ವಿಜಯವಾಡ:ಮೊಳೆ ಹೊಡೆದರೆ ದೋಷ ನಿವಾರಣೆಯಾಗುತ್ತದೆ ಎಂಬ ಬಾಬಾರ ಮಾತನ್ನು ನಂಬಿ ಮಹಿಳೆಯೊಬ್ಬರು ಮೋಸ ಹೋಗಿರುವ ಘಟನೆ ಆಂಧ್ರಪ್ರದೇಶದ ವಿಜಯವಾಡದ ಬಳಿ ನಡೆದಿದೆ.ವಿಜಯವಾಡ ಮೂಲದ ಸುಂಕರ ರಜಿನಿ ಅವರು ಮಚಲಿಪಟ್ಟಣದ ಇನಕುದೂರು ಎಂಬಲ್ಲಿ ನಿವೇಶನ ಖರೀದಿಸಿದ್ದಾರೆ. ರೂ.35 ಲಕ್ಷಕ್ಕೆ ಖರೀದಿಸಿದ ಜಮೀನು ಮಾರಾಟವಾಗದ ಹಿನ್ನೆಲೆಯಲ್ಲಿ ಮತ್ತೊಬ್ಬ ಭಕ್ತ ಮೌಲಾಲಾ ಎಂಬ ದರೋಡೆಕೋರ ಬಾಬಾನನ್ನು ರಜನಿಗೆ ಪರಿಚಯಿಸಿದ್ದಾನೆ.
ಇದನ್ನೂ ಓದಿ:ರಾತ್ರಿಯಿಡೀ ಕಷ್ಟಪಟ್ಟು ಎಟಿಎಂ ಮುರಿದ ಕಳ್ಳರು: ಕೊನೆಗೆ ಪೆಚ್ಚು ಮೋರೆ ಹಾಕಿಕೊಂಡು ಹೋದ್ರು..ಬಳಿಕ ಮಹಿಳೆಯು ನಕಲಿ ಬಾಬಾನ ಕಡೆಗೆ ಹೋಗಿದ್ದು ಆತ ಸ್ಥಳವನ್ನು ಮಾರಾಟ ಮಾಡಬೇಕಾದರೆ ಅಲ್ಲಿ ಪೂಜೆ ಮಾಡಿ ನಾಲ್ಕು ಮೂಲೆಗಳಲ್ಲಿ ನಾಲ್ಕು ಮೊಳೆಗಳನ್ನು ಹೊಡೆಯಬೇಕು ಎಂದು ಹೇಳಿದ್ದ. ಇದಕ್ಕೊಪ್ಪಿದ ಮಹಿಳೆಯು ಆತನಿಗೆ ಪೂಜೆಗಾಗಿ ಎರಡೂವರೆ ಲಕ್ಷ ರೂ.ಗಳನ್ನು ನೀಡಿದ್ದು, ಆ ಬಳಿಕ ಆತ ನಾಲ್ಕು ಮೊಳೆಗಳನ್ನು ಹೊಡೆದಿದ್ದಾನೆ.ಇದಾದ ಬಳಿಕ ನಕಲಿ ಬಾಬ ತನ್ನ ನಿಜವಾದ ನಾಟಕವನ್ನು ಪ್ರಾರಂಭಿಸಿದ್ದು, ಜಮೀನು ಮಾರಾಟ ಮಾಡಿದ ನಂತರ 4 ಲಕ್ಷ ರೂಪಾಯಿ ಕಮಿಷನ್ ಕೊಡದಿದ್ದರೆ ಶಾಪ ಹಾಕುವುದಾಗಿ ಬೆದರಿಸತೊಡಗಿದ. ಕೊನೆಗೆ ತಾನು ಮೋಸ ಹೋಗಿರುವುದನ್ನು ಅರಿತ ಸಂತ್ರಸ್ತೆಯು ಪೊಲೀಸರಿಗೆ ದೂರು ನೀಡಿದ್ದಾಳೆ. ದೂರಿನನ್ವಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.(ಏಜೆನ್ಸೀಸ್)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seven + 3 =
Remember me
