ಉತ್ತರಪ್ರದೇಶ:ಈ ಹಿಂದೆಯೂ ಅನೇಕ ಪ್ರಕರಣಗಳಲ್ಲಿ ಗ್ಯಾಸ್ ಹೀಟರ್​ನಿಂದಾಗಿ ಉಸಿರುಕಟ್ಟಿ ಪ್ರಾಣ ಕಳೆದುಕೊಂಡ ಘಟನೆಗಳನ್ನು ಕೇಳಿರುತ್ತೇವೆ. ಆದರೆ ಇಲ್ಲಿ ಹೀಟರ್​ಅನ್ನು ಆನ್​ ಬಿಟ್ಟ ತಪ್ಪಿಗೆ ಇಡೀ ಕುಟುಂಬವೇ ಸಾವಿಗೀಡಾಗಿದೆ.
ದಿನನಿತ್ಯದಂತೆ ಈ ಹಾಲಿನ ವ್ಯಾಪಾರಿ ಮನೆ ಬಾಗಿಲಿನ ಮುಂದೆ ಬಂದಿದ್ದಾನೆ. ಹಾಲಿನ ಪಾತ್ರೆಗಾಗಿ ಬಾಗಿಲು ತಟ್ಟಿದ್ದಾನೆ. ಆದರೆ ಯಾರೂ ಉತ್ತರಿಸುತ್ತಿಲ್ಲ. ಇದರಿಂದ ಗಾಬರಿಗೊಂಡ ಹಾಲಿನಾತ ಸುತ್ತಮುತ್ತಲಿನವರನ್ನು ಕರೆದಿದ್ದಾನೆ. ಕಡೆಗೆ ಪೊಲೀಸರು ಬಂದು ಬಾಗಿಲು ಒಡೆದು ನೋಡಿದಾಗ, ಮನೆಯಲ್ಲಿದ್ದ ಎಲ್ಲರೂ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವುದು ಕಂಡುಬಂದಿದೆ.
ನಂತರ ಪೊಲೀಸರ ತನಿಖೆಯಲ್ಲಿ ಇವರು ರಾತ್ರಿ ಮಲಗುವಾಗ ಹೀಟರ್ ಹಾಕಿಟ್ಟು ಮಲಗಿದ್ದರು. ಆದರೆ ಆಫ್​ ಮಾಡದ ಕಾರಣ ಉಸಿರುಗಟ್ಟಿ ಎಲ್ಲರೂ ಪ್ರಾಣ ಕಳೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಸ್ಥಳೀಯ ಮದರಸಾದಲ್ಲಿ ಗುಮಾಸ್ತರಾಗಿ ಕೆಲಸ ಮಾಡುತ್ತಿದ್ದ ಆಸಿಫ್ (35), ಅವರ ಪತ್ನಿ ಶಗುಫ್ತಾ (32) ಮತ್ತು ಅವರ ಮಕ್ಕಳಾದ ಜೈದ್ (3) ಮತ್ತು ಮೈರಾ (2) ಶನಿವಾರ ರಾತ್ರಿ ತಮ್ಮ ಕೋಣೆಯಲ್ಲಿ ಗ್ಯಾಸ್ ಹೀಟರ್ ಹಾಕಿಕೊಂಡು ಮಲಗಿದ್ದರು. ಗ್ಯಾಸ್ ಹೀಟರ್‌ನಿಂದ ಉಸಿರುಗಟ್ಟಿದ ಅವರು ಭಾನುವಾರ ಬೆಳಿಗ್ಗೆ ಸಾವನ್ನಪ್ಪಿದ್ದಾರೆ ಎಂದು ಸರ್ಕಲ್ ಅಧಿಕಾರಿ (ಎಸ್​ಐ) ಬಿಸ್ವಾ ಅಭಿಷೇಕ್ ಪ್ರತಾಪ್ ತಿಳಿಸಿದ್ದಾರೆ.
ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬಾಗಿಲು ಒಡೆದು ನೋಡಿದಾಗ ಕುಟುಂಬದ ಸದಸ್ಯರೆಲ್ಲರೂ ಹಾಸಿಗೆಯ ಮೇಲೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವುದು ಕಂಡುಬಂದಿದೆ. ಮನೆಯಲ್ಲಿ ಪ್ರಜ್ಞಾಹೀನರಾಗಿ ಬಿದ್ದಿದ್ದ ಎಲ್ಲರನ್ನು ಬಿಸ್ವ ಸಮುದಾಯ ಆರೋಗ್ಯ ಕೇಂದ್ರಕ್ಕೆ ರವಾನಿಸಲಾಯಿತು. ಅಲ್ಲಿ ವೈದ್ಯರು ಅವರು ಸಾವನ್ನಪ್ಪಿದ್ದಾರೆ ಎಂದು ಘೋಷಿಸಿದರು ಎಂದು ಸರ್ಕಲ್​ ಅಧಿಕಾರಿ ಪ್ರತಾಪ್ ಮಾಹಿತಿ ನೀಡಿದ್ದಾರೆ.(ಏಜೆನ್ಸೀಸ್)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 + 3 =
Remember me
