ಹರಿದ್ವಾರ :ಉತ್ತರಾಖಂಡದ ಹರಿದ್ವಾರದಲ್ಲಿ ಕಳೆದ ಏಪ್ರಿಲ್​ನಲ್ಲಿ ನಡೆದ ಕುಂಭ ಮೇಳದ ಸಂದರ್ಭದಲ್ಲಿ ಖಾಸಗಿ ಲ್ಯಾಬ್​ಗಳು ಸುಮಾರು 1 ಲಕ್ಷಕ್ಕೂ ಹೆಚ್ಚು ನಕಲಿ ವರದಿಗಳನ್ನು ನೀಡಿರಬಹುದು ಎಂದು ರಾಜ್ಯ ಆರೋಗ್ಯ ಇಲಾಖೆ ಅನುಮಾನ ವ್ಯಕ್ತಪಡಿಸಿದೆ. ಈ ಹಿನ್ನೆಲೆಯಲ್ಲಿ ಮೇಳದ ಸಮಯದಲ್ಲಿ ಕರೊನಾ ಪರೀಕ್ಷೆಗಳನ್ನು ಮಾಡುವ ಜವಾಬ್ದಾರಿ ವಹಿಸಿಕೊಂಡಿದ್ದ ಖಾಸಗಿ ಲ್ಯಾಬ್​ಗಳ ವಿರುದ್ಧ ಹರಿದ್ವಾರ ಜಿಲ್ಲಾಡಳಿತಕ್ಕೆ ಪ್ರಕರಣ ದಾಖಲಿಸುವಂತೆ ರಾಜ್ಯ ಸರ್ಕಾರ ಸೂಚನೆ ನೀಡಿದೆ ಎನ್ನಲಾಗಿದೆ.
ಕುಂಭ ಮೇಳದ ಸಮಯದಲ್ಲಿ ಪ್ರತಿದಿನ 50,000 ಕರೊನಾ ಟೆಸ್ಟ್​ಗಳನ್ನು ನಡೆಸಬೇಕೆಂದು ಹೈಕೋರ್ಟ್​ ಆದೇಶಿಸಿದ್ದ ಹಿನ್ನೆಲೆಯಲ್ಲಿ, ನಿತ್ಯದ ಖೋಟಾ ಈಡೇರಿಸಲು ಪರೀಕ್ಷೆಯಿಲ್ಲದೆ ನಕಲಿ ಫಲಿತಾಂಶಗಳನ್ನು ನೀಡಿರಬಹುದು ಎಂದು ಭಾವಿಸಲಾಗಿದೆ. ಜಿಲ್ಲಾ ಆರೋಗ್ಯ ಇಲಾಖೆಯು 22 ಖಾಸಗಿ ಲ್ಯಾಬ್​ಗಳಿಗೆ ಈ ಕೆಲಸ ನೀಡಿದ್ದು, ಹಲವು ಲ್ಯಾಬ್​ಗಳು ವಿವಿಧ ಜನರ ಐಡಿ ಕಾರ್ಡ್​ ಮತ್ತು ಫೋನ್​ ನಂಬರ್​ಗಳನ್ನು ನಮೂದಿಸಿ ನಕಲಿ ವರದಿಗಳನ್ನು ನೀಡಿವೆ ಎಂದು ಪ್ರಾಥಮಿಕ ವರದಿ ಬಂದಿದೆ. ಈ ನಿಟ್ಟಿನಲ್ಲಿ ವಿವರವಾದ ತನಿಖೆಯನ್ನು ಕಳೆದ ವಾರ ಜಿಲ್ಲಾಡಳಿತ ಆದೇಶಿಸಿದೆ ಎನ್ನಲಾಗಿದೆ.
ಇದನ್ನೂ ಓದಿ:ಚೆನ್ನೈ ಬಿಟ್ಟು ಹೈದರಾಬಾದ್​ಗೆ ಹೊರಟು ನಿಂತ್ರು ಕಮಲ್ ಹಾಸನ್, ಸೂರ್ಯ, ಕಾರ್ತಿ
ಕುಂಭ ಮೇಳ ನಿರ್ವಹಣಾ ಮಂಡಳಿಯೂ ಮತ್ತೊಂದು ಆಂತರಿಕ ತನಿಖೆ ಆದೇಶಿಸಿದ್ದು, ಖಾಸಗಿ ಲ್ಯಾಬ್​ಗಳ ಕಾರ್ಯವೈಖರಿ ಪರಿಶೀಲಿಸಲು ಸಮಿತಿಯೊಂದನ್ನು ರಚಿಸಿದೆ. “ಮೇಳ ಆಡಳಿತವು ಸೂಚಿಸಿದ ಒಟ್ಟು 2,51,457 ಜನರನ್ನು 11 ಲ್ಯಾಬ್​ಗಳು ಪರೀಕ್ಷೆ ಮಾಡಿವೆ. ಅದರಲ್ಲಿ 2,07,159 ಆ್ಯಂಟಿಜನ್ ಟೆಸ್ಟ್​ಗಳಾಗಿದ್ದವು ಮತ್ತು 44,278 ಆರ್​ಟಿಪಿಸಿಆರ್​ ಟೆಸ್ಟ್​ಗಳಾಗಿದ್ದವು. 2 ಲಕ್ಷಕ್ಕಿಂತ ಹೆಚ್ಚು ಆ್ಯಂಟಿಜನ್ ಟೆಸ್ಟ್​ ಮಾಡಿದ್ದರೂ ಕೇವಲ 1,023 ಜನರಿಗೆ ಪಾಸಿಟೀವ್ ಬಂದಿತ್ತು. ಕೇವಲ 1,250 ಆರ್​ಟಿಪಿಸಿಆರ್​ ಪಾಸಿಟೀವ್ ವರದಿಗಳು ಬಂದಿದ್ದವು. ಉಳಿದವೆಲ್ಲ ನೆಗೆಟೀವ್ ಬಂದಿತ್ತು” ಎಂದು ಮಹಾಕುಂಭ ಮೇಳದ ಆರೋಗ್ಯ ಅಧಿಕಾರಿ ಡಾ. ಅರ್ಜುನ್ ಸಿಂಗ್ ಸೇನ್ಗರ್​ ವಿವರಿಸಿದ್ದಾರೆ.(ಏಜೆನ್ಸೀಸ್)
ಕ್ರೆಡಿಟ್ ಕಾರ್ಡ್ ಹೆಸರಲ್ಲಿ ಜನರಿಗೆ ಟೋಪಿ! ನಕಲಿ ಕಾಲ್ ಸೆಂಟರ್ ಪತ್ತೆ!

ಸರ್ಕಾರಿ ನಿಯಮ ಪಾಲಿಸದೆ ಕಾನೂನು ಸಂರಕ್ಷಣೆ ಕಳೆದುಕೊಂಡ ಟ್ವಿಟರ್!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × five =
Remember me
