ಹೈದರಾಬಾದ್​:ಗ್ರೇಟರ್​ ಹೈದರಾಬಾದ್​ ಮುನ್ಸಿಪಲ್ ಕಾರ್ಪೊರೇಷನ್ (ಜಿಎಚ್​ಎಂಸಿ) ಚುನಾವಣೆ ಡಿಸೆಂಬರ್​ 1ರಂದು ನಡೆದಿದ್ದು, ಇಂದು ಮತಎಣಿಕೆ ನಡೆಯುತ್ತಿದೆ. ತೆಲಂಗಾಣ ರಾಜ್ಯ ಚುನಾವಣಾ ಆಯೋಗವು ಹೈದರಾಬಾದ್​ನ ಸುಮಾರು 30 ಕೇಂದ್ರಗಳಲ್ಲಿ ಮತಎಣಿಕೆ ನಡೆಸುತ್ತಿದೆ.
ಇದರ ನಡುವೆ ವಿ6 ಚಾನಲ್​ಗೆ ಸಂಬಂಧಿಸಿದ್ದು ಎನ್ನಲಾದ ವಿಡಿಯೋವೊಂದು ವೈರಲ್​ ಆಗಿದ್ದು, ತೆಲಂಗಾಣ ಚುನಾವಣಾ ಆಯೋಗವು ಕೇವಲ 17 ವರ್ಷದ ವಿದ್ಯಾರ್ಥಿಚುನಾವಣಾ ಅಧಿಕಾರಿಯನ್ನಾಗಿ ನೇಮಕ ಮಾಡಿದೆ ಎಂಬ ವಿಚಾರ ವಿಡಿಯೋದಲ್ಲಿದೆ. ಆದರೆ, ವಿಡಿಯೋ ಕುರಿತಾದ ಅಸಲಿಯತ್ತು ಹುಡುಕಿ ಹೊರಟಾಗ ಇದೊಂದು ಸುಳ್ಳು ಎಂಬುದು ಬಯಲಾಗಿದೆ.

ಇದನ್ನೂ ಓದಿ:VIDEO| ಕಾರು ಗುದ್ದಿದ ರಭಸಕ್ಕೆ ರಾಯಲ್ ಎನ್ಫೀಲ್ಡ್ ಎರಡು ಪೀಸ್: ಸ್ವಾಧೀನ ಕಳೆದುಕೊಂಡ ಸವಾರನ ಅರ್ಧ ದೇಹ!
ಫ್ಯಾಕ್ಟ್​ಚೆಕ್​ನಲ್ಲಿ ತಿಳಿದುಬಂದ ಸತ್ಯಾಂಶವೇನು?ಚುನಾವಣಾ ಆಯೋಗ ಹೊರಡಿಸಿರುವ ಪತ್ರಿಕಾ ಪ್ರಕಟಣೆಯ ಪ್ರಕಾರ ವಿಡಿಯೋದಲ್ಲಿರುವ ವಿದ್ಯಾರ್ಥಿಯನ್ನು ವೆಬ್​ಕಾಸ್ಟಿಂಗ್​ ನಡೆಸಲು ನೇಮಕ ಮಾಡಲಾಗಿದೆ. ಕಂಪ್ಯೂಟರ್​ ಜ್ಞಾನ ಹೊಂದಿರುವ ವಿದ್ಯಾರ್ಥಿಗಳನ್ನು ಮಾತ್ರ ವೆಬ್​ಕಾಸ್ಟಿಂಗ್​ ನಡೆಸಲು ನೇಮಕ ಮಾಡಿಕೊಳ್ಳಲಾಗುತ್ತದೆ.
ಹುಡುಗನು ಇತರೆ ಚುನಾವಣಾ ಅಧಿಕಾರಿಗಳೊಂದಿಗೆ ಊಟಕ್ಕೆ ಮಾತ್ರ ಕುಳಿತುಕೊಂಡಿದ್ದ ಹೊರತು, ಆತನನ್ನು ಯಾವುದೇ ಚುನಾವಣಾ ಕರ್ತವ್ಯಕ್ಕೆ ನೇಮಕ ಮಾಡಲಾಗಿಲ್ಲ ಎಂದು ನ್ಯೂಸ್​ಮೀಟರ್​ ವೆಬ್​ಸೈಟ್​ ನಡೆಸಿದ ಫ್ಯಾಕ್ಟ್​ಚೆಕ್​ ಬಹಿರಂಗಪಡಿಸಿದೆ.(ಏಜೆನ್ಸೀಸ್​)
https://www.vijayavani.net/bride-leaves-from-marriage-hall/
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × two =
Remember me
