ಚೆನೈ:ತಮಿಳಿನ ಸ್ಟಾರ್​ ನಟ ಸಿಂಬರಸನ್​ ನಟನೆಯ ಪತ್ತು ತಲಾ ಚಿತ್ರ ವೀಕ್ಷಿಸಲು ಮಲ್ಟಿಫ್ಲೆಕ್ಸ್​ಗೆ ಹೋಗಿದ್ದ ನಾರಿಕರುವ ಸಮುದಾಯದ ಅಲೆಮಾರಿ ಜನರನ್ನು ಸಿಬ್ಬಂದಿ ಸಿನಿಮಾ ವೀಕ್ಷಿಸಲು ಥಿಯೇಟರ್​ ಒಳಗೆ ಬಿಡದಿರುವುದು ತಮಿಳುನಾಡಿನಲ್ಲಿ ಹೊಸ ವಿವಾದವನ್ನ ಹುಟ್ಟುಹಾಕಿದೆ.
ಚೆನೈನ ಕೋಯೆಂಬಾಡು ಪ್ರದೇಶದಲ್ಲಿರುವ ರೋಹಿಣಿ ಸಿಲ್ವರ್​ ಸ್ಕ್ರೀನ್ಸ್​ ಮಲ್ಟಿಫ್ಲೆಕ್ಸ್​ನಲ್ಲಿ ಘಟನೆ ನಡೆದಿದೆ. ನಾರಿಕರುವ ಸಮುದಾಯದ ಮಹಿಳೆ ಹಾಘೂ ಮಕ್ಕಳು ಟಿಕೆಟ್​ ಖರೀದಿಸಿ ಚಿತ್ರವನ್ನ ವೀಕ್ಷಿಸಲು ಬಂದಿದ್ದರು. ಆದರೆ, ಟಿಕೆಟ್​ ತಪಾಸಣೆ ವೇಳೆ ಸಿಬ್ಬಂದಿ ಇವರುಗಳನ್ನು ತಡೆದಿದ್ದು ಚಿತ್ರಮಂದಿರ ಪ್ರವೇಶಕ್ಕೆ ಅನುವು ಮಾಡಿಕೊಟ್ಟಿಲ್ಲ.
ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು ಸಾಕಷ್ಟು ಖಂಡನೆ ವ್ಯಕ್ತವಾಗಿದ್ದು ಚಿತ್ರಮಂದಿರದ ಆಡಳಿತ ಮಂಡಳಿ ಅವರನ್ನು ಜನ ತರಾಟೆಗೆ ತೆಗೆದುಕೊಂಡಿದ್ದಾರೆ.
They paid money and bought tickets why don't you let them in? Is it a problem for you that they are dressed like that😡😡😡😡What is this@RohiniSilverScr?????@rhevanth95???#PathuThalapic.twitter.com/Q7iuj9xjEY
ಇದನ್ನೂ ಓದಿ:ಸಿಕ್ಕ ಅವಕಾಶಗಳನ್ನು ಸಂಭ್ರಮಿಸಿ; ಕಮಲ್ ಹಾಸನ್ ಕರೆ
ಘಟನೆ ಕುರಿತು ಪ್ರತಿಕ್ರಿಯಿಸಿರುವ ರೋಹಿಣಿ ಸಿಲ್ವರ್​ ಸ್ಕ್ರೀನ್ಸ್​ ಸಂಸ್ಥೆ ಪತ್ತು ತಲಾ ಚಿತ್ರವು U/A ಪ್ರಮಾಣಪತ್ರ ಇರುವ ಸಿನಿಮಾ. ಚಿತ್ರವನ್ನು ವೀಕ್ಷಿಸಲು 12 ವರ್ಷಕ್ಕಿಂತ ವಯಸ್ಸಿನ ಕೆಳಗಿರುವವರನ್ನು ಚೆಕ್ಕಿಂಗ್​ ಕೌಂಟರ್​ ಬಳಿ ಅವರೆಲ್ಲರನ್ನು ತಡೆಯಲಾಗಿತ್ತು. ಆದರೆ, ನಂತರ ಅವರಿಗೆ ಚಿತ್ರವನ್ನು ವೀಕ್ಷಿಸಲು ಅವಕಾಶವನ್ನು ನೀಡಲಾಯಿತ್ತು ಎಂದು ಸಂಸ್ಥೆಯೂ ಸಮಜಾಯಿಷಿ ನೀಡಿದೆ.
pic.twitter.com/uZkeKGN1nO
ರೋಹಿಣಿ ಸಿಲ್ವರ್​ ಸ್ಕ್ರೀನ್ಸ್​ ಸಂಸ್ಥೆಯ ನಡೆಗೆ ಅನೇಕರು ಆಕ್ಷೇಪಿಸಿದ್ದು ಅನುಮತಿ ಇಲ್ಲದೆ ವಿಡಿಯೋವನ್ನು ತೆಗೆದು ಪ್ರಕಟಿಸಿದ್ದು ತಪ್ಪು. ಇದು ಅಮಾಯಕರನ್ನು ಗೇಲಿ ಮಾಡುವಂತಿದೆ ಸರ್ಕಾರ ರೋಹಿಣಿ ಸಂಸ್ಥೆಯ ವಿರುದ್ದ ಕಠಿಣ ಕ್ರಮವನ್ನು ಜರುಗಿಸಬೇಕು ಎಂದು ನೆಟ್ಟಿಗರು ಆಗ್ರಹಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 − 9 =
Remember me
