದ ಆರ್ಥಿಕ ಚಟುವಟಿಕೆಗಳು ವೃದ್ಧಿಯಾಗುತ್ತವೆ. 75 ಜಿಲ್ಲೆಗಳಲ್ಲಿ ಡಿಜಿಟಲ್ ಬ್ಯಾಂಕ್ ಸ್ಥಾಪನೆ ಮಾಡುವುದು ಸಹ ಆರ್ಥಿಕ ಚಟುವಟಿಕೆಗಳಿಗೆ ಸಹಕಾರಿಯಾಗುತ್ತದೆ. ಕೋವಿಡ್ ಸಂದರ್ಭದಲ್ಲಿ ಲಸಿಕೆ ಮೂಲಕ ಜೀವ ಉಳಿಸಲಾಯಿತು. ಈಗ ಜೀವನೋಪಾಯ ವೃದ್ಧಿಯ ಕಡೆ ಗಮನ ಹರಿಸಲಾಗಿದೆ. ಗತಿಶಕ್ತಿ ಯೋಜನೆಯ ಮೂಲಕ ಸುಮಾರು 8 ಲಕ್ಷ ಕೋಟಿ ರೂ.ಗಳಷ್ಟು ಬಂಡವಾಳ ವೆಚ್ಚ ಹೆಚ್ಚು ಮಾಡಲಾಗಿದೆ. ಇದರಿಂದ ಸಿಮೆಂಟ್, ಉಕ್ಕು, ಉದ್ಯೋಗ ಬೆಳವಣಿಗೆೆಯ ಮೂಲಕ ದೇಶದ ಅಭಿವೃದ್ಧಿಯ ದಿಕ್ಕನ್ನು ಬದಲಾವಣೆ ಮಾಡಲಾಗುತ್ತಿದೆ. ಆದಾಯ ತೆರಿಗೆಯಲ್ಲಿ ಕಳೆದ ವರ್ಷ ಬದಲಾವಣೆ ಮಾಡಲಾಗಿತ್ತು. ಈ ವರ್ಷ ಬದಲಾವಣೆ ಮಾಡಿಲ್ಲ. ಆದರೆ ಪೆನಾಲ್ಟಿ ತೆಗೆದು ತಪು್ಪಗಳನ್ನು ಸರಿಪಡಿಸಲು ಸಮಯಾವಕಾಶ ವಿಸ್ತರಣೆ ಮಾಡಲಾಗಿದೆ.
ಪೆಟ್ರೋಲ್ ಮತ್ತು ಡಿಸೇಲ್​ನ್ನು ಜಿಎಸ್​ಟಿ ವ್ಯಾಪ್ತಿಗೆ ತಂದಿದ್ದರೆ ಒಳ್ಳೆಯದಾಗುತ್ತಿತ್ತು. ಆ ನಿಟ್ಟಿನಲ್ಲಿ ಏಕೋ ಇನ್ನೂ ಪ್ರಯತ್ನ ಮಾಡಿಲ್ಲ. ವಿತ್ತೀಯ ಕೊರತೆಯನ್ನು ಶೂನ್ಯಕ್ಕೆ ತರುವ ಪ್ರಯತ್ನ ಮಾಡಿಲ್ಲ. ಈಗ ಶೇ.6.9ರಷ್ಟು ಇದೆ. ಅದನ್ನು ಕಡಿಮೆ ಮಾಡಿದ್ದರೆ ಆರ್ಥಿಕ ಬೆಳವಣಿಗೆಗೆ ಇನ್ನಷ್ಟು ಸಹಾಯವಾಗುತ್ತಿತ್ತು. ಕೆಲವೊಂದು ವಸ್ತುಗಳ ಮೇಲಿನ ಜಿಎಸ್​ಟಿ ಕಡಿಮೆ ಮಾಡುವಂತೆ ಬೇಡಿಕೆ ಇಟ್ಟಿದ್ದೇವೆ. ಜಿಎಸ್​ಟಿ ಕೌನ್ಸಿಲ್​ನಲ್ಲಿ ಆ ಬಗ್ಗೆ ಗಮನ ಹರಿಸಬೇಕಾಗಿದೆ. ಒಟ್ಟಾರೆ ಈ ಬಜೆಟ್ ಅಭಿವೃದ್ಧಿಗೆ ಪೂರಕವಾಗಿದೆ ಎಂದು ಹೇಳಬಹುದಾಗಿದೆ.
ಅಮ್ಮನೊಂದಿಗೆ ಜಗಳವಾಡಿ ಮನೆ ಬಿಟ್ಟು ಹೋಗಿದ್ದವ ಬಾವಿಯಲ್ಲಿ ಶವವಾಗಿ ಪತ್ತೆ!

ಮನೆಯಲ್ಲಿ ಸಿಲಿಂಡರ್ ಸ್ಫೋಟ: ಸಹೋದರರಿಬ್ಬರ ಸಾವು, ಇನ್ನು ಮೂವರ ಸ್ಥಿತಿ ಚಿಂತಾಜನಕ..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen − fourteen =
Remember me
