ಹೈದರಾಬಾದ್​:ಸೋಲು ಜೀವನದ ಅಂತ್ಯವಲ್ಲ ಎಂಬುದನ್ನು ತೆಲಂಗಾಣದ ರೈತ ಬಿ. ಮಹಿಪಾಲ್ ರೆಡ್ಡಿ ಸಾಬೀತುಪಡಿಸಿದ್ದಾರೆ. ಎಸ್ಸೆಸ್ಸೆಲ್ಸಿಯಲ್ಲಿ ಫೇಲಾದ ಬಳಿಕ ಕೃಷಿಯತ್ತ ಮುಖ ಮಾಡಿದ ಮಹಿಪಾಲ್​, ಇದೀಗ ತಮ್ಮ ಪರಿಶ್ರಮದಿಂದ ಟೊಮ್ಯಾಟೋ ಬೆಳೆದು ಕೇವಲ ಒಂದು ತಿಂಗಳಲ್ಲಿ 1.8 ಕೋಟಿ ರೂ. ಲಾಭ ಮಾಡಿದ್ದಾರೆ.
ಕರ್ನಾಟಕ, ಆಂಧ್ರಪ್ರದೇಶ ಸೇರಿದಂತೆ ದೇಶದಲ್ಲಿ ಟೊಮ್ಯಾಟೋ ಕೊರತೆಯಿಂದ ಬೆಲೆ ಗಗನಕ್ಕೇರಿದೆ. ಇದು ಮಹಿಪಾಲ್​ಗೆ ವರವಾಗಿ ಪರಿಣಮಿಸಿದ್ದು, ಟೊಮ್ಯಾಟೋ ಬೆಳೆಯಿಂದ ಕೋಟ್ಯಧಿಪತಿಯಾಗಿದ್ದಾನೆ. ಟೊಮ್ಯಾಟೋಗೆ ಭಾರೀ ಬೇಡಿಕೆ ಇದ್ದು, ಹೈದರಾಬಾದ್​ ಮಾರುಕಟ್ಟೆಯಲ್ಲಿ ಕೆಜಿ 100 ರೂ.ನಂತೆ ಮಾರಾಟವಾಗುತ್ತಿದೆ.
ಇದನ್ನೂ ಓದಿ:ಪ್ರೀತಿಸಿ ಕೈಕೊಟ್ಟ ಯುವಕ: ಪಾಲಕರಿಗೆ ತಿಳಿಸದೇ 1 ವಾರ ನೋವಿನಿಂದಲೇ ನರಳಿ ಪ್ರಾಣ ಬಿಟ್ಟ ಯುವತಿ
ಮಹಿಪಾಲ್​ ಅವರು ತಮ್ಮ 8 ಎಕರೆ ತೋಟದಲ್ಲಿ ಟೊಮ್ಯಾಟೋ ಕೃಷಿ ಮಾಡಿದ ಸಮಯದಲ್ಲೇ ದೇಶದಲ್ಲಿ ಟೊಮ್ಯಾಟೋ ಬಿಕ್ಕಟ್ಟು ತಲೆದೂರಿರುವುದು ಮಹಿಪಾಲ್​ಗೆ ಲಾಭವಾಗಿ ಪರಿಣಮಿಸಿದೆ. ಏಪ್ರಿಲ್​ 15ರಂದು ಟೊಮ್ಯಾಟೋ ಬೆಳೆಯಲು ಆರಂಭಿಸಿದ ಮಹಿಪಾಲ್​, ಜೂನ್​ 15ರಂದು ಬೆಳೆ ಮಾರಾಟ ಮಾಡಲು ಶುರು ಮಾಡಿದರು.
ಅನಿರೀಕ್ಷಿತ ಮಳೆಯಿಂದಾಗಿ ಎಂಟು ಎಕರೆಯಲ್ಲಿ ಬೆಳೆದಿದ್ದ ಬೆಳೆಯಲ್ಲಿ ಕೆಲವು ಬೆಳೆ ನಷ್ಟವಾದ ಕಾರಣ ಮಹಿಪಾಲ್​ಗೆ ಆತಂಕವೂ ಕಾಡಿತ್ತು. ಆದರೆ, 40 ರಷ್ಟು ಬೆಳೆಗಳು ಇನ್ನೂ ಹಾಳಾಗದಿರುವುದರಿಂದ ಈ ಋತುವಿನಲ್ಲಿ ಅವರ ಆದಾಯವು 2 ಕೋಟಿ ರೂಪಾಯಿಗಳನ್ನು ತಲುಪಲಿದೆ ಎಂದು ಹೇಳಿದ್ದಾರೆ.
ಈ ವರ್ಷ ಅವರು ಟೊಮ್ಯಾಟೋ ಕೃಷಿ ಮಾಡಲು ಪ್ರತಿ ಎಕರೆಗೆ ಸುಮಾರು ಎರಡು ಲಕ್ಷ ರೂಪಾಯಿ ಹೂಡಿಕೆ ಮಾಡಿದ್ದರು. ಇದೀಗ ಉತ್ತಮ ಇಳುವರಿ ಬಂದಿದ್ದು, ಅವರು ಶ್ರಮ ಫಲಪ್ರದವಾಗಿದೆ. ಈವರೆಗೂ 7,000 ಬಾಕ್ಸ್ ಟೊಮ್ಯಾಟೋ ಮಾರಾಟ ಮಾಡಿರುವ ಮಹಿಪಾಲ್​ ಒಂದೇ ತಿಂಗಳಲ್ಲಿ 1.8 ಕೋಟಿ ರೂ. ಸಂಪಾದನೆ ಮಾಡಿದ್ದಾರೆ.(ಏಜೆನ್ಸೀಸ್​)
ಇತ್ತ ಹಣವೂ ಇಲ್ಲ, ಪ್ರೀತಿಯೂ ಇಲ್ಲ ಎಂದು ಹತಾಶೆಗೊಂಡು ಪ್ರಿಯಕರನಿಗೆ ಚಾಕು ಇರಿದ ಪ್ರಿಯತಮೆ!

ಗಟ್ಟಿ ದನಿಯಲ್ಲಿ ಅಬ್ಬರಿಸಿದರೆ ಸುಳ್ಳು ಸತ್ಯವಾಗುವುದಿಲ್ಲ: ಸಿಎಂ ಸಿದ್ದುಗೆ ಮಾಜಿ ಸಿಎಂ ಎಚ್​ಡಿಕೆ ತಿರುಗೇಟು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × four =
Remember me
