ನವದೆಹಲಿ:ಸಾಮಾಜಿಕ ಮಾಧ್ಯಮ, ಓಟಿಟಿ ಮತ್ತು ಡಿಜಿಟಲ್​ ಕಂಟೆಂಟ್​ಗಳನ್ನು ನಿಯಂತ್ರಿಸಲು ಫೆಬ್ರವರಿ 25ರಂದು ಕೇಂದ್ರ ಸರ್ಕಾರ ಹೊಸ ಮಾರ್ಗಸೂಚಿಯನ್ನು ಘೋಷಿಸಿದೆ. ಇದರ ನಡುವೆ ಹೊಸ ಮಾರ್ಗಸೂಚಿಯ ಪ್ರಕಾರ ಮೂರು ತಿಂಗಳ ಒಳಗೆ ಎಲ್ಲ ಜಾಲತಾಣ ಖಾತೆಗಳನ್ನು ಸರ್ಕಾರದ ಐಡಿಯೊಂದಿಗೆ ಪರಿಶೀಲಿಸಿಕೊಳ್ಳಬೇಕು ಇಲ್ಲದಿದ್ದರೆ ಬ್ಲಾಕ್​ ಆಗುತ್ತದೆ ಎಂಬ ಪೋಸ್ಟ್​ ಒಂದು ಜಾಲತಾಣದಲ್ಲಿ ವೈರಲ್​ ಆಗಿದೆ.
ಇದೇ ಸಂದೇಶವನ್ನು ದೆಹಲಿ ಹೈಕೋರ್ಟ್​ ವಕೀಲ ಪ್ರಶಾಂತ್​ ಪಟೇಲ್​ ಉಮ್ರಾವ್​ ಸಹ ಅಧಿಕೃತ ಟ್ವಿಟರ್​ನಲ್ಲಿ ಪೋಸ್ಟ್​ ಮಾಡಿದ್ದಾರೆ. ಎಲ್ಲ ಸಾಮಾಜಿಕ ಜಾಲತಾಣ ಖಾತೆಗಳನ್ನು ತಮ್ಮ ಮೊಬೈಲ್​ ಫೋನ್​ ಮೂಲಕ ಸರ್ಕಾರದ ಐಡಿಯೊಂದಿಗೆ ಮೂರು ತಿಂಗಳ ಒಳಗೆ ಪರಿಶೀಲಿಸಿಕೊಳ್ಳಬೇಕು. ಇದೊಂದು ಸ್ವಾಗತಾರ್ಹ ನಡೆಯಾಗಿದೆ. ಇದೀಗ ಅಂತರ್ಜಾಲ ಸುರಕ್ಷಿತ ಮತ್ತು ಹೆಚ್ಚು ಜವಾಬ್ದಾರಿಯುತವಾಗಿದೆ. ಬಳಕೆದಾರರ ಹಕ್ಕುಗಳನ್ನು ರಕ್ಷಿಸಲು ಸರ್ಕಾರವು ಮಧ್ಯವರ್ತಿ ಮಾರ್ಗಸೂಚಿಗಳು ಮತ್ತು ಡಿಜಿಟಲ್ ಮೀಡಿಯಾ ಎಥಿಕ್ಸ್ ಕೋಡ್ ನಿಯಮಗಳನ್ನು ಘೋಷಣೆ ಮಾಡಿದೆ ಎಂದು ಉಮ್ರಾವ್​ ಫೆ. 25ರಂದು ಟ್ವಿಟರ್​ನಲ್ಲಿ ಪೋಸ್ಟ್​ ಮಾಡಿದ್ದಾರೆ.
ಇದನ್ನೂ ಓದಿರಿ:ಟಿಕ್​ಟಾಕ್​ ಸ್ಟಾರ್​ ಆತ್ಮಹತ್ಯೆ ಹಿಂದೆ ಮಹಾ ಸಚಿವನ ಕೈವಾಡ? ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟ ನಾಯಕ

ಆದರೆ, ಇದೊಂದು ದಾರಿತಪ್ಪಿಸುವ ಸಂದೇಶವೆಂಬುದು ಇಂಡಿಯಾ ಟುಡೆ ಆ್ಯಂಟಿ ಫೇಕ್​ ನ್ಯೂಸ್​ ವಾರ್​ ರೂಮ್​ ನಡೆಸಿದ ಫ್ಯಾಕ್ಟ್​ಚೆಕ್​ನಿಂದ ಬಯಲಾಗಿದೆ. ಜಾಲತಾಣ ಖಾತೆಗಳ ಪರಿಶೀಲನೆ ಕಡ್ಡಾಯವೆಂದು ಸರ್ಕಾರ ಹೇಳಿಲ್ಲ. ಬದಲಾಗಿ ತಮ್ಮ ಖಾತೆಗಳನ್ನು ಸ್ವಯಂಪ್ರೇರಣೆಯಿಂದ ಪರಿಶೀಲಿಸಲು ಬಯಸುವ ಬಳಕೆದಾರರಿಗೆ ಸೂಕ್ತವಾದ ವ್ಯವಸ್ಥೆಯನ್ನು ಒದಗಿಸುವಂತೆ ಸಾಮಾಜಿಕ ಮಾಧ್ಯಮ ವೇದಿಕೆಗಳನ್ನು ಸರ್ಕಾರ ಕೇಳಿದೆ.
ಹರಿದಾಡುತ್ತಿರುವ ತಪ್ಪು ಸಂದೇಶವುಳ್ಳ ಪೋಸ್ಟ್​ ಕುರಿತಾದ ನಂಬಲಾರ್ಹ ಯಾವುದೇ ನ್ಯೂಸ್ ದೊರೆತಿಲ್ಲ. ಮೂರು ತಿಂಗಳ ಒಳಗೆ ಜಾಲತಾಣ ಖಾತೆಗಳನ್ನು ಪರಿಶೀಲಿಸಬೇಕೆಂದು ಸರ್ಕಾರ ಹೇಳಿರುವ ಬಗ್ಗೆಯು ಯಾವುದೇ ಖಚಿತ ವರದಿ ದೊರೆತಿಲ್ಲ. ಆದರೆ, ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ರವಿಶಂಕರ್ ಪ್ರಸಾದ್ ಮತ್ತು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಪ್ರಕಾಶ್ ಜಾವಡೇಕರ್ ಅವರು ನಡೆಸಿದ ಜಂಟಿ ಸುದ್ದಿಗೋಷ್ಠಿಯಲ್ಲಿ ನೂತನ ಡಿಜಿಟಲ್ ಮೀಡಿಯಾ ಎಥಿಕ್ಸ್ ಕೋಡ್​ಗಳನ್ನು ಘೋಷಣೆ ಮಾಡಲಾಗಿದೆ.
ಇದನ್ನೂ ಓದಿರಿ:ಸಲಿಂಗಕಾಮಿ ಸೋದರನಿಗಾಗಿ ಬಾಡಿಗೆ ತಾಯಿಯಾದಳು; ಆರು ಮಕ್ಕಳ ತಾಯಿಯಿಂದ ವಿಶೇಷ ಪ್ರಯತ್ನ
ಖಾತೆಗಳ ಪರಿಶೀಲನೆ ಬಗ್ಗೆ ರವಿಶಂಕರ್​ ಪ್ರಸಾದ್​ ಅವರು ಮಾತನಾಡಿರುವ ವಿಡಿಯೋವನ್ನು ಪ್ರೆಸ್​ ಇನ್ಫರ್ಮೇಶನ್​ ಬ್ಯೂರೋ ಆಫ್​ ಇಂಡಿಯಾ ತನ್ನ ಅಧಿಕೃತ ಟ್ವಿಟರ್​ನಲ್ಲಿ ಶೇರ್​ ಮಾಡಿದೆ. ವಿಡಿಯೋದಲ್ಲಿ ಇರುವಂತೆ ತಮ್ಮ ಖಾತೆಗಳನ್ನು ಸ್ವಯಂಪ್ರೇರಣೆಯಿಂದ ಪರಿಶೀಲಿಸಲು ಬಯಸುವ ಬಳಕೆದಾರರಿಗೆ ಅವರ ಖಾತೆಗಳನ್ನು ಪರಿಶೀಲಿಸಲು ಸೂಕ್ತವಾದ ಕಾರ್ಯವಿಧಾನವನ್ನು ಒದಗಿಸಲಾಗುತ್ತದೆ ಮತ್ತು ಪರಿಶೀಲನೆಯ ಮಾಡಬಹುದಾದ ಮತ್ತು ಗೋಚರಿಸುವ ಗುರುತಗಳನ್ನು ಒದಗಿಸಲಾಗುತ್ತದೆ ಎಂದು ಕೇಂದ್ರ ಸಚಿವರು ತಿಳಿಸಿದ್ದಾರೆ.
Users who wish to verify their accounts voluntarily shall be provided an appropriate mechanism to verify their accounts and provided with demonstrable and visible mark of verification: Union Minister@rsprasad#ResponsibleFreedom#OTTplatforms
Read:https://t.co/4P1rLLjlnFpic.twitter.com/8JVZjUhAu2
— PIB India (@PIB_India)February 25, 2021

ಸೋಷಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್‌ಗಳು ಸ್ವಯಂಪ್ರೇರಿತ ಪರಿಶೀಲನಾ ಕಾರ್ಯವಿಧಾನವನ್ನು ಹೊಂದಿರಬೇಕೆಂದು ಪ್ರಸಾದ್ ಹೇಳುವುದನ್ನು ಕೇಳಬಹುದು. ಆದರೆ, ಎಲ್ಲಿಯೂ ಖಾತೆಗಳ ಪರಿಶೀಲನೆ ಕಡ್ಡಾಯವೆಂದು ಪ್ರಸಾದ್​ ಅವರು ಹೇಳಿಲ್ಲ. ಅನೇಕ ಮಾಧ್ಯಮಗಳು ಹೊಸ ಮಾರ್ಗಸೂಚಿಯ ಬಗ್ಗೆ ವರದಿ ಮಾಡಿದ್ದು, ಯಾವುದೇ ವರದಿಯಲ್ಲೂ ಜಾಲತಾಣ ಖಾತೆಗಳ ಪರಿಶೀಲನೆ ಕಡ್ಡಾಯವೆಂದು ಉಲ್ಲೇಖವಾಗಿಲ್ಲ.

ಇದನ್ನೂ ಓದಿರಿ:ನಿಮ್ಮ ಕಣ್ಣಿಗೊಂದು ಸವಾಲ್:​ ಚಿತ್ರದಲ್ಲಿರೋ ಭಾರಿ ಗಾತ್ರದ ಹೆಬ್ಬಾವು ಪತ್ತೆ ಹಚ್ಚಿದ್ರೆ ನೀವೇ ಗ್ರೇಟ್!
ಕೊನೆಯದಾಗಿ ತಿಳಿಯುವುದೇನೆಂದರೆ ಮೂರು ತಿಂಗಳ ಒಳಗೆ ಜಾಲತಾಣ ಖಾತೆಗಳನ್ನು ಪರಿಶೀಲಿಸದಿದ್ದರೆ ಖಾತೆಗಳು ರದ್ದಾಗುತ್ತವೆ ಎಂಬುದು ಸುಳ್ಳು. ವೈರಲ್​ ಪೋಸ್ಟ್​ ಹಿಂದೆ ಅಪಪ್ರಚಾರದ ಉದ್ದೇಶವಿದೆ. ಜಾಲತಾಣ ಖಾತೆಗಳ ಪರಿಶೀಲನೆಗೆ ಸ್ವಯಂಪ್ರೇರಿತ ಪರಿಶೀಲನಾ ಕಾರ್ಯವಿಧಾನವಿರಲಿದೆ ಹೊರತು ಕಡ್ಡಾಯವೇನಿಲ್ಲ ಎಂಬುದು ಫ್ಯಾಕ್ಟ್​ಚೆಕ್​ನಿಂದ ತಿಳಿದುಬಂದಿದೆ.(ಏಜೆನ್ಸೀಸ್​)
Web Exclusive | ಪಶು ವಿವಿ ಇಬ್ಭಾಗ ಸನ್ನಿಹಿತ?: ಸಿಎಂ ತವರಿನಲ್ಲಿ ಇನ್ನೊಂದು ವಿಶ್ವವಿದ್ಯಾಲಯ ಸ್ಥಾಪನೆಗೆ ತಯಾರಿ, ಕಲ್ಯಾಣ ಕರ್ನಾಟಕಕ್ಕೆ ಬರೆ

ಎಫ್‌ಡಿಎ ಪರೀಕ್ಷೆಯಲ್ಲಿ ನಕಲು ಪ್ರಕರಣ: ಗ್ರೂಪ್ ಡಿ ನೌಕರ ವಶಕ್ಕೆ, ಪರಾರಿ ಆಗಿರುವ ಅಭ್ಯರ್ಥಿಗಾಗಿ ಶೋಧ

ಆಟೋಚಾಲಕನ ಮೇಲೆ ಮಂಗಳಮುಖಿಯರಿಂದ ಹಲ್ಲೆ; ತಮ್ಮ ಅಡ್ಡೆ ಬಳಿ ಮೂತ್ರವಿಸರ್ಜಿಸಿದರು ಎಂಬ ಕಾರಣಕ್ಕೆ ಥಳಿತ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 − eighteen =
Remember me
