ನವದೆಹಲಿ:ಇತ್ತೀಚೆಗೆ ಒಬ್ಬರ ಹೆಸರಿನಲ್ಲಿ ನಾನಾ ಫೇಕ್​ ಖಾತೆಗಳು ಟ್ವಿಟರ್​ನಲ್ಲಿ ಕಂಡು ಬಂದಿದ್ದರೆ ಅದು ನೂತನ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರದ್ದೆನ್ನಬಹುದು. ಈ ಕುರಿತು ಆಗಾಗ ಬೇರೆ ಬೇರೆ ಫ್ಯಾಕ್ಟ್​ಚೆಕ್​ಗಳು ಬರುತ್ತಿದ್ದರೂ ಅಂಥ ಫೇಕ್​ ಖಾತೆಗಳು ಕಂಡುಬರುತ್ತಲೇ ಇದ್ದು, ಅವುಗಳಿಗೆ ಸಾವಿರಾರು ಫಾಲೋವರ್ಸ್​ ಕೂಡ ಇರುವುದು ಅಚ್ಚರಿ ಮೂಡಿಸಿದೆ.
ಇದೀಗ ಆ ಬಗ್ಗೆ ಪ್ರೆಸ್​ ಇನ್​ಫಾರ್ಮೇಷನ್​ ಬ್ಯೂರೋ (ಪಿಐಬಿ) ಫ್ಯಾಕ್ಟ್​ಚೆಕ್​ ಮಾಡಿ ಅಂಥದ್ದೇ ಒಂದು ಖಾತೆಯ ಬಗ್ಗೆ ಎಚ್ಚರಿಕೆ ನೀಡಿದೆ. ದ್ರೌಪದಿ ಮುರ್ಮು ಅವರ ಹೆಸರಿನಲ್ಲಿರುವ ಟ್ವಿಟರ್ ಖಾತೆಯೊಂದರ ಸ್ಕ್ರೀನ್​ಶಾಟ್ ಹಂಚಿಕೊಂಡಿರುವ ಪಿಐಬಿ, ಅದು ಫೇಕ್​ ಅಕೌಂಟ್ ಎಂಬುದನ್ನು ಸ್ಪಷ್ಟಪಡಿಸಿದೆ. ಅಂದಹಾಗೆ ಆ ಖಾತೆಗೆ 34 ಸಾವಿರಕ್ಕೂ ಅಧಿಕ ಮಂದಿ ಫಾಲೋವರ್ಸ್​ ಇದ್ದಾರೆ.
ಇದನ್ನೂ ಓದಿ:ಸ್ನಾನಕ್ಕೆಂದು ತೆರಳಿದಾಗಲೇ ಕುಸಿದ ಮನೆ; ಆ ಸಮಯದಲ್ಲಿ ಏಕಾಂಗಿಯಾಗಿದ್ದ ಮಹಿಳೆ ಸಾವು..
ಅದೇರೀತಿ ದ್ರೌಪದಿ ಮುರ್ಮು ಅವರ ಹೆಸರಿನಲ್ಲಿ ನಾನಾ ಫೇಕ್​ ಅಕೌಂಟ್ಸ್​​ ಟ್ವಿಟರ್​ನಲ್ಲಿದ್ದು, ಬಹುತೇಕ ಎಲ್ಲವೂ ಸಾವಿರಾರು ಫಾಲೋವರ್ಸ್​ ಹೊಂದಿವೆ. ಸದ್ಯದ ಮಾಹಿತಿ ಪ್ರಕಾರ ದ್ರೌಪದಿ ಮರ್ಮು ಅವರ ಹೆಸರಿನಲ್ಲಿ ಯಾವುದೇ ವೈಯಕ್ತಿಕ ಖಾತೆ ಇಲ್ಲ. ಆದರೆ ಅವರನ್ನು ಫಾಲೋ ಮಾಡುವವರು ರಾಷ್ಟ್ರಪತಿಯ ಅಧಿಕೃತ ಖಾತೆhttps://twitter.com/rashtrapatibhvnಮೂಲಕ ಟ್ವಿಟರ್​​ನಲ್ಲಿ ಫಾಲೋ ಮಾಡಬಹುದು.


A#FAKETwitter account is claiming to be the official account of the President of India#PIBFactCheck▶️The official account of the President of India is@rashtrapatibhvn▶️Join us on#Telegramfor quick updates:https://t.co/zxufu0SIzGpic.twitter.com/Y9fkebhpM1— PIB Fact Check (@PIBFactCheck)July 28, 2022
A#FAKETwitter account is claiming to be the official account of the President of India#PIBFactCheck▶️The official account of the President of India is@rashtrapatibhvn▶️Join us on#Telegramfor quick updates:https://t.co/zxufu0SIzGpic.twitter.com/Y9fkebhpM1
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:six − 1 =
Remember me
