ಪುಣೆ: ಚಿಲ್ಡ್ರನ್ ಬ್ಯಾಂಕ್ ಆಫ್ ಇಂಡಿಯಾದ ಡಮ್ಮಿ ನೋಟುಗಳು, ಅಮೆರಿಕದ ನಕಲಿ ಡಾಲರ್ ಕರೆನ್ಸಿಗಳು ಸೇರಿ ಒಟ್ಟು 55 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ಫೇಕ್ ಕರೆನ್ಸಿಯನ್ನು ಪುಣೆ ಪೊಲೀಸರು ಮತ್ತು ಸೇನಾ ಪಡೆ ಜಂಟಿ ಕಾರ್ಯಾಚರಣೆಯಲ್ಲಿ ವಶಪಡಿಸಿಕೊಂಡಿವೆ. ಈ ಸಂಬಂಧ ಒಬ್ಬ ಯೋಧನೂ ಸೇರಿ ಆರು ಆರೋಪಿಗಳನ್ನು ಬುಧವಾರ ಬಂಧಿಸಿದ್ದಾರೆ.
ನೋಟಿನ ಗುಣಮಟ್ಟ ಪರಿಶೀಲಿಸಲಾಗುತ್ತಿದ್ದು, ಬಹುತೇಕ ನೋಟುಗಳು ಚಿಲ್ಡ್ರನ್ ಬ್ಯಾಂಕ್ ಆಫ್ ಇಂಡಿಯಾದ ಡಮ್ಮಿ ನೋಟುಗಳಾಗಿವೆ.| ಬಚ್ಚನ್ ಸಿಂಗ್ಡಿಸಿಪಿ(ಕ್ರೈಂ) ಪುಣೆ
ಪುಣೆ ಪೊಲೀಸರು ಮತ್ತು ಸೇನೆಯ ಸದರ್ನ್​ ಕಮಾಂಡ್ ಇಂಟೆಲಿಜೆನ್ಸ್ ವಿಂಗ್​ ಈ ಕಾರ್ಯಾಚರಣೆ ನಡೆಸಿತ್ತು. ಪುಣೆಯ ವಿಮಾನ್ ನಗರ ಪ್ರದೇಶದಲ್ಲಿ ಫೇಕ್ ಕರೆನ್ಸಿ ಜಾಲದ ಇರುವಿಕೆ ಕುರಿತು ಖಚಿತ ಮಾಹಿತಿ ಲಭ್ಯವಾದ ಹಿನ್ನೆಲೆಯಲ್ಲಿ ಅದನ್ನಾಧರಿಸಿ ಕಾರ್ಯಾಚರಣೆ ನಡೆದಿತ್ತು. ವಶಪಡಿಸಿಕೊಂಡ ಕರೆನ್ಸಿ ಮೊತ್ತ 55 ಕೋಟಿ ರೂಪಾಯಿಗೂ ಅಧಿಕವಿದ್ದು, ನಿಖರವಾದ ಪ್ರಮಾಣ ಎಷ್ಟು ಎಂಬುದು ಲೆಕ್ಕಾಚಾರದ ನಂತರ ಬಹಿರಂಗವಾಗಲಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಬಂಧಿತ ಆರೋಪಿಗಳನ್ನು ಶೇಖ್ ಅಲಿಂ ಗುಲಾಬ್ ಖಾನ್​ (ಯೋಧ), ಸುನಿಲ್ ಸರ್ದಾ, ರಿತೇಶ್ ರತ್ನಾಕರ್, ತುಫಾಲಿ ಅಹಮದ್​ ಇಶ್ಕ್ ಖಾನ್​, ಅಬ್ದುಲ್ ಗನಿ ಖಾನ್​, ಅಬ್ದುಲ್ ರೆಹ್ಮಾನ್ ಅಬ್ದುಲ್ ಗನಿ ಖಾನ್​ ಎಂದು ಗುರುತಿಸಲಾಗಿದೆ. ಈ ಗ್ಯಾಂಗ್​ ಅಸಲಿ ನೋಟಿನ ಬದಲು ನಕಲಿ ನೋಟುಗಳನ್ನು ಕೊಟ್ಟು ಜನರನ್ನು ಯಾಮಾರಿಸುತ್ತಿತ್ತು. ಈ ಬಗ್ಗೆ ವಿಚಾರಣೆ ನಡೆಯುತ್ತಿದೆ ಎಂದು ಡಿಸಿಪಿ ಬಚ್ಚನ್ ಸಿಂಗ್​ ತಿಳಿಸಿದ್ದಾರೆ.
ಇದನ್ನೂ ಓದಿ:ಕರೊನಾ ಕರಾಮತ್ತು- ಹೃದ್ಯ ಕ್ಷಣಕ್ಕೆ ಸಾಕ್ಷಿಯಾಗುವ ಭಾಗ್ಯ ಗಣಿನಾಡಿನದ್ದು!
ಸೇನಾ ಗುಪ್ತಚರ ವಿಭಾಗದಿಂದ ಮಾಹಿತಿ ಸಿಕ್ಕ ಬಳಿಕ ಪೊಲೀಸ್ ಅಧಿಕಾರಿಯೊಬ್ಬರು ಈ ಗ್ಯಾಂಗ್ ಜತೆಗೆ ಸಂಪರ್ಕ ಸಾಧಿಸಿದರು. ನಂತರ ಗ್ರಾಹಕರ ಸೋಗಿನಲ್ಲಿ ಇವರ ಜತೆ ವ್ಯವಹಾರ ಕುದುರಿಸಿ ಭಾರತದ ರೂಪಾಯಿಯನ್ನು ಅಮೆರಿಕದ ಡಾಲರ್ ಜತೆಗೆ ವಿನಿಮಯ ಮಾಡಿಕೊಳ್ಳುವ ಇರಾದೆ ವ್ಯಕ್ತ ಪಡಿಸಿದ್ದರು. ವ್ಯವಹಾರದ ಮೇಲೆ ನಂಬಿಕೆ ಉಂಟುಮಾಡುವುದಕ್ಕಾಗಿ ಆರೋಪಿಗಳ ಬ್ಯಾಂಕ್ ಖಾತೆಗೆ 25 ಲಕ್ಷ ರೂಪಾಯಿಯನ್ನು ಠೇವಣಿ ಕೂಡ ಮಾಡಲಾಗಿತ್ತು.
ಇದಾಗಿ, ಅವರು ಹೇಳಿದಂತೆ ವಿಮಾನ್ ನಗರದ ಬಂಗ್ಲೆಗೆ ಅಧಿಕಾರಿಗಳು ಹೋಗಿದ್ದರು. ಅಲ್ಲಿ 55 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ನಕಲಿ ಕರೆನ್ಸಿ ಇದ್ದವು. ಅವುಗಳ ಜತೆಗೆ 2 ಲಕ್ಷ ರೂಪಾಯಿ ಮೌಲ್ಯದ ಅಸಲಿ ಕರೆನ್ಸಿಯನ್ನೂ ವಶಪಡಿಸಿಕೊಳ್ಳಲಾಗಿದೆ. ಈ ಕರೆನ್ಸಿಗಳನ್ನು ಆರೋಪಿಗಳು ನಕಲಿ ನೋಟುಗಳ ಕಟ್ಟಿನಲ್ಲಿ ಮೇಲ್ಭಾಗದಲ್ಲಿ ಇರಿಸಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ. (ಏಜೆನ್ಸೀಸ್)
ಅಮಾನವೀಯ ಕೃತ್ಯ: 3 ವರ್ಷದ ಮಗಳ ಗುಪ್ತಾಂಗಕ್ಕೆ ಸಿಗರೇಟ್ ಸುಟ್ಟ ತಾಯಿಯ ಲವರ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × 3 =
Remember me
