ನವದೆಹಲಿ:ನಾಯಿಗಳನ್ನು ಮನೆ ಮಕ್ಕಳಂತೆ ಪ್ರೀತಿಸುವ ಜನರಿದ್ದಾರೆ. ಅವುಗಳಿಗೆ ಮನೆಮಕ್ಕಳಂತೆ ಗ್ರ್ಯಾಂಡ್ ಆಗಿ ಹುಟ್ಟುಹಬ್ಬ ಆಚರಿಸುತ್ತಾರೆ. ಆದರೆ ಇಲ್ಲೊಂದು ಕುಟುಂಬ ಶ್ವಾನಗಳಿಗೆ ಅದ್ಧೂರಿಯಾಗಿ ಮದುವೆ ಮಾಡಿರುವ ವೀಡಿಯೋ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ.
ವಿಡಿಯೋದಲ್ಲಿ ಏನಿದೆ?:ಗಂಡು, ಹೆಣ್ಣು ಎರಡು ಶ್ವಾನವನ್ನು ಮದುಮಕ್ಕಳಂತೆ ಸಿಂಗಾರ ಗೊಂಡಿದ್ದವು. ಕೆಂಪು ಬಣ್ಣದ ರೇಷ್ಮೆ ಶಾಲಿನ ಜೊತೆ ವಿವಿಧ ಆಭರಣಗಳಿಂದ ಸಿಂಗರಿಸಲಾಗಿತ್ತು. ಅದರ ಜೊತೆಗೆ ಶ್ವಾನಕ್ಕೆ ಗಂಡು ಶ್ವಾನವನನ್ನು ಪುಟ್ಟ ಕಾರಿನಲ್ಲಿ ಕರೆ ತಂದರೆ ಹೆಣ್ಣು ಶ್ವಾನವನ್ನು ಹೆಣ್ಣಿನ ಕಡೆಯವರೆಲ್ಲಾ ಸೇರಿ ಹೊತ್ತುಕೊಂಡು ಬಂದಿದ್ದಾರೆ. ನಂತರ ಈ ಶ್ವಾನ ಜೋಡಿಗೆ ದೊಡ್ಡ ಕಲ್ಯಾಣ ಮಂಟಪದಲ್ಲಿ ಆರತಕ್ಷತೆಯೂ ನಡೆದಿದೆ. ಅಲ್ಲದೇ ಬಳಿಕ ಮದ್ವೆಗೆ ಬಂದವರಿಗೆಲ್ಲಾ ಭೋಜನ ಉಣಬಡಿಸಲಾಗಿದೆ. ಕೊನೆಯದಾಗಿ ಗಂಡು ಶ್ವಾನದ ಮನೆಗೆ ಹೆಣ್ಣು ಶ್ವಾನವನ್ನು ಕರೆದೊಯ್ಯಲಾಗಿದೆ.
ಇದನ್ನೂ ಓದಿ:ಭಾರತದ ಮೊದಲ ತೃತೀಯ ಲಿಂಗಿ ದಂಪತಿಯ ಮಗುವಿಗೆ ನಾಮಕರಣ!
ಈ ವಿವಾಹ ಸಮಾರಂಭ ಎಲ್ಲಿ ನಡೆದಿದೆ. ಈ ಮದ್ವೆಯನ್ನು ಆಯೋಜಿಸಿದವರಾರು ಎಂಬ ಬಗ್ಗೆ ಯಾವುದೇ ಉಲ್ಲೇಖವಿಲ್ಲ. ಆದರೆ ವಿಡಿಯೋವನ್ನು ನೋಡಿದ ನೆಟ್ಟಿಗರು ಈ ಕುಟುಂಬಕ್ಕೆ ಶ್ವಾನಗಳ ಮೇಲೆ ಇರುವ ಪ್ರೀತಿಗೆ ಮೆಚ್ಚುಗೆ ಸೂಚಿಸಿ ವಿಭಿನ್ನವಾಗಿ ಕಾಮೆಂಟ್​​ ಮಾಡುತ್ತಿದ್ದಾರೆ.
They Had An Indian Wedding For Their Dogs.
😭😭😭😭
Deo Aapne Vichaar…pic.twitter.com/BsxMpi1nmE
— ਹਤਿੰਦਰ ਸਿੰਘ (@Hatindersinghr3)March 8, 2023

ಆಹಾರ ನುಂಗಲು ಕಷ್ಟಪಡುತ್ತಿದ್ದ ವ್ಯಕ್ತಿಯ ಅನ್ನನಾಳದಲ್ಲಿ ಸಿಕ್ತು 100ರೂ. 2 ನೋಟು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eight − 4 =
Remember me
