ಉದಕಮಂಡಲ:ಆನ್​ಲೈನ್ ಮೂಲಕ ಬರುವ ಗಿಫ್ಟ್​ಗಳನ್ನು ನೀವು ಸ್ವೀಕರಿಸಬಹುದು ಎಂಬ ಸಂದೇಶವಿರುವ ಇಮೇಲ್ ಜಿಲ್ಲಾಧಿಕಾರಿಯ ಹೆಸರಿನಲ್ಲಿ ನೀಲಗಿರೀಸ್ ಜಿಲ್ಲೆಯ ಹಿರಿಯ ಅಧಿಕಾರಿಗಳಿಗೆ ರವಾನೆಯಾಗಿದೆ. ಅಮೆಜಾನ್​, ಫ್ಲಿಪ್​ಕಾರ್ಟ್ ಮೂಲಕ ಗಿಫ್ಟ್​ಗಳು ಬಂದರೆ ಅವುಗಳನ್ನು ಸ್ವೀಕರಿಸಬಹುದು. ಆ ರೀತಿ ಗಿಫ್ಟ್ ಸ್ವೀಕರಿಸುವುದಕ್ಕೆ ಯಾವುದೇ ಅಡ್ಡಿ ಇಲ್ಲ. ನಿಯಮದ ಸಮಸ್ಯೆಯೂ ಇಲ್ಲ ಎಂಬ ಒಕ್ಕಣೆ ಇರುವ ಇಮೇಲ್ ಅದಾಗಿತ್ತು.
ಜಿಲ್ಲಾ ಕಲೆಕ್ಟರ್​ ಹೆಸರಿನಲ್ಲಿ ಬಂದ ಇ-ಮೇಲ್​ ನೋಡಿ ಅಧಿಕಾರಿಗಳಿಗೆಲ್ಲ ಅಚ್ಚರಿ, ಸಂದೇಹ. ಅವರಲ್ಲಿ ಕೆಲವರು ಧೈರ್ಯಮಾಡಿ ಜಿಲ್ಲಾ ಕಲೆಕ್ಟರ್​ ಇನ್ನಸೆಂಟ್​ ದಿವ್ಯಾ ಅವರನ್ನು ಸಂಪರ್ಕಿಸಿದ್ದರು. ವಿಷಯವರಿತು ಬೇಸ್ತುಬೀಳುವ ಸರದಿ ಜಿಲ್ಲಾಧಿಕಾರಿಯವರದ್ದಾಗಿತ್ತು. ತಾನು ಯಾವುದೇ ಇ-ಮೇಲ್ ಕಳುಹಿಸಿಲ್ಲ. ಅಧಿಕಾರಿಗಳು ಮತ್ತು ಸಾರ್ವಜನಿಕರು ಅಂತಹ ಇ-ಮೇಲ್​ಗಳನ್ನು ನಿರ್ಲಕ್ಷಿಸಬೇಕು ಎಂದು ಅವರು ಸ್ಪಷ್ಟಪಡಿಸಿದರು.
ಇದನ್ನೂ ಓದಿ:ಪತ್ರಕರ್ತ ಸಿದ್ಧಿಕ್ ಬಂಧನ ಅಕ್ರಮವೆಂದ ಕೆಯುಡಬ್ಲ್ಯುಜೆ; ಪಿಎಫ್​ಐ ನಂಟಿನ ಸಿದ್ಧಿಕ್ ಇರೋದು ಎಂದ ಪೊಲೀಸರು
ನಂತರ ವಿಚಾರಣೆ ನಡೆಸಿದಾಗ, ನಕಲಿ ಇ-ಮೇಲ್​ ಬಳಸಿ ಕಿಡಿಗೇಡಿಗಳು ಈ ದುಷ್ಕೃತ್ಯವೆಸಗಿರುವುದು ಗಮನಕ್ಕೆ ಬಂದಿದೆ. ಕೂಡಲೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಶಿಮೋಹನ್​​ಗೆ ಈ ಬಗ್ಗೆ ಮಾಹಿತಿ ನೀಡಿದ ಜಿಲ್ಲಾಧಿಕಾರಿ, ತನಿಖೆಗೆ ಆದೇಶಿಸಿದ್ದಾರೆ. ಪೊಲೀಸರು ಶೋಧ ಕಾರ್ಯ ಆರಂಭಿಸಿದ್ದಾರೆ. (ಏಜೆನ್ಸೀಸ್)
VIDEO | ಬೆಂಗಳೂರಿನ ನಡುರಸ್ತೆಯಲ್ಲಿ ಹಾಡಹಗಲೇ ಕೊಲೆ: ವಿಡಿಯೋ ವೈರಲ್

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two + 20 =
Remember me
