ಉನ್ನಾವೋ:ಅನ್ಯ ಧರ್ಮದ ಯುವಕನನ್ನು ಮದುವೆಯಾದ ಕಾರಣಕ್ಕೆ ಯುವತಿಯ ಕಡೆಯವರು ದಂಪತಿಗಳನ್ನು ಹತ್ಯೆ ಮಾಡಿರುವ ಘಟನೆ ಉತ್ತರಪ್ರದೇಶದ ಉನ್ನಾವೋದಲ್ಲಿ ನಡೆದಿದೆ.
ಮರ್ಯಾದೆ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವತಿಯ ತಂದೆ ಸೇರಿದಂತೆ ಏಳು ಮಂದಿಯ ವಿರುದ್ಧ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಠಾಕೂರ್​ ಸಮುದಾಯಕ್ಕೆ ಸೇರಿದ್ದ 17 ವರ್ಷದ ಅಪ್ರಾಪ್ತ ವಯಸಿನ ಬಾಲಕಿಯೂ ದಲಿತ ಸಮುದಾಯಕ್ಕೆ ಸೇರಿದ್ದ 19ವರ್ಷ ಪ್ರಾಯದ ಯುವಕನನ್ನು ಪ್ರೀತಿಸಿ ಮದುವೆಯಾಗಿದ್ದಳು.
ತಮ್ಮ ಮಗಳು ಕೆಳಜಾತಿಯ ಯುವಕನನ್ನು ಮದುವೆಯಾಗಿರುವ ವಿಚಾರ ತಿಳಿದ ಪೋಷಕರು ಖಾಯಂಪುರ ನಿವಾರವರ ಗ್ರಾಮದಲ್ಲಿ ಅಡಗಿರುವ ಬಗ್ಗೆ ಮಾಹಿತಿ ಪಡೆದಿದ್ದಾರೆ.
ಇದನ್ನೂ ಓದಿ:ಜನಸಂದಣಿ ಮೇಲೆ ಹರಿದ ಬಸ್​; ಐದು ಮಂದಿ ಮೃತ್ಯು
ಕೂಡಲೇ ಕುಟುಂಬದ ಇತರ ಸದಸ್ಯರೊಂದಿಗೆ ಗ್ರಾಮಕ್ಕೆ ದೌಡಾಯಿಸಿದ ಬಾಲಕಿ ಪೋಷಕರು ದಂಪತಿಗಳಿಬ್ಬರನ್ನು ಹತ್ಯೆ ಮಾಡಿ ಮಾವಿನ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ನೇತು ಹಾಕಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಆಸಿವಾನ್​ ಪೊಲೀಸ್​ ಠಾಣಾಧಿಕಾರಿ ಅಖಿಲೇಶ್​ ತಿವಾರಿ ಘಟನೆ ನಡೆದ ಹಿಂದಿನ ದಿನ ಮೃತ ಬಾಲಕಿಯ ತಂದೆ ತಮ್ಮ ಮಗಳನ್ನು ಯುವಕನೊಬ್ಬ ಅಪಹರಣ ಮಾಡಿದ್ಧಾನೆ ಎಂದು ಆರೋಪಿಸಿ ದೂರು ದಾಖಲಿಸಿದ್ದರು.
ಮಂಗಳವಾರ ಬೆಳಗ್ಗೆ ಯುವಕನ ತಂದೆ ಬಾಲಕಿಯ ಕುಟುಂಬಸ್ಥರ ವಿರುದ್ಧ ತಮ್ಮ ಮಗನನ್ನು ಅಪಹರಿಸಿ ಕೊಲೆ ಮಾಡಿದ್ದಾರೆ ಎಂದು ಆರೋಪಿಸಿ ದುರು ದಾಖಲಿಸಿದ್ದರು.
ಪೊಲೀಸರು ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸಿದಾಗ ಆರೋಪಿಗಳು ತಪ್ಪೊಪ್ಪಿಕೊಂಡಿದ್ದು ಮಗಳು ಕೆಲ ಜಾತಿಯ ಯುವಕನನ್ನು ವರಿಸಿದ ಕಾರಣ ಮರ್ಯಾದೆಗೆ ಅಂಜಿ ಕೃತ್ಯ ಎಸಗಿರಿವುದಾಗಿ ಹೇಳಿದ್ದಾರೆ.
ಮೊದಲಿಗೆ ದಂಪತಿಗಳಿಬ್ಬರನ್ನು ಕೊಂದು ಆ ನಂತರ ಅವರ ಸಾವನ್ನು ಆತ್ಮಹತ್ಯೆ ಎಂದು ಬಿಂಬಿಸಲು ಅವರ ಹೆಣಗಳನ್ನು ಮಾವಿನ ಮರಕ್ಕೆ ನೇಣು ಬಿಗದಿ ಸ್ಥಿತಿಯಲ್ಲಿ ನೇತು ಹಾಕಲಾಯಿತು ಎಂದು ಬಾಲಕಿಯ ತಂದೆ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 + sixteen =
Remember me
