ನವದೆಹಲಿ:ಭೋಪಾಲ್​ನಿಂದ ದೆಹಲಿಗೆ ತೆರಳಬೇಕಿದ್ದ ನಾಲ್ವರ ಸುರಕ್ಷತೆಗಾಗಿ ಕುಟುಂಬವೊಂದು ಇಡೀ ವಿಮಾನವನ್ನೇ ಬುಕ್​ ಮಾಡಿತ್ತು. ಸಾಮಾನ್ಯವಾಗಿ ಬಾಡಿಗೆ ಉದ್ದೇಶಕ್ಕೆ ಲಘು ವಿಮಾನಗಳನ್ನು ಬಳಸಲಾಗುತ್ತದೆಯಾದರೂ, ಇವರು ಸಾಗಿದ್ದು ಮಾತ್ರ 180 ಸೀಟು ಸಾಮರ್ಥ್ಯದ ಏರ್​ಬಸ್​ 320 ವಿಮಾನದಲ್ಲಿ.
ಭೋಪಾಲ್​ ವಿಮಾನ ನಿಲ್ದಾಣಕ್ಕೆ ಮಹಾರಾಜ ಭೋಜ್​ ಹೆಸರನ್ನಿಡಲಾಗಿದೆ. ಮಹಾರಾಜನ ಶ್ರೀಮಂತಿಕೆ ಹೊಂದಿದ ಕುಟುಂಬ ಇದಾಗಿರಬಹುದೇನೋ? ಇಷ್ಟಕ್ಕೂ ನಾಲ್ವರನ್ನು ಕರೆದೊಯ್ಯಲು ಏರ್​ಬಸ್​-320 ವಿಮಾನ ದೆಹಲಿಯಿಂದ ಕೇವಲ ಸಿಬ್ಬಂದಿಯನ್ನು ಹೊತ್ತು ಬಂದಿತ್ತು. ಭೋಪಾಲ್​ನಿಂದ ಮಡದಿ, ಇಬ್ಬರು ಮಕ್ಕಳು ಹಾಗೂ ದಾದಿಯನ್ನು ಹೊತ್ತು ಸಾಗಿತು.
ಇದನ್ನೂ ಓದಿ;ಎಸ್​ಎಸ್​ಎಲ್​ಸಿ ಪರೀಕ್ಷೆ ರದ್ದಾಗಲ್ಲ…. ಗೊಂದಲ ಮಾಡ್ಕೊಬೇಡಿ, ಚೆನ್ನಾಗಿ ಓದ್ಕೊಳಿ..
ಕೋವಿಡ್​ ಕಾಲಮಾನದಲ್ಲಿ ಮಡದಿ, ಮಕ್ಕಳ ಸುರಕ್ಷತೆಗಾಗಿ ಈ ಕ್ರಮ ಕೈಗೊಂಡಿರಬಹುದು. ಇದಕ್ಕಾಗಿ 10 ಲಕ್ಷ ರೂ. ವೆಚ್ಚವಾಗಿರಬಹುದು ಎಂದು ಅಂದಾಜಿಸಲಾಗಿದೆ.ದೆಹಲಿಯಿಂದ 9.05ಕ್ಕೆ ಹೊರಟ ವಿಮಾನ 10.30ಕ್ಕೆ ಭೋಪಾಲ್​ ತಲುಪಿದೆ. ಭೋಪಾಲ್​ನಿಂದ 11.30ಕ್ಕೆ ಹೊರಟು 12.55ಕ್ಕೆ ದೆಹಲಿಗೆ ಆಗಮಿಸಿದೆ ಎಮದು ವಿಮಾನ ನಿಲ್ದಾಣಾಧಿಕಾರಿಗಳು ತಿಳಿಸಿದ್ದಾರೆ.
ಈ ಅವಧಿಯಲ್ಲಿ ಜನದಟ್ಟಣೆ ನಡುವೆ ಪ್ರಯಾಣಿಸಲು ಇಚ್ಛಿಸಿದ ಅತಿ ಶ್ರೀಮಂತ ಕುಟುಂಬಗಳು ವಿಶೇಷ ವಿಮಾನ ಬಳಸುತ್ತಿವೆ. ಅಂತಾರಾಷ್ಟ್ರೀಯ ವಿಮಾನ ಸಂಚಾರ ಬಂದ್​ ಆದ ಮರುದಿನ ಯುರೋಪ್​ನಿಂದ ಮುಂಬೈಗೆ ಮೂವರು ವಿಶೇಷ ವಿಮಾನದಲ್ಲಿ ಆಗಮಿಸಿದ್ದರು. ಇದಕ್ಕಾಗಿ ಅಂದಾಜು 80 ಲಕ್ಷ ರೂ. ವೆಚ್ಚವಾಗಿರಬಹುದು ಎಮದು ಅಂದಾಜಿಸಲಾಗಿದೆ.
ಇದನ್ನೂ ಓದಿ;‘ನೋ ಸೀಟ್​’ ಇರುತ್ತಿದ್ದ ಜಾಗದಲ್ಲಿ ಬಂದಿವೆ ‘ ಫಾರ್​ ಸೇಲ್​ ‘ ಬೋರ್ಡ್​ಗಳು
ಕಳೆದ ಮೂರು ದಿನಗಳಲ್ಲಿ ಬೆಂಗಳೂರು ವಿಮಾನ ನಿಲ್ದಾಣವೂ ಕೂಡ ಮುರು ವಿಶೇಷ ಅಥವಾ ಬಾಡಿಗೆ ವಿಮಾನಗಳನ್ನು ನಿರ್ವಹಿಸಿದೆ. ಬಾಡಿಗೆ ವಿಮಾನಗಳನ್ನು ಪ್ರತಿ ಗಂಟೆ ಅವಧಿಗೆ ದರ ನಿಗದಿ ಪಡಿಸಲಾಗುತ್ತದೆ. ವಿಮಾನದ ಇಂಧನದ ಬೆಲೆ ಆಧರಿಸಿ ಈ ದರ ನಿಗದಿಯಾಗುತ್ತದೆ. ಒಂದು ತಾಸಿನ ಪ್ರಯಾಣಕ್ಕೆ 4-6 ಲಕ್ಷ ರೂ. ವೆಚ್ಚವಾಗುತ್ತದೆ ಎಂದು ಅಂದಾಜಿಸಲಾಗಿದೆ.
ಹೊಸ ಮದುವೆ, ಹೊಸ ಅಪಾರ್ಟ್​ಮೆಂಟ್​, ಹೊಸ ಬದುಕು… ಆದರೆ, ಮುಗಿಯುತ್ತಲೇ ಇಲ್ಲ ಹನಿಮೂನ್​..!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × two =
Remember me
