ಹೈದರಾಬಾದ್​:ವ್ಯಕ್ತಿಯೊಬ್ಬ ಸೇನಾಧಿಕಾರಿಯ ಸೋಗಿನಲ್ಲಿ ಸುಮಾರು 17 ಮಹಿಳೆಯರನ್ನು ಮದುವೆಯಾಗುವುದಾಗಿ ನಂಬಿಸಿ, ಬರೋಬ್ಬರಿ 6.61 ಕೋಟಿ ರೂ. ವಂಚಿಸಿರುವ ಪ್ರಕರಣ ಹೈದಾರಾಬಾದ್​ನಲ್ಲಿ ಬೆಳಕಿಗೆ ಬಂದಿದ್ದು, ಆರೋಪಿಯನ್ನು ಬಂಧಿಸಲಾಗಿದೆ.
ಬಂಧಿತ ನಕಲಿ ಸೇನಾಧಿಕಾರಿಯನ್ನು ಮುದವತ್​ ಶ್ರೀನು ನಾಯ್ಕ್​ (42) ಎಂದು ಗುರುತಿಸಲಾಗಿದೆ. ಈತ ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯ ಸೈನಿಕಪುರಿ ಏರಿಯಾ ನಿವಾಸಿ. ಕೇವಲ 9ನೇ ತರಗತಿ ಓದಿರುವ ಮುದವತ್​, ಭಾರತೀಯ ಸೇನೆಯ ಮೇಜರ್​ ಎಂದು ಹೇಳಿಕೊಂಡು ಸೇನಾಧಿಕಾರಿಯಂತೇ ಯೂನಿಫಾರ್ಮ್​ ತೊಟ್ಟ ಯಾಮಾರಿಸುತ್ತಿದ್ದ.
ಶ್ರೀನಿವಾಸ್​ ಚೌಹಾಣ್​ ಹೆಸರಲ್ಲಿ 12/07/1979ರ ಬದಲಾಗಿ 27/08/1986 ಸುಳ್ಳ ಜನ್ಮ ದಿನಾಂಕ ಹೊಂದಿದ್ದ ಆಧಾರ್​ ಕಾರ್ಡ್​ ಪಡೆದಿದ್ದ. ಅಲ್ಲದೆ, ಮೇಘಾಲಯ ಸಿಎಂಜೆ ಯೂನಿವರ್ಸಿಟಿಯಲ್ಲಿ ಎಂಟೆಕ್​ ಪದವಿ ಪಡೆದಿರುವ ನಕಲಿ ಪ್ರಮಾಣ ಪತ್ರವನ್ನು ಪಡೆದುಕೊಂಡಿದ್ದ. ಮಹಿಳೆಯರನ್ನು ಯಾಮಾರಿಸಲು ಏನೆಲ್ಲಾ ದಾಖಲೆಗಳ ಅವಶ್ಯಕತೆ ಇತ್ತೋ ಅದನೆಲ್ಲ ಆರೋಪಿ ರೆಡಿ ಮಾಡಿಕೊಂಡಿದ್ದ.
ಇದನ್ನೂ ಓದಿ:ಚಿಕ್ಕ ವಯಸ್ಸಿಗೇ ಚೆಫ್​ ಆದ್ರು ಗೋಲ್ಡನ್​ ಸ್ಟಾರ್​ ಗಣೇಶ್​ ಮಗಳು; ಈ ಕ್ಯೂಟ್​ ವಿಡಿಯೋಗೆ ನೀವು ಫಿದಾ ಆಗೋದು ಗ್ಯಾರಂಟಿ
ಚೌಹಾಣ್​ ಹೆಸರಲ್ಲಿ ಸೇನೆಯ ನಕಲಿ ಗುರುತಿನ ಚೀಟಿಯನ್ನೂ ಹೊಂದಿದ್ದ. ಯೂನಿಫಾರ್ಮ್​, ಕ್ಯಾಪ್ಸ್​, ಶೂ, ಅವಾರ್ಡ್​ ಬ್ಯಾಡ್ಜ್ಸ್​, ನಕಲಿ ಪಿಸ್ತೂಲ್​ ಖರೀದಿಸಿ ಅವುಗಳನ್ನು ಧರಿಸಿ ಫೋಟೋ ತೆಗೆಸಿಕೊಂಡು ಯುವತಿಯರನ್ನು ತನ್ನತ್ತ ಸೆಳೆಯಲು ಸಾಮಾಜಿಕ ಜಾಲತಾಣದಲ್ಲಿ ಅಪ್​ಲೋಡ್​ ಮಾಡುತ್ತಿದ್ದ. ಮೋಸ ಹೋದ ಮಹಿಳೆಯರು ನೀಡಿದ ದೂರಿನ ಆಧಾರದ ಮೇಲೆ ಆರೋಪಿಯನ್ನು ಬಂಧಿಸಲಾಗಿದೆ.
ಇತ್ತ ಸೇನಾಧಿಕಾರಿಯನ್ನು ಮದುವೆಯಾಗುವ ಆಸೆಯಲ್ಲಿ ಹಣ ಕಳೆದುಕೊಂಡ ಮಹಿಳೆಯರು ಚಿಂತೆಯಲ್ಲಿ ಮುಳುಗುವಂತಾಗಿದೆ.(ಏಜೆನ್ಸೀಸ್​)
ಇಡೀ ಗ್ರಾಮಕ್ಕೆ ಕರೊನಾ ಅಂಟಿರುವಾಗ ಈತನ ಬಳಿ ಸೋಂಕು ಸುಳಿಯಲೇ ಇಲ್ಲ: ಕಾರಣ ನಿಜಕ್ಕೂ ಅಚ್ಚರಿ!​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × five =
Remember me
