ವಿಶಾಖಪಟ್ಟಣಂ:ಶನಿವಾರ ವೈಜಾಗ್​ನ ಹಿಂದೂಸ್ಥಾನ್​ ಶಿಪ್​ಯಾರ್ಡ್​ ಲಿಮಿಟೆಡ್​ (ಎಚ್​​ಎಸ್​ಎಲ್​) ನಲ್ಲಿ ನಡೆದ ಕ್ರೇನ್ ದುರಂತದಲ್ಲಿ ಮೃತಪಟ್ಟ ಸಂಬಂಧಿಯ ಅಂತ್ಯಸಂಸ್ಕಾರಕ್ಕೆ ತೆರಳಿದ್ದ ಒಂದು ಕುಟುಂಬದ ಮೂವರು ಅಪಘಾತದಲ್ಲಿ ಮೃತಪಟ್ಟಿರುವ ಘಟನೆ ಭಾನುವಾರ ಆಂಧ್ರಪ್ರದೇಶದ ಶ್ರೀಕಾಕುಳಂ ಜಿಲ್ಲೆಯಲ್ಲಿ ನಡೆದಿದೆ.​ಮೃತರನ್ನು ನಾಗಮಣಿ (48), ಸೊಸೆ ಲಾವಣ್ಯ (23) ಹಾಗೂ ಕಾರು ಚಾಲಕ ರೌಟು ದ್ವಾರಕ (23) ಎಂದು ಗುರುತಿಸಲಾಗಿದೆ. ಕ್ರೇನ್​ ಅಪಘಾತದಲ್ಲಿ ಮೃತಪಟ್ಟ ನಾಗಮಣಿ ಅಳಿಯ ಪಿ. ಭಾಸ್ಕರ್​ ರಾವ್​ ಅಂತ್ಯಕ್ರಿಯೆಗೆ ಮೃತರು ವಿಶಾಖಪಟ್ಟಣಂಗೆ ಕಾರಿನಲ್ಲಿ ಬರುತ್ತಿದ್ದರು. ಈ ವೇಳೆ ಶ್ರೀಕಾಕುಳಂ ಜಿಲ್ಲೆಯ ಕಾಂಚಿಲಿಯಲ್ಲಿ ಸ್ಟೇಷನರಿ ತುಂಬಿದ ಟ್ರಕ್​ ಹಿಂಬದಿಗೆ ಕಾರು ಗುದ್ದಿ ಅವಘಢ ಸಂಭವಿಸಿದೆ.
ಇದನ್ನೂ ಓದಿ:ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕರೊನಾ ಸೋಂಕಿತೆಗೆ ಲೈಂಗಿಕ ದೌರ್ಜನ್ಯ, ಅಪರಿಚಿತ ವೈದ್ಯನಿಂದಲೇ ಹೀನಕೃತ್ಯ
ಅವಘಡದಲ್ಲಿ ನಾಗಮಣಿಯ ಇಬ್ಬರು ಗಂಡು ಮಕ್ಕಳು ಹಾಗೂ ಮತ್ತೊರ್ವ ಸೊಸೆ ಗಂಭೀರವಾಗಿ ಗಾಯಗೊಂಡಿದ್ದರು. ಅವರನ್ನು ತಕ್ಷಣ ಸೋಂಪೇಟ್​ನ ಆಸ್ಪತ್ರೆಗೆ ದಾಖಲಿಸಿ, ಪ್ರಾಥಮಿಕ ಚಿಕಿತ್ಸೆ ಕೊಡಿಸಿ, ಬಳಿಕ ಹೆಚ್ಚಿನ ಚಿಕಿತ್ಸೆಗೆ ಶ್ರೀಕಾಕುಳಂಗೆ ದಾಖಲಿಸಲಾಯಿತು. ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ.
ಕ್ರೇನ್​ ದುರಂತದಲ್ಲಿ ಅಳಿಯ ಮೃತಪಟ್ಟಿದ್ದಾನೆ ಎಂದು ತಿಳಿದ ತಕ್ಷಣವೇ ಕುಟುಂಬ ಪಶ್ಚಿಮಬಂಗಾಳದ ಖರಗ್ಪುರದಿಂದ ಹೊರಟಿದ್ದರು. ಆದರೆ, ಮಾರ್ಗ ಮಧ್ಯೆಯೇ ಮೂವರ ಪ್ರಾಣ ಹೋಗಿರುವುದು ದುರ್ದೈವದ ಸಂಗತಿ.
ಇನ್ನು ಶನಿವಾರ ಎಚ್​ಎಸ್​ಎಲ್​ ಸಂಭವಿಸಿದ ಬೃಹತ್​ ಕ್ರೇನ್​ ದುರಂತದಲ್ಲಿ 11 ಮಂದಿ ಮೃತಪಟ್ಟಿದ್ದರು. ಇದರಲ್ಲಿ ನಾಲ್ವರು ಖಾಯಂ ನೌಕರರು ಹಾಗೂ 7 ಮಂದಿ ಗುತ್ತಿಗೆ ನೌಕರರು ಸಾವೀಗಿಡಾಗಿದ್ದರು. ಮೃತಪಟ್ಟ ಭಾಸ್ಕರ್​ ರಾವ್​ (35) ಮುಖ್ಯ ಇಂಜಿನಿಯರ್​ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಇನ್ನು ಕ್ರೇನ್​ ದುರಂತದ ತನಿಖೆಗೆ ಆದೇಶಿಸಲಾಗಿದ್ದು, ತನಿಖಾ ಸಮಿತಿಯನ್ನು ರಚಿಸಲಾಗಿದೆ. ಅಲ್ಲದೆ, ಮೃತರಿಗೆ ತಲಾ 50 ಲಕ್ಷ ರೂ. ಪರಿಹಾರವನ್ನು ಸರ್ಕಾರ ಘೋಷಿಸಿದೆ.(ಏಜೆನ್ಸೀಸ್​)
ಇದನ್ನೂ ಓದಿ:ಸಾವಿಗೂ ಮುನ್ನ ಕೊನೆ 2 ಗಂಟೆಯವರೆಗೆ ಸುಶಾಂತ್​ ಮಾಡಿದ್ದೇನು?: ಪೊಲೀಸ್​ ಆಯುಕ್ತರ ಕುತೂಹಲಕಾರಿ ಹೇಳಿಕೆ!
ಹಳಿಗಳ ಮೇಲೆ ಸೈಕಲ್ ಸವಾರಿ​; ಆನಂದ್​ ಮಹೀಂದ್ರಾ ಮೆಚ್ಚಿದ್ದಾರೆ ಈ ಸಂಶೋಧನೆ…!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen + 8 =
Remember me
