ಹೈದರಾಬಾದ್‌:ಶಾಲೆ ಹಾಗೂ ಆಸ್ಪತ್ರೆ ನಡೆಸುತ್ತ ಜನರಿಂದ ಲಕ್ಷಾಂತರ ರೂಪಾಯಿ ಸುಲಿಗೆ ಮಾಡುತ್ತಿದ್ದ ನಕಲಿಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಮೆಹ್ದಿಪಟ್ಟಣಂನ ಆಸೀಫ್ ನಗರ ರಸ್ತೆಯಲ್ಲಿ ಸಮೀರ್ ಹಾಸ್ಪಿಟಲ್ ಎಂಬ ಹೆಸರಿನ ಆಸ್ಪತ್ರೆ ನಡೆಸುತ್ತಿದ್ದ ಇವರು ಇದೀಗ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಇವರ ಹೆಸರು ಮೊಹಮ್ಮದ್ ಶೋಯೆಬ್, ಸುಭಾನಿ ಮೊಹಮ್ಮದ್ ಅಬ್ದುಲ್ ಮುಜೀಬ್.
ಇವರಲ್ಲಿ ಒಬ್ಬಾತ ಎಸ್‌ಎಸ್‌ಎಲ್‌ಸಿಯಲ್ಲಿ ಪಾಸಾಗಿದ್ದಾನೋ ಗೊತ್ತಿಲ್ಲ, ಇನ್ನೊಬ್ಬ ಪಿಯುಸಿಯವರೆಗೆ ಓದಿದ್ದಾನೆ ಎನ್ನಲಾಗಿದೆ. ಆದರೆ ಆಸ್ಪತ್ರೆಯನ್ನು ತೆರೆಯುವ ಮೂಲಕ ತಾವು ವೈದ್ಯರು ಎಂದು ಹೇಳಿಕೊಂಡು ಬಂದವರಿಂದ ಹಲವಾರು ವರ್ಷಗಳಿಂದ ಹಣ ವಸೂಲಿ ಮಾಡುತ್ತ ಬಂದಿದ್ದಾರೆ.
ಇದನ್ನೂ ಓದಿ:ಡ್ರೋನ್‌ ಪ್ರತಾಪ್‌ ಎಲ್ಲಿದ್ದಾನೆಂದು ಕೊನೆಗೂ ಕಂಡುಹಿಡಿದ ಪೊಲೀಸರು!
ಅಷ್ಟೇ ಅಲ್ಲದೇ, ಗ್ಲೋಬಲ್ ಟೆಕ್ನೋ ಸ್ಕೂಲ್ ಹೆಸರಿನಲ್ಲಿ ಶಾಲೆಯನ್ನು ಕೂಡ ತೆರೆದಿದ್ದರು. ಮಾತ್ರವಲ್ಲದೇ ಆಸ್ಪತ್ರೆ ತೆರೆಯಲು ನೋಂದಣಿ ಕೂಡ ಪಡೆದುಕೊಂಡಿದ್ದರು! ಇವರಿಗೆ ವೈದ್ಯರಾಗುವ ಅರ್ಹತೆ, ಪ್ರಮಾಣ ಪತ್ರ ಸೇರಿದಂತೆ ಯಾವುದೇ ದಾಖಲೆಗಳು ಇಲ್ಲದಿದ್ದರೂ ಆಸ್ಪತ್ರೆ ತೆರೆಯಲು ಅನುಮತಿ ಸಿಕ್ಕಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ಶಾಲೆಯನ್ನು 2011ರಿಂದ ನಡೆಸಿಕೊಂಡು ಬರುತ್ತಿರುವ ಇವರು, 2017ರಲ್ಲಿ ಆಸ್ಪತ್ರೆ ತೆರೆದಿದ್ದಾರೆ. ಮೊದಲು ಆಸ್ಪತ್ರೆಯೊಂದರಲ್ಲಿ ಚಿಕ್ಕಪುಟ್ಟ ಕೆಲಸ ಮಾಡಿಕೊಂಡಿದ್ದ ಈ ಖದೀಮರು ನಂತರ ತಮ್ಮದೇ ಆಸ್ಪತ್ರೆ ತೆರೆದು ಚಿಕಿತ್ಸೆ ಕೊಡುತ್ತಿದ್ದರು.
ಗ್ಲೋಬಲ್ ಟೆಕ್ನೋ ಸ್ಕೂಲ್ ಹೆಸರಿನಲ್ಲಿ ಮೆಹದಿಪಟ್ನಂನಲ್ಲಿ ಶಾಲೆ ಪ್ರಾರಂಭಿಸಿದರು. 2017ರಲ್ಲಿ ಸಮೀರ್ ಹಾಸ್ಪಿಟಲ್ ಹೆಸರಿನಲ್ಲಿ ವ್ಯವಹಾರವನ್ನು ಪ್ರಾರಂಭಿಸಿದ್ದರು. ಈ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದವರ ಪಾಡೇನು? ಶಾಲೆ ಹೇಗೆ ಆರಂಭವಾಗಿದೆ, ಇಲ್ಲಿ ಬರುತ್ತಿರುವ ವಿದ್ಯಾರ್ಥಿಗಳು ಯಾರು ಎಂಬಿತ್ಯಾದಿ ಬಗ್ಗೆ ತನಿಖೆ ಮುಂದುವರೆದಿದೆ.(ಏಜೆನ್ಸೀಸ್‌)
75 ಜನರ ಪ್ರಾಣ ಉಳಿಸಿದ ಪೈಲಟ್‌ ಸಮಯಪ್ರಜ್ಞೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 + ten =
Remember me
