ನವದೆಹಲಿ :ಅಮೆರಿಕದ ಸರ್ಕಾರಿ ಅಧಿಕಾರಿಗಳ ಸೋಗಿನಲ್ಲಿ ಅಮೆರಿಕನ್ ನಾಗರಿಕರಿಗೆ ಡೂಪ್ ಮಾಡಲು ಬಳಸಲಾಗುತ್ತಿದ್ದ ನಕಲಿ ಕಾಲ್​ ಸೆಂಟರ್​ ಒಂದನ್ನು ದೆಹಲಿ ಪೊಲೀಸರು ಪತ್ತೆ ಹಚ್ಚಿದ್ದಾರೆ. ಈ ಸೆಂಟರ್​ನ ಇಬ್ಬರು ಮಾಲೀಕರು ಸೇರಿದಂತೆ ಅಲ್ಲಿ ಕೆಲಸ ಮಾಡುತ್ತಿದ್ದ 65 ಜನರನ್ನು ಬಂಧಿಸಲಾಗಿದೆ. ಪಶ್ಚಿಮ ದೆಹಲಿಯ ಹರಿನಗರದಲ್ಲಿ ಈ ನಕಲಿ ಕಾಲ್​ ಸೆಂಟರ್​ ಪತ್ತೆಯಾಗಿದೆ.
ಆರೋಪಿಗಳು ಅಮೆರಿಕದ ನಾಗರಿಕರ ವಿವರಗಳನ್ನು ಅಕ್ರಮ ವಿಧಾನಗಳಿಂದ ಸಂಗ್ರಹಿಸುತ್ತಿದ್ದರು. ಅಮೆರಿಕದ ಸರ್ಕಾರಿ ಸಂಸ್ಥೆಗಳಾದ ಎಫ್​ಬಿಐ, ಟ್ರೆಷರಿ ಡಿಪಾರ್ಟ್​ಮೆಂಟ್​, ಡ್ರಗ್ ಎನ್​ಫೋರ್ಸ್​ಮೆಂಟ್ ಏಜೆನ್ಸಿಗಳ ಅಧಿಕಾರಿಗಳೆಂದು ಹೇಳಿಕೊಂಡು ಕರೆ ಮಾಡಿ ಅವರ ಸೋಷಿಯಲ್ ಸೆಕ್ಯುರಿಟಿ ನಂಬರ್​ಅನ್ನು ಸಸ್ಪೆಂಡ್​ ಮಾಡುವುದಾಗಿ ಹೆದರಿಸುತ್ತಿದ್ದರು. ನಂತರ ನಿರ್ದಿಷ್ಟ ಮೊತ್ತದ ಹಣವನ್ನು ಈ-ಗಿಫ್ಟ್​ ಕಾರ್ಡ್​ಗಳ ರೂಪದಲ್ಲಿ ವರ್ಗಾಯಿಸುವಂತೆ ಹೇಳಿ ವಂಚಿಸುತ್ತಿದ್ದರು ಎನ್ನಲಾಗಿದೆ.
ಇದನ್ನೂ ಓದಿ:ದೆಹಲಿ ಪೊಲೀಸರ ಭರ್ಜರಿ ಬೇಟೆ: ಲೇಡಿ ಡಾನ್ ಸೇರಿದಂತೆ ಇಬ್ಬರು ಗ್ಯಾಂಗ್​​ಸ್ಟರ್​​​​ ಬಂಧನ
ಈ ಸೆಂಟರನ್ನು ನಡೆಸುತ್ತಿದ್ದ ಮುಖ್ಯ ಆರೋಪಿಗಳನ್ನು ಲಖನ್ ಜಗವಾನಿ ಮತ್ತು ವಿಜೇಂದರ್ ಸಿಂಗ್ ರಾವತ್ ಎಂದು ಗುರುತಿಸಲಾಗಿದೆ. ಕಾನೂನುಬಾಹಿರವಾದ ವಿಒಐಪಿ ಕಾಲಿಂಗ್ ಮತ್ತು ಕಾಲರ್ ಐಡಿ ಸ್ಪೂಫಿಂಗ್ ವಿಧಾನವನ್ನು ಬಳಸಿ ಈ ದಂಧೆ ನಡೆಸುತ್ತಿದ್ದರು. ಇವರು ವಂಚನೆ ಮಾಡಿ ಲಪಟಾಯಿಸಿರುವ ಹಣದ ಮೊತ್ತವು ಕೋಟಿಗಳಲ್ಲಿದೆ ಎಂದು ಡಿಸಿಪಿ ಊರ್ವಿಜಾ ಗೋಯಲ್ ಹೇಳಿದ್ದಾರೆ.(ಏಜೆನ್ಸೀಸ್)
‘ನಿನ್ನ ಮೂಳೆ ಮುರಿಯುತ್ತೇನೆ’ ಎಂದು ಎಚ್ಚರಿಕೆ ನೀಡಿದ ಟಿಎಂಸಿ ಶಾಸಕ!
VIDEO | ಒಲಿಂಪಿಕ್ಸ್​ನಲ್ಲಿ ಕಮಲ್​ಪ್ರೀತ್​ ಕೌರ್​ರ​ ಡಿಸ್ಕಸ್​ ಥ್ರೋ!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:seventeen − three =
Remember me
