ಆಲಪ್ಪುಳ:ಕೇರಳದ ಆಲಪ್ಪುಳ ಮೂಲದ ರಾಷ್ಟ್ರೀಯ ಸೈಕಲ್​ ಪೋಲೋ ಆಟಗಾರ್ತಿ ಫಾತಿಮಾ ನಿದಾ ಫುಡ್ ಪಾಯಿಸನಿಂಗ್​ನಿಂದಾಗಿ ಮಹಾರಾಷ್ಟ್ರದ ನಾಗ್ಪುರದಲ್ಲಿ ಮೃತಪಟ್ಟಿದ್ದು, ಸುದ್ದಿ ಮಾಧ್ಯಮಗಳಿಂದ ಮಗಳ ಸಾವಿನ ಸುದ್ದಿ ತಿಳಿದ ಕುಟುಂಬದಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ.
ಫಾತಿಮಾಳ ತಂದೆ ಶಿಹಾಬುದ್ದೀನ್​ ಓರ್ವ ಚಾಲಕ. ಮಗಳ ಸ್ಥಿತಿ ಗಂಭೀರವಾಗಿರುವ ಬಗ್ಗೆ ಮೊದಲು ಕರೆ ಸ್ವೀಕರಿಸಿದ ಶಿಹಾಬುದ್ದೀನ್​, ತಕ್ಷಣ ನಾಗ್ಪುರದಲ್ಲಿರುವ ಮಗಳನ್ನು ನೋಡಲು ಕೊಚ್ಚಿ ವಿಮಾನ ನಿಲ್ದಾಣಕ್ಕೆ ತೆರಳುತ್ತಾರೆ. ಆದರೆ, ವಿಮಾನ ನಿಲ್ದಾಣದಲ್ಲಿ ನ್ಯೂಸ್​ ಚಾನೆಲ್​ ವೀಕ್ಷಣೆ ಮಾಡುವಾಗ ಮಗಳು ಮೃತಪಟ್ಟಿರುವ ಸುದ್ದಿ ನೋಡಿ ಅಲ್ಲಿಯೆ ಕುಸಿದು ಬೀಳುತ್ತಾರೆ. ವಿಮಾನ ನಿಲ್ದಾಣದಲ್ಲಿ ತಂದೆಯ ರೋಧನೆ ನೋಡಿದ ಪ್ರಯಾಣಿಕರು ಕೂಡ ಕಂಬನಿ ಮಿಡಿಯುತ್ತಾರೆ.
ಇದಕ್ಕು ಮುನ್ನ ಪತ್ನಿ ಅನ್ಸಿಲಾ ಮತ್ತು ಮಗ ಮೊಹಮ್ಮದ್​ ನಬೀಲ್​​ಗೆ ಮಗಳ ಸ್ಥಿತಿಯ ಬಗ್ಗೆ ಶಿಹಾಬುದ್ದೀನ್​ ತಿಳಿಸಿರುವುದಿಲ್ಲ. ಆದರೆ, ನ್ಯೂಸ್​ ಚಾನೆಲ್​ ಮೂಲಕ ಮಗಳ ಸಾವಿನ ಸಂಗತಿ ತಿಳಿದಾಗ ಇಡೀ ಕುಟುಂಬ ಶೋಕ ಸಾಗರದಲ್ಲಿ ಮುಳುಗುತ್ತದೆ.
ರಾಷ್ಟ್ರೀಯ ಸೈಕಲ್ ಪೋಲೋ ಚಾಂಪಿಯನ್‌ಶಿಪ್‌ನ ಆಯೋಜಕರು ಕೇರಳ ತಂಡಕ್ಕೆ ವಸತಿ ವ್ಯವಸ್ಥೆ ಮಾಡುವುದನ್ನು ತಪ್ಪಿಸಿರುವುದರಿಂದ ಈ ದುರಂತ ಸಂಭವಿಸಿದೆ ಎಂದು ಇಂಡಿಯನ್ ಸೈಕಲ್ ಪೋಲೋ ತಂಡದ ಮಾಜಿ ನಾಯಕ ಪಿ.ಶಿವಕುಮಾರ್ ಆರೋಪಿಸಿದ್ದಾರೆ. ಸಂಸ್ಥೆಯ ಕಚೇರಿಗಳು ಮತ್ತು ಇತರ ಕೊಠಡಿಗಳಲ್ಲಿ ತಾತ್ಕಾಲಿಕ ಸೌಲಭ್ಯಗಳನ್ನು ಸ್ಥಾಪಿಸಲಾಗಿತ್ತು ಎಂದು ಶಿವಕುಮಾರ್ ಹೇಳಿದರು.
ಈ ಕುರಿತು ಮಾಹಿತಿ ನೀಡಿದ ಸಂಸದೆ ಪಿ.ಟಿ.ಉಷಾ, ಕ್ರೀಡಾ ಸಚಿವರೊಂದಿಗೆ ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ. ಫಾತಿಮಾ ನಿದಾ ಅವರು ವಾಕರಿಕೆ ಮತ್ತು ವಾಂತಿಯಿಂದ ಬಳಲಿದ ಹಿನ್ನೆಲೆಯಲ್ಲಿ ಗುರುವಾರ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಆರೋಗ್ಯ ಸ್ಥಿತಿ ಇನ್ನಷ್ಟು ಹದಗೆಟ್ಟ ಪರಿಣಾಮ ಆಕೆ ಚಿಕಿತ್ಸೆ ಫಲಿಸದೇ ಮೃತಪಟ್ಟಳು.(ಏಜೆನ್ಸೀಸ್​)
ಅವತಾರ್​-2 ಸಿನಿಮಾ ಎಫೆಕ್ಟ್​: ಅಪಾಯಕಾರಿ ತಿಮಿಂಗಿಲ ಶಾರ್ಕ್ ಮೇಲೆ ಸವಾರಿ ಮಾಡಿದ ಭೂಪ! ವಿಡಿಯೋ ವೈರಲ್​​

ಬೇಕಂತಲೇ ಕರೊನಾ ಸೋಂಕು ಅಂಟಿಸಿಕೊಂಡ ಚೀನಾ ಗಾಯಕಿ! ಆಕೆ ಕೊಟ್ಟ ಕಾರಣ ಕೇಳಿದ್ರೆ ಬೆರಗಾಗ್ತೀರಾ

ಮೈಮಾಟ ಪ್ರದರ್ಶಿಸಲು ಹೋಗಿ ಎಡವಟ್ಟು: ದುಬೈನಲ್ಲಿ ಬೋಲ್ಡ್​ ಬ್ಯೂಟಿ ಉರ್ಫಿ ಜಾವೇದ್​ ಬಂಧನ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five + 20 =
Remember me
