ಬಿಹಾರ: ಹೊಟ್ಟೆ ನೋವು, ವಾಂತಿ ಎಂದು ಆಸ್ಪತ್ರೆಗೆ ಬಂದಿದ್ದ ಬಾಲಕನಿಗೆ ನಕಲಿ ವೈದ್ಯ ಯೂಟ್ಯೂಬ್​​ ನೋಡಿ ಸರ್ಜರಿ ಮಾಡಿ ಪ್ರಾಣ ತೆಗೆದಿದ್ದಾನೆ. ಈ ಘಟನೆ ಬಿಹಾರದ ಸರನ್‌ನಲ್ಲಿ ಈ ಘಟನೆ ನಡೆದಿದೆ.
ಕೃಷ್ಣ ಕುಮಾರ್ (15) ಮೃತ. ಈತ ಬಿಹಾರದ ಸರನ್ ನಿವಾಸಿಯಾಗಿದ್ದಾನೆ. ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿ ನಕಲಿ ವೈದ್ಯ ನೀಡಿದ ಚಿಕಿತ್ಸೆಯಿಂದ ಪ್ರಾಣ ಕಳೆದುಕೊಂಡಿದ್ದಾನೆ. ಬಾಲಕನ ಕುಟುಂಬಸ್ಥರು ನಕಲಿ ವೈದ್ಯನ ಕುರಿತಾಗಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಕೃಷ್ಣ ಕುಮಾರ್ ಹಲವು ಬಾರಿ ವಾಂತಿ ಮಾಡಿಕೊಂಡು ತೀವ್ರ ಅಸ್ವಸ್ಥನಾಗಿದ್ದ. ಕೂಡಲೇ ಬಾಲಕನ ಪೋಷಕರು ಸಮೀಪದ ಗಣಪತಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಸ್ವಲ್ಪ ಸಮಯದ ನಂತರ ವಾಂತಿ ಕಡಿಮೆಯಾಯಿತು. ಆಸ್ಪತ್ರೆಯ ನಕಲಿ ವೈದ್ಯ ಅಜಿತ್ ಕುಮಾರ್ ಪುರಿ ಬಾಲಕನನ್ನು ಪರೀಕ್ಷಿಸಿ ಬಾಲಕನ ಪಿತ್ತಕೋಶದಲ್ಲಿ ಕಲ್ಲುಗಳಿರುವುದನ್ನು ಪೋಷಕರಿಗೆ ತಿಳಿಸಿದ್ದಾರೆ. ಕೂಡಲೇ ಬಾಲಕನಿಗೆ ಶಸ್ತ್ರಚಿಕಿತ್ಸೆ ಮಾಡಿ ಹೊರ ತೆಗೆಯುವಂತೆ ಸೂಚಿಸಿದರು.
ಯೂಟ್ಯೂಬ್ ನೋಡುತ್ತಲೇ ನಕಲಿ ವೈದ್ಯ ಬಾಲಕನಿಗೆ ಆಪರೇಷನ್ ಮಾಡಿದ್ದಾನೆ. ಆದರೆ, ಸ್ವಲ್ಪ ಸಮಯದ ನಂತರ ಬಾಲಕನ ಸ್ಥಿತಿ ಹದಗೆಟ್ಟಿತು. ಇದರಿಂದ ಗೊಂದಲಕ್ಕೀಡಾದ ನಕಲಿ ವೈದ್ಯ ಉತ್ತಮ ಚಿಕಿತ್ಸೆಗಾಗಿ ಬೇರೆ ಆಸ್ಪತ್ರೆಗೆ ಕರೆದುಕೊಂಡು ಹೋಗಲು ಆಂಬುಲೆನ್ಸ್ ವ್ಯವಸ್ಥೆ ಮಾಡಿದ್ದಾರೆ. ಮಾರ್ಗಮಧ್ಯೆ ಬಾಲಕ ಪ್ರಾಣ ಕಳೆದುಕೊಂಡ. ಮೃತದೇಹವನ್ನು ಅಲ್ಲೇ ಬಿಟ್ಟು ನಕಲಿ ವೈದ್ಯ ಹಾಗೂ ಇತರೆ ಸಿಬ್ಬಂದಿ ಓಡಿ ಹೋಗಿದ್ದಾರೆ.
ಮಗನ ಸಾವಿನಿಂದ ಅದೇ ವಾಹನದಲ್ಲಿದ್ದ ಪೋಷಕರು ಕಣ್ಣೀರಿಟ್ಟರು. ಬಳಿಕ ಪೊಲೀಸರಿಗೆ ದೂರು ನೀಡಲಾಗಿತ್ತು. ಆಪರೇಷನ್ ಮಾಡಿದ ವೈದ್ಯರಿಗೆ ಸರಿಯಾದ ವಿದ್ಯಾರ್ಹತೆ ಇದೆಯೋ ಇಲ್ಲವೋ ಗೊತ್ತಿಲ್ಲ ಎಂದು ಬಾಲಕನ ತಂದೆ ಚಂದನ್ ಶಾ ಹೇಳುತ್ತಾ ಕಣ್ಣೀರು ಹಾಕಿದ್ದಾರೆ.
ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡು ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ವೈದ್ಯರು ಮತ್ತು ಇತರ ಸಿಬ್ಬಂದಿಯ ಪತ್ತೆಗೆ ಪ್ರಯತ್ನ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಹಕ್ಕಿಗಳಂತೆ ಹಾರಿ ಬಂದು ಕಚ್ಚುತ್ತದೆ ಈ ಹಾವು! ಅಪರೂಪದ ವಿಡಿಯೋ ನೋಡಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eight − four =
Remember me
