ಬೆಂಗಳೂರು:ಹಳೆಯ ವಿದ್ಯಾರ್ಥಿಗಳು ವಾರ್ಷಿಕ ಪ್ರವಾಸಕ್ಕೆಂದು ಗೋವಾಗೆ ತೆರಳಿದ್ದ ವೇಳೆ ಧಾರವಾಡದಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದರು. ಇದೀಗ ಅಪಘಾತ ಕುರಿತು ಸಾಮಾಜಿಕ ಜಾಲತಾಣದಲ್ಲಿ ತಪ್ಪು ಸಂದೇಶವೊಂದು ಹರಿದಾಡುತ್ತಿದ್ದೆ.
ಹೌದು.ಫೇಸ್​ಬುಕ್​ ಬಳಕೆದಾರನೊಬ್ಬಫೋಟೋಗಳನ್ನು ಶೇರ್​ ಮಾಡಿ, ಮೃತರ ಆತ್ಮಕ್ಕೆ ಶಾಂತಿ (RIP) ಕೋರಿದ್ದಾನೆ. 17 ಮಹಿಳಾ ವೈದ್ಯರು ದಾವಣಗೆರೆಯಿಂದ ಗೋವಾ ಪ್ರವಾಸಕ್ಕೆ ತೆರಳಿದ್ದ ಮಿನಿಬಸ್​ ಬೆಂಗಳೂರು-ಪುಣೆ ಹೆದ್ದಾರಿಯಲ್ಲಿ ಮರಳು ತುಂಬಿದ ಟಿಪ್ಪರ್​ಗೆ ಡಿಕ್ಕಿ ಹೊಡೆದು ಎಲ್ಲರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತರು ಕರ್ನಾಟಕದ ದಾವಣಗೆರೆ ಜೆಜೆಎಂಎಂ ಕಾಲೇಜಿನ ಸ್ತ್ರೀರೋಗತಜ್ಞ ಪ್ರಾಧ್ಯಾಪಕರು. ಧಾರವಾಡದಲ್ಲಿ ಶುಕ್ರವಾರ ಬೆಳಗ್ಗೆ 7.30ಕ್ಕೆ ಅಪಘಾತ ಸಂಭವಿಸಿದೆ ಎಂದು ಬರೆದು ಜಾಲತಾಣದಲ್ಲಿ ವೈರಲ್​ ಮಾಡಲಾಗಿದೆ.
ಇದನ್ನೂ ಓದಿರಿ:ಆ ಒಂದು ವಾಟ್ಸ್​ಆ್ಯಪ್​ ಮೆಸೇಜ್​ಗೆ ಆತುರ ನಿರ್ಧಾರ: ಪ್ರೇಮಿಗಳಿಬ್ಬರ ದುರಂತ ಅಂತ್ಯ!
ಆದರೆ, ಫೇಸ್​ಬುಕ್​ ಬಳಕೆದಾರ ಹೇಳಿರುವುದು ಸುಳ್ಳು ಎಂಬುದು ನ್ಯೂಸ್​ಮೀಟರ್​ ವೆಬ್​ಸೈಟ್​ ನಡೆಸಿದ ಫ್ಯಾಕ್ಟ್​ಚೆಕ್​ನಲ್ಲಿ ಬಹಿರಂಗವಾಗಿದೆ. ಅನೇಕ ವೆಬ್​ಸೈಟ್​ ಮತ್ತು ನ್ಯೂಸ್​ ಪೇಪರ್​ಗಳಲ್ಲಿ ಪ್ರಕಟವಾಗಿರುವ ಸುದ್ದಿಯ ಪ್ರಕಾರ ಅಪಘಾತ ಧಾರವಾಡ ಜಿಲ್ಲೆಯ ಹುಬ್ಬಳ್ಳಿ-ಧಾರವಾಡ ಬೈಪಾಸ್​ ರಸ್ತೆಯಲ್ಲಿ ಸಂಭವಿಸಿದೆ.
ಔಟ್​ಲುಕ್​ ಮತ್ತು ಇಂಡಿಯಾ ಟುಡೆ ವರದಿ ಪ್ರಕಾರ ಮೃತರೆಲ್ಲರೂ ದಾವಣಗೆರೆಯ ಸೇಂಟ್​ ಪೌಲ್​ ಶಾಲೆಯ 1989ರ ಬ್ಯಾಚಿನ ವಿದ್ಯಾರ್ಥಿಗಳು. ವಾರ್ಷಿಕ ಹಳೆಯ ವಿದ್ಯಾರ್ಥಿಗಳ ಪ್ರವಾಸಕ್ಕೆ ಒಟ್ಟಿಗೆ ಸೇರಿದ್ದರು. ಎಲ್ಲರು ಒಟ್ಟಾಗಿ ಮಿನಿಬಸ್ ಮಾಡಿಕೊಂಡು ಜನವರಿ 15ರಂದು ಗೋವಾಗೆ ತೆರಳಿದ್ದರು. ಮುಂಜಾನೆ 7.30ರ ಸಮಯದಲ್ಲಿ ಹುಬ್ಬಳ್ಳಿ-ಧಾರವಾಡ ಬೈಪಾಸ್​ ರಸ್ತೆಯಲ್ಲಿ ಟಿಪ್ಪರ್​ಗೆ ಡಿಕ್ಕಿ ಹೊಡೆದ ಅಪಘಾತ ಸಂಭವಿಸಿತ್ತು.
ಧಾರವಾಡ ಗ್ರಾಮೀಣ ಪೊಲೀಸ್​ ವರಿಷ್ಠಾಧಿಕಾರಿ ಪಿ. ಕೃಷ್ಣಕಾಂತ್​ ಹೇಳುವ ಪ್ರಕಾರ ಅಪಘಾತದಲ್ಲಿ ಒಟ್ಟು 11 ಮಂದಿ ಮೃತಪಟ್ಟಿದ್ದಾರೆ. ಅದರಲ್ಲಿ 9 ಮಹಿಳೆಯರು. ಮೃತರೆಲ್ಲರೂ ವೈದ್ಯೆಯರು ಎಂಬ ವೈರಲ್​ ಪೋಸ್ಟ್ ಸುಳ್ಳು. ಮೃತರಲ್ಲಿ ಒಬ್ಬರೇ ಮಾತ್ರ ವೈದ್ಯರಿದ್ದರು. ಎಲ್ಲರು ಕೂಡ ಸೇಂಟ್​ ಪೌಲ್​ ಶಾಲೆಯ ಹಳೆಯ ವಿದ್ಯಾರ್ಥಿಗಳು ಎಂದು ಸ್ಪಷ್ಟನೆ ನೀಡಿದ್ದಾರೆ.
ಇದನ್ನೂ ಓದಿರಿ:‘ಥೂ.. ಅವಳು ಗಂಡೋ ಹೆಣ್ಣೋ? ಅವಳ ವಾಯ್ಸ್​ ನಾಯಿ ವಾಯ್ಸ್​ ತರ ಇದೆ’ ಎಂದಿದ್ದ ನೆರೆ ಮನೆಯ ಮಹಿಳೆಗೆ ತಕ್ಕ ಪಾಠ ಕಲಿಸಿದ ಮಹಿಳೆ
ರಸ್ತೆ ಅಪಘಾತದಲ್ಲಿ 17 ಮಂದಿ ಮಹಿಳಾ ವೈದ್ಯರು ಮೃತಪಟ್ಟಿದ್ದಾರೆ ಎಂದು ವೈರಲ್​ ಮಾಡಿರುವ ಪೋಸ್ಟ್​ ಸುಳ್ಳೆಂಬುದು ಫ್ಯಾಕ್ಟ್​ಚೆಕ್​ನಿಂದ ಬಯಲಾಗಿದೆ.(ಏಜೆನ್ಸೀಸ್​)
VIDEO| ಟ್ರ್ಯಾಕ್ಟರ್ ರ‍್ಯಾಲಿಯಲ್ಲಿ ಹೋಯ್ತು ನವವಿವಾಹಿತ ರೈತನ ಪ್ರಾಣ: ಪೊಲೀಸರ ವಿರುದ್ಧ ಗಂಭೀರ ಆರೋಪ!

ಎಟಿಎಂ ಕೀಪ್ಯಾಡ್​ ನೆಕ್ಕಿ ಅಶ್ಲೀಲ ಪದ ಪ್ರಯೋಗಿಸಿದ ಅಪರಿಚಿತ: ಬೆಚ್ಚಿಬಿದ್ದ ಮಹಿಳೆಯಿಂದ ದೂರು!

ಪ್ರೀತಿಸಿದ ಯುವತಿ ಗಿಡಕ್ಕೆ ನೀರು ಹಾಕುತ್ತಿದ್ದರೆ, ಬಿಲ್ಡಿಂಗ್ ಹಾರಿ ಬಂದ ಯುವಕ ಹೀಗಾ ಮಾಡೋದು?!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × one =
Remember me
