ನವದೆಹಲಿ:2024ರ ಲೋಕಸಭೆ ಚುನಾವಣೆಗೆ ಬಿಜೆಪಿ ಕುಟುಂಬ ರಾಜಕಾರಣಮುಕ್ತ ಭಾರತ ಎಂಬ ವಿಷಯವನ್ನೇ ಚುನಾವಣಾ ವಿಷಯವನ್ನಾಗಿ ಮಾಡಬೇಕೆಂಬ ಉದ್ದೇಶ ಹೊಂದಿದ್ದು, ಹೈದರಾಬಾದ್​ನಲ್ಲಿ ನಡೆಯುತ್ತಿರುವ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಈ ಬಗ್ಗೆ ಗಂಭೀರ ಚರ್ಚೆಗಳು ನಡೆದಿವೆ ಎಂದು ಹೇಳಲಾಗಿದೆ. ದಕ್ಷಿಣ ಭಾರತ ಸೇರಿ ಬಹುತೇಕ ರಾಜ್ಯಗಳ ಪ್ರಾದೇಶಿಕ ಪಕ್ಷಗಳು ಕುಟುಂಬ ರಾಜಕಾರಣದಿಂದಲೇ ತುಂಬಿ ಹೋಗಿವೆ. ಹೀಗಾಗಿ, ಪ್ರಜಾಪ್ರಭುತ್ವ ಸಿದ್ಧಾಂತ ಪಾಲನೆಯಾಗದಿರಲು, ಭ್ರಷ್ಟಾಚಾರ ಮತ್ತು ದುರಾಡಳಿತ ಹೆಚ್ಚಲು ಕುಟುಂಬ ರಾಜಕಾರಣವೇ ಮೂಲ ಕಾರಣ ಎಂದು ಬಿಂಬಿಸಲು ಬಿಜೆಪಿ ಉದ್ದೇಶಿಸಿದೆ. ಪ್ರಧಾನಿ ಮೋದಿ ಅವರೂ ಈ ಬಗ್ಗೆ ಅನೇಕ ವೇದಿಕೆಗಳಲ್ಲಿ ಮಾತನಾಡಿರುವುದು ಉಲ್ಲೇಖಾರ್ಹ. ಪತ್ರಿಕೆಗಳಲ್ಲಿ ಲೇಖನಗಳ ಮುಖಾಂತರ ಹಾಗೂ ವಿವಿಧ ಕಡೆ ಮುಖಂಡರ ಮೂಲಕ ಕುಟುಂಬ ರಾಜಕಾರಣದಿಂದ ಭಾರತವನ್ನು ಮುಕ್ತಗೊಳಿಸುವ ಬಗ್ಗೆ ಭಾಷಣಗಳನ್ನು ಮಾಡಲು ನಿರ್ಧರಿಸಲಾಗಿದೆ. ಏತನ್ಮಧ್ಯೆ, ಲೋಕಸಭೆ ಚುನಾವಣೆಗೆ ದಕ್ಷಿಣ ಭಾರತದ ಮೇಲೆ ಹೆಚ್ಚು ಗಮನ ಕೇಂದ್ರೀಕರಿಸುತ್ತಿರುವ ಬಿಜೆಪಿ, ತೆಲಂಗಾಣದಲ್ಲಿ ಕೆಸಿಆರ್ ಆಡಳಿತ ಗುರಿಯಾಗಿಸಿ, ತನ್ನ ಸೀಟುಗಳನ್ನು ಹೆಚ್ಚಿಸಿಕೊಳ್ಳುವ ಲೆಕ್ಕಾಚಾರ ಹಾಕಿಕೊಂಡಿದೆ.
ಬೂತ್ ಬಲವರ್ಧನೆ:2024ರ ಲೋಕಸಭೆ ಚುನಾವಣೆಗೆ ಈಗಾಗಲೇ ಪೂರ್ವ ತಯಾರಿ ನಡೆಸುತ್ತಿರುವ ಬಿಜೆಪಿ, ಹೈದರಾಬಾದ್​ನಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಬೂತ್ ಮಟ್ಟದಲ್ಲಿ ಪಕ್ಷವನ್ನು ಮತ್ತಷ್ಟು ಬಲಪಡಿಸಿ ಜನರೊಂದಿಗೆ ನಿರಂತರ ಸಂಪರ್ಕದಲ್ಲಿರುವ ಅಗತ್ಯದ ಸಂದೇಶವನ್ನು ತನ್ನ ಕಾರ್ಯಕರ್ತ ವರ್ಗಕ್ಕೆ ರವಾನಿಸಿದೆ. ಎಲ್ಲಾ ರಾಜ್ಯಗಳ ಬೂತ್​ಗಳನ್ನು ಗಟ್ಟಿಗೊಳಿಸುವುದು ಮತ್ತು ಪಕ್ಷದ ನಾಯಕರು ಸದಾ ಬೂತ್ ಅಧ್ಯಕ್ಷರು ಮತ್ತು ಕಾರ್ಯಕರ್ತರೊಂದಿಗೆ ಸಂಪರ್ಕದಲ್ಲಿರಬೇಕು ಎಂದು ತಿಳಿಸಲಾಗಿದೆ. ಸರ್ಕಾರದ ಯೋಜನೆಗಳ 34 ಕೋಟಿಗೂ ಹೆಚ್ಚು ಫಲಾನುಭವಿಗಳನ್ನು ತಲುಪುವ ಮಾರ್ಗಗಳ ಬಗ್ಗೆಯೂ ಪಕ್ಷ ರ್ಚಚಿಸಲಿದೆ ಎಂದು ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೆ ಹೈದರಾಬಾದ್​ನಲ್ಲಿ ಹೇಳಿದ್ದಾರೆ. ಮೂರು ಗಂಟೆಗಳ ಕಾಲ ನಡೆದ ಸಭೆ ಬಳಿಕ ಸುದ್ದಿಗಾರರಿಗೆ ಅವರು ಈ ಮಾಹಿತಿ ಹಂಚಿಕೊಂಡಿದ್ದಾರೆ. ನಾಯಕರು ಹಳ್ಳಿಗಳು ಮತ್ತು ಪಟ್ಟಣಗಳಲ್ಲಿ ಕನಿಷ್ಠ ಒಂದು ರಾತ್ರಿ ಕಳೆದು, ಜನರೊಂದಿಗೆ ಸಂಪರ್ಕದಲ್ಲಿರಬೇಕು. ಇದಕ್ಕಾಗಿ ನಾಯಕರನ್ನು ಪ್ರವಾಸಕ್ಕೆ ಕಳುಹಿಸುವ ಪಕ್ಷದ ವ್ಯವಸ್ಥೆಗೆ ಪಕ್ಷ ಗಮನಹರಿಸಲಿದೆ. ಬೂತ್​ಗಳನ್ನು ಬಲಪಡಿಸಲು ಹಲವು ಸಾಧನಗಳ ಬಗ್ಗೆ ರ್ಚಚಿಸಲಾಗಿದೆ. ಮೊದಲನೆಯದು ಪ್ರತಿ ಬೂತ್​ನಲ್ಲಿ 200 ಕಾರ್ಯಕರ್ತರು ಮತ್ತು ಮತದಾರರೊಂದಿಗೆ ಸಂಪರ್ಕ ಸಾಧಿಸಲು ವಾಟ್ಸಾಪ್ ಗುಂಪುಗಳನ್ನು ರಚಿಸುವುದು. 2019ರ ಲೋಕಸಭೆ ಚುನಾವಣೆಯಲ್ಲಿ 10 ಲಕ್ಷಕ್ಕೂ ಹೆಚ್ಚು ಬೂತ್​ಗಳಿದ್ದವು. ಎರಡನೆಯದಾಗಿ, ಬೂತ್ ಕಾರ್ಯಕರ್ತರು ಪ್ರಧಾನಿಯವರ ಮನ್ ಕಿ ಬಾತ್ ಪ್ರಸಾರವನ್ನು ಜನರಿಗೆ ತಲುಪಿಸುವುದು. ಹರ್ ಘರ್ ತಿರಂಗಾ ಎಂಬ ಅಭಿಯಾನ ಪ್ರಾರಂಭಿಸಲು ಪಕ್ಷ ನಿರ್ಧರಿಸಿದೆ 75ನೇ ಸ್ವಾತಂತ್ರ್ಯ ಸಂಭ್ರಮಾಚರಣೆ ಹಿನ್ನೆಲೆಯಲ್ಲಿ ಜನರು ತಮ್ಮ ಮನೆಗಳಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸುವಂತೆ ಪಕ್ಷ ಕೇಳಿಕೊಳ್ಳಲಿದೆ. 20 ಕೋಟಿ ಮನೆಗಳ ತಲುಪುವ ಗುರಿ ಹೊಂದಲಾಗಿದೆ ಎಂದು ರಾಜೇ ತಿಳಿಸಿದ್ದಾರೆ.
ದೇಶವನ್ನು ನಾವು ಅಭಿವೃದ್ಧಿ ದಿಕ್ಕಿನಲ್ಲಿ ಕೊಂಡೊಯ್ಯಲು ಯತ್ನಿಸಿದರೆ, ಕೇಂದ್ರ ಮತ್ತು ರಾಜ್ಯಗಳಲ್ಲಿ ಬಿಜೆಪಿ ನೇತೃತ್ವದ ಸರ್ಕಾರಗಳ ಕಾರ್ಯಕ್ರಮಗಳ ಹಳಿತಪ್ಪಿಸಲು ವಿಪಕ್ಷಗಳು ಹುನ್ನಾರ ಮಾಡುತ್ತಿವೆ. ಭಾರತವನ್ನು ಸಶಕ್ತಗೊಳಿಸುವ ಸರ್ಕಾರದ ಉತ್ತಮ ಕ್ರಮಗಳಿಗೆ ಆಕ್ಷೇಪಣೆ ಎತ್ತಿ ದೇಶವನ್ನು ವಿರೋಧಿಸಲು ಪ್ರಾರಂಭಿಸಿವೆ.
|ಜೆ.ಪಿ. ನಡ್ಡಾಬಿಜೆಪಿ ರಾಷ್ಟ್ರೀಯ ಅಧ್ಯಕ್ಷ
ಕೆಸಿಆರ್ ಗೈರು:ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಪಾಲ್ಗೊಳ್ಳಲೆಂದು ಪ್ರಧಾನಿ ನರೇಂದ್ರ ಮೋದಿ ಹೈದರಾಬಾದ್​ಗೆ ಬಂದಿಳಿದ ವೇಳೆ ಸ್ವಾಗತಿಸಲು ರಾಜ್ಯದ ಸಿಎಂ ಕೆ. ಚಂದ್ರಶೇಖರ ರಾವ್ ಹಾಜರಿರಲಿಲ್ಲ. ಕಳೆದ 6 ತಿಂಗಳಲ್ಲಿ ಹೀಗಾಗುತ್ತಿರುವುದು ಮೂರನೇ ಬಾರಿ. ಸಿಎಂ ಗೈರಿನ ಹಿನ್ನೆಲೆಯಲ್ಲಿ ರಾಜ್ಯದ ಸಚಿವರಾದ ತಲಸಾನಿ ಶ್ರೀನಿವಾಸ ಯಾದವ್ ಮತ್ತು ಪಕ್ಷದ ಇತರೆ ಮುಖಂಡರು ಪ್ರಧಾನಿಯವರನ್ನು ಸ್ವಾಗತಿಸಿದ್ದಾರೆ. ಸಿಎಂ ಉದ್ದೇಶಪೂರ್ವಕವಾಗಿಯೇ ಬಂದಿಲ್ಲ ಎಂದು ಬಿಜೆಪಿ ಆರೋಪಿಸಿದೆ. ಸಿಎಂ ಬರಲೇಬೇಕೆಂದು ಹೇಳಿದ್ದು ಯಾರು? ರಾಜ್ಯ ಸರ್ಕಾರದ ಪ್ರತಿನಿಧಿಯಾಗಿ ನಾನು ಬಂದಿದ್ದೇನೆ ಮತ್ತು ಸ್ವಾಗತಿಸಿದ್ದೇನೆ ಎಂದು ಯಾದವ್ ಸಮರ್ಥಿಸಿಕೊಂಡಿದ್ದಾರೆ.
ರಾಷ್ಟ್ರಪತಿ ಅಭ್ಯರ್ಥಿ ಸಿನ್ಹಾಗೆ ಸೋಲು ಬಯಸಿದ್ರಾ ತೆಲಂಗಾಣ ಸಿಎಂ?; ಸದ್ದು ಮಾಡ್ತಿದೆ ಕೆಸಿಆರ್ ವಾಪಸ್ ಪಡೆದ ‘ಶಬ್ದ’

‘ನಮಸ್ಕಾರ ದೇವರು’ ಅಂತ ಹೇಳೋದ್ಯಾಕೆ ಡಾಕ್ಟರ್​ ಬ್ರೋ?; ಹಣ ಬೇಕಾದಾಗ ಯಾವ ಹೋಟೆಲ್​ಗೆ ಹೋಗ್ತಾರೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × 1 =
Remember me
