ನವದೆಹಲಿ: ಕೇಂದ್ರ ಸರ್ಕಾರ ಇತ್ತೀಚೆಗೆ ಜಾರಿಗೆ ತಂದಿರುವ ಐಟಿ ನಿಯಮದ ಪ್ರಕಾರ ಟ್ವಿಟರ್​, ಓರ್ವ ಪತ್ರಕರ್ತ ಸಹಿತ ಹಲವರ ವಿರುದ್ಧ ಕೇಸ್​ ದಾಖಲಾಗಿದೆ. ಮುಸ್ಲಿಂ ಸಮುದಾಯದ ವಯೋವೃದ್ಧನ ಮೇಲೆ ನಡೆದ ಹಲ್ಲೆ ದೃಶ್ಯವನ್ನು ಇವರು ಟ್ವಿಟರ್​ನಲ್ಲಿ ಹಂಚಿಕೊಂಡಿದ್ದರು.
ಗಾಜಿಯಾಬಾದ್​ನಲ್ಲಿ ಜೂನ್​ 5ರಂದು ಆಮ್ಲೆಟ್​ ವ್ಯಾಪಾರಿ ಅಬ್ದುಲ್​ ಸಮದ್​ ಮೇಲೆ ದಾಳಿ ನಡೆಸಿ, ಸಮೀಪದ ಕಾಡು ಪ್ರದೇಶಕ್ಕೆ ಕರೆದೊಯ್ದಿದ್ದರು. ಅಲ್ಲಿ ಅವರ ಗಡ್ಡ ಕಟ್​ ಮಾಡಿ ವಂದೇ ಮಾತರಂ, ಜೈಶ್ರೀರಾಮ್​ ಘೋಷಣೆ ಕೂಗಿದರೆಂದು ಆರೋಪಿಸಿದ ವಿಡಿಯೋವನ್ನು ರಾಣಾ ಅಯ್ಯುಬ್​, ಸಬಾ ನಖ್ವಿ, ಮೊಹಮ್ಮದ್​ ಜುಬೇರ್​ ಟ್ವೀಟ್​ ಮಾಡಿದ್ದರು. ದ ವೈರ್​ ಎಂಬ ಆನ್​ಲೈನ್​ ನ್ಯೂಸ್​ ಪೋರ್ಟಲ್​ ಕೂಡ ಸುದ್ದಿ ಪ್ರಕಟಿಸಿ ಟ್ವೀಟ್​ ಮಾಡಿತ್ತು. ಕಾಂಗ್ರೆಸ್​ ನಾಯಕರಾದ ಸಲ್ಮಾನ್​ ನಿಜಾಮಿ, ಶಮಾ ಮೊಹಮ್ಮದ್​, ಮಕ್ಸೂರ್​ ಉಸ್ಮಾನಿ ಕೂಡ ಟ್ವೀಟ್​ ಮಾಡಿ “ಹಿಂದುಗಳಿಂದ ಆಕ್ರಮಣ’ ಎಂದು ಟೀಕಿಸಿದ್ದರು. ಈ ನಡುವೆ, ಸಮದ್​ ಕುಟುಂಬದವರು ಪ್ರತಿಕ್ರಿಯೆ ನೀಡಿದ್ದು, ಸಮದ್​ ಆಮ್ಲೆಟ್​ ಮಾರಾಟ ಮಾಡುತ್ತಿಲ್ಲ. ಅವರು ಬಡಗಿ ಎಂದು ಹೇಳಿದ್ದಾರೆ. ಸುಳ್ಳು ಸುದ್ದಿ ಪ್ರಕಟಿಸಿರುವುದಕ್ಕಾಗಿ ಟ್ವಿಟರ್​ ಮತ್ತು ಟ್ವೀಟ್​ ಮಾಡಿದವರ ವಿರುದ್ಧ ಗಾಜಿಯಾಬಾದ್​ ಪೊಲೀಸರು ಎ್​ಐಆರ್​ ದಾಖಲಿಸಿದ್ದಾರೆ.
ಐಟಿ ಕಾಯ್ದೆಯ ಸೆಕ್ಷನ್​ 79ಮಾಹಿತಿ ತಂತ್ರಜ್ಞಾನ ಕಾಯ್ದೆ 2020ರ ಸೆಕ್ಷನ್​ 79ರ ಪ್ರಕಾರ, ಯಾವುದೇ ಸಾಮಾಜಿಕ ಜಾಲತಾಣಗಳಲ್ಲಿ ಅದರ ಬಳಕೆದಾರರು ಪ್ರಕಟಿಸುವ ಮಾಹಿತಿ, ಡೇಟಾ ಅಥವಾ ಸಂವಹನ ಕೊಂಡಿಗಳಿಗೆ ಆಯಾ ತಾಣಗಳು ಬಾಧ್ಯಸ್ಥವಾಗಿರುವುದಿಲ್ಲ. ಈ ಮಾಹಿತಿ, ಡೇಟಾ, ಕೊಂಡಿಗಳಿಂದ ಆಯಾ ತಾಣಗಳಿಗೆ “ಇಂಟರ್​ ಮೀಡಿಯರಿ’ ಎಂಬ ವಿನಾಯಿತಿ ಸಿಗುತ್ತದೆ.
ತಪ್ಪಿದ ಕಾನೂನು ರಕ್ಷಣೆಕೇಂದ್ರ ಸರ್ಕಾರ ತಂದಿರುವ ಮಾಹಿತಿ ತಂತ್ರಜ್ಞಾನದ ಹೊಸ ನಿಯಮಗಳನ್ನು ಪಾಲಿಸಲು ವಿಳಂಬ ಮಾಡಿದ ಟ್ವಿಟರ್​, ಭಾರತದಲ್ಲಿ ಕಾನೂನು ರಕ್ಷಣೆ ಕಳೆದುಕೊಂಡ ಅಮೆರಿಕ ಮೂಲದ ಮೊದಲ ಸೋಷಿಯಲ್​ ಮೀಡಿಯಾ ವೇದಿಕೆ ಎಂದೆನಿಸಿಕೊಂಡಿದೆ. ಹೊಸ ನಿಯಮಗಳ ಬಗ್ಗೆ ಭಿನ್ನಮತ ತೋರಿದ ಟ್ವಿಟರ್​, ಅನುಷ್ಠಾನ ವಿಳಂಬ ಮಾಡುತ್ತ ಬಂದಿದೆ. ಆದಾಗ್ಯೂ, ಹೊಸ ನಿಯಮ ಪಾಲಿಸಲು ಗರಿಷ್ಠ ಪ್ರಯತ್ನ ಮಾಡುವುದಾಗಿ ಹೇಳುತ್ತಲೇ ಇದೆ.
ಟ್ವಿಟರ್​ ಮೇಲೆ ಏನು ಪರಿಣಾಮಭಾರತದ ನೆಲದಲ್ಲಿ ಟ್ವಿಟರ್​ ಈಗ “ಇಂಟರ್​ಮೀಡಿಯರಿ’ ಅಲ್ಲ. ಅದರಲ್ಲಿ ಪ್ರಕಟವಾಗುವ ಮಾಹಿತಿ, ಡೇಟಾ ಮತ್ತು ಲಿಂಕ್​ಗಳು ಸೇರಿ ಪ್ರತಿಯೊಂದು ಕಂಟೆಂಟ್​ಗೂ ಟ್ವಿಟರ್​ ಕೂಡ ನೇರ ಹೊಣೆಗಾರನಾಗಿರುತ್ತದೆ. ಟ್ವಿಟರ್​ ಬಳಕೆದಾರರು ಐಟಿ ನಿಯಮ ಉಲ್ಲಂಘಿಸಿದರೆ ಟ್ವಿಟರ್​ನ ಉದ್ಯೋಗಿಗಳು ಕೂಡ ಅವರೊಂದಿಗೆ ಆರೋಪಿಗಳಾಗಿ ಬಿಡುತ್ತಾರೆ. ಅವರಿಗೆ “ಇಂಟರ್​ಮೀಡಿಯರಿ’ ಎಂಬ ಲೀಗಲ್​ ಕವರ್​ ಸಿಗುವುದಿಲ್ಲ. ಇದು ಬಿಟ್ಟರೆ, ಟ್ವಿಟರ್​ ಅಥವಾ ಟ್ವಿಟರ್​ ಬಳಕೆದಾರರಿಗೆ ಇದರಿಂದ ಬೇರೇನೂ ಪರಿಣಾಮವಾಗುವುದಿಲ್ಲ.
ಲೀಗಲ್​ ಕವರ್​ ಎಂದರೆ..ಸಾಮಾಜಿಕ ಜಾಲತಾಣಗಳಿಗೆ ಐಟಿ ಕಾಯ್ದೆಯ ಸೆಕ್ಷನ್​ 79ರ ಪ್ರಕಾರ “ಥರ್ಡ್​ ಪಾರ್ಟಿ’ ಅಥವಾ “ಇಂಟರ್​ಮೀಡಿಯರಿ’ ಎಂಬ ಮಾನ್ಯತೆ ಸಿಗಬೇಕಾದರೆ, ಕಾನೂನಿನಿಂದ ರಕ್ಷಣೆಗೆ ಸಿಗಬೇಕಾದರೆ ಹೊಸ “ಇಂಟರ್​ಮೀಡಿಯರಿ’ ಮಾರ್ಗಸೂಚಿಯನ್ನು ಅವು ಪಾಲಿಸಬೇಕು. ಟ್ವಿಟರ್​ ತನ್ನದೇ ಅಂತಾರಾಷ್ಟ್ರೀಯ ನಿಯಮದ ಚೌಕಟ್ಟಿನಲ್ಲಿ ಕಾರ್ಯನಿರ್ವಹಿಸುವುದಾಗಿ ಪ್ರತಿಪಾದಿಸುತ್ತಿದೆ. “ಇಂಟರ್​ಮೀಡಿಯರಿ’ ಮಾರ್ಗಸೂಚಿ ಪಾಲಿಸದ ಟ್ವಿಟರ್​ ವೇದಿಕೆಯಲ್ಲಿ ಪ್ರಕಟವಾಗುವ ಪ್ರತಿಯೊಂದು ಕಂಟೆಂಟ್​ಗೂ ಅದರ ಬಳಕೆದಾರರಷ್ಟೇ ಅಲ್ಲ, ಅದು ಕೂಡ ನೇರ ಹೊಣೆಗಾರಿಕೆ ವಹಿಸಬೇಕಾಗುತ್ತದೆ.
ಕಾರಣವೇನು?ದೇಶದಲ್ಲಿ ಮಾರ್ಚ್​ 25ರಂದು ಪರಿಚಯಿಸಲಾದ ಇಂಟರ್​ಮೀಡಿಯರಿ ಮಾರ್ಗಸೂಚಿ ಮೇ 26ರಿಂದ ಜಾರಿಗೆ ಬಂದಿದೆ. ಸಾಕಷ್ಟು ಕಾಲಾವಕಾಶ ನೀಡಿದರೂ ಟ್ವಿಟರ್​ “ಉದ್ದೇಶಪೂರ್ವಕ’ವಾಗಿ ಮಾರ್ಗಸೂಚಿ ಪಾಲಿಸಿಲ್ಲ. ಟ್ವಿಟರ್​ನಲ್ಲಿರುವ ಕಂಟೆಂಟ್​ ಅನ್ನು “ಯಾವಾಗ ಸೂಕ್ತವೋ ಆಗ’ ತಡೆಯುವ ಮಾರ್ಗವನ್ನು ಸರ್ಕಾರ ಅನುಸರಿಸಲಿದೆ ಎಂದು ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವ ರವಿಶಂಕರ ಪ್ರಸಾದ್​ ಹೇಳಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eight + 19 =
Remember me
