ಮುಂಬೈ:ಕೆಲವು ರಾಜ್ಯಗಳಲ್ಲಿ ವಿಮಾನ ಅಥವಾ ಟ್ರೈನ್​ ಪ್ರಯಾಣಕ್ಕೆ ಕರೊನಾ ಪರೀಕ್ಷೆಗೊಳಪಟ್ಟು, ನೆಗೆಟೀವ್​ ವರದಿಯನ್ನು ತೋರಿಸಬೇಕೆಂಬ ನಿಯಮವಿದೆ. ಇದನ್ನೇ ದುರ್ಬಳಕೆ ಮಾಡಿಕೊಂಡು, ಹಣಕ್ಕಾಗಿ ಜನರಿಗೆ ನಕಲಿ ಕರೊನಾ ನೆಗೆಟೀವ್​ ರಿಪೋರ್ಟ್​​ ನೀಡುತ್ತಿದ್ದ ಸೈಬರ್​ ಕೆಫೆ ಆಪರೇಟರ್​ಅನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ.
ದಕ್ಷಿಣ ಮುಂಬೈನ ಭೇಂಡಿ ಬಜಾರ್​ ಪ್ರದೇಶದಲ್ಲಿನ ಸೈಬರ್​ ಕೆಫೆಯೊಂದರಲ್ಲಿ ಸುಳ್ಳು ಕರೊನಾ ನೆಗೆಟೀವ್​​ ವರದಿಗಳನ್ನು ನೀಡುತ್ತಿರುವ ಬಗ್ಗೆ ಸುಳಿವು ಬಂದಿತ್ತು. ಈ ಹಿನ್ನೆಲೆಯಲ್ಲಿ ಅಪರಾಧ ವಿಭಾಗದ ಪೊಲೀಸರು ಬುಧವಾರ ಸಂಜೆ, ಸಿಬ್ಬಂದಿಯೋರ್ವನನ್ನು ಗ್ರಾಹಕನ ಸೋಗಿನಲ್ಲಿ ಅಲ್ಲಿಗೆ ಕಳುಹಿಸಿದರು. ಕೆಫೆಯಾತ 700 ರೂಪಾಯಿ ಪಡೆದು ಲ್ಯಾಬೊರೇಟರಿ ಹೆಸರಿನಲ್ಲಿ ಆರ್​ಟಿಪಿಸಿಆರ್​ ಟೆಸ್ಟ್​​ನ ನೆಗೆಟೀವ್ ವರದಿ ನೀಡಿದ ಎನ್ನಲಾಗಿದೆ.
ಇದನ್ನೂ ಓದಿ:44,658 ಹೊಸ ಕರೊನಾ ಪ್ರಕರಣ ದಾಖಲು
ನಂತರ ಸ್ಥಳದ ಮೇಲೆ ರೇಡ್​ ಮಾಡಿದ ಪೊಲೀಸರು ಕೆಲವು ನಕಲಿ ಸರ್ಟಿಫಿಕೇಟುಗಳನ್ನೂ, ಲ್ಯಾಬೊರೇಟರಿಯ ಲೆಟರ್​ಹೆಡ್​ಗಳನ್ನೂ, ಕಂಪ್ಯೂಟರ್​ ಮತ್ತಿತರ ಉಪಕರಣಗಳನ್ನು ಜಪ್ತಿಪಡಿಸಿಕೊಂಡಿದ್ದಾರೆ.
ಚಾಮುಂಡಿ ತಪ್ಪಲಲ್ಲಿ ರೇಪ್​ ಪ್ರಕರಣ​: ಮೈಸೂರು ಪೊಲೀಸರ ಮೇಲೆ ಸಿಎಂ ಗರಂ

ಚಿರತೆಗಳೊಂದಿಗೆ ಫೋಟೋಶೂಟ್​… ಆಸ್ಪತ್ರೆ ಸೇರಿದ ಮಾಡೆಲ್!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × 2 =
Remember me
