ಹೈದರಾಬಾದ್​:ಚಾಲಕನ ನಿಯಂತ್ರಣ ಕಳೆದುಕೊಂಡ ಕಾರೊಂದು ಉರುಳಿಬಿದ್ದರೂ ಸಹ ಐವರು ಸದಸ್ಯರನ್ನೊಳಗೊಂಡ ಕುಟುಂಬವೊಂದು ಪವಾಡ ರೀತಿಯಲ್ಲಿ ಕೆಲವು ಗಾಯಗಳೊಂದಿಗೆ ಪಾರಾಗಿರುವ ಘಟನೆ ಹೈದರಾಬಾದ್​ನ ಘಟ್ಕೇಸರ್​ ಬಳಿಯಿರುವ​ ಹೊರ ವರ್ತುಲ ರಸ್ತೆಯಲ್ಲಿ ಶುಕ್ರವಾರ ಮಧ್ಯಾಹ್ನ ಸಂಭವಿಸಿದೆ.
ಇದನ್ನೂ ಓದಿ:ಡ್ರೋನ್ ತಯಾರಿಸಿದ್ದಾಗಿ ರೈಲು ಬಿಟ್ಟ ಪ್ರತಾಪ್: ಐಷಾರಾಮಿ ಜೀವನ ನಡೆಸುತ್ತಿರುವ ನಕಲಿ ವಿಜ್ಞಾನಿ
ಚಾಲಕ ಸ್ಟೀರಿಂಗ್​ ವ್ಹೀಲ್​ ನಿಯಂತ್ರಣ ಕಳೆದುಕೊಂಡಿದ್ದರಿಂದ ಅವಘಡ ಸಂಭವಿಸಿದೆ ಎಂದು ಹೇಳಲಾಗಿದೆ. ಕಾರಿನಲ್ಲಿ ಮೂವರು ಮಹಿಳೆಯರು ಹಾಗೂ ಇಬ್ಬರು ಪುರುಷರು ಇದ್ದರು. ಹೈದರಾಬಾದ್​ ಕಡೆ ತೆರಳುತ್ತಿದ್ದರು. ದಮ್ಮೈಗುಡ ನಿವಾಸಿಯಾಗಿರುವ ಕುಟುಂಬ ಪ್ರವಾಸ ಮುಗಿಸಿ ಮರಳುತ್ತಿದ್ದರು ಎಂದು ವರದಿಯಾಗಿದೆ.
ರಸ್ತೆ ತಿರುವಿನಲ್ಲಿ ಕಾರು ಚಾಲಕನ ನಿಯಂತ್ರಣ ಕಳೆದುಕೊಂಡು ರಸ್ತೆ ಬದಿಯ ಅಡ್ಡೆಗೋಡೆಗಳನ್ನು ಗುದ್ದಿಕೊಂಡು ಇಳಿಜಾರಿನ ಪ್ರದೇಶಕ್ಕೆ ಬಿದ್ದಿದೆ. ಕಾರು ಸಂಪೂರ್ಣ ಜಖಂಗೊಂಡಿದ್ದರು ಅದೃಷ್ಟವಶಾತ್​ ಎಲ್ಲ ಐವರು ಸಹ ಸಣ್ಣಪುಟ್ಟ ಗಾಯಗಳೊಂದಿಗೆ ಬಚಾವ್​ ಆಗಿದ್ದಾರೆ. ಭೀಕರ ಅಪಘಾತದಲ್ಲೂ ಪ್ರಾಣಹಾನಿ ಸಂಭವಿಸದೇ ಇರುವುದು ಅದೃಷ್ಟವೇ ಸರಿ.
ಇದನ್ನೂ ಓದಿ:ಪ್ರೀತಿ ಹೆಸರಲ್ಲಿ ಮಹಿಳೆಯರಿಗೆ ಧೋಖಾ: ಅಪರಿಚಿತರಿಗೆ ಖಾಸಗಿ ದೃಶ್ಯ ಕಳುಹಿಸಿ ಪೇಚು
ಈ ಘಟನೆ ಘಟ್ಕೇಶ್ವರ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಆದರೆ, ಈ ಸಂಬಂಧ ಪ್ರಕರಣ ದಾಖಲಾಗಿಲ್ಲ. ಯಾರೊಬ್ಬರು ಸಹ ಮುಂದೆ ಬಂದು ದೂರು ದಾಖಲಿಸಿಲ್ಲ. ಸದ್ಯ ಗಾಯಗೊಂಡ ಕುಟುಂಬ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ. ಒಂದು ವೇಳೆ ದೂರು ನೀಡಿದರೆ, ಪ್ರಕರಣ ದಾಖಲಿಸಿವೆವು ಎಂದು ಘಟ್ಕೇಶ್ವರ ಪೊಲೀಸ್​ ಠಾಣೆಯ ಇನ್​ಸ್ಪೆಕ್ಟರ್​ ರಘುವೀರ್​ ರೆಡ್ಡಿ ತಿಳಿಸಿದರು.(ಏಜೆನ್ಸೀಸ್​)
ಡೇಟಿಂಗ್ ಆಸೆ ತೋರಿಸಿ ಯುವಕರಿಗೆ ಮೋಸ ಮಾಡಿದ ಮಹಿಳೆಯರು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × 4 =
Remember me
