ಭುವನೇಶ್ವರ್​:ಜಗತ್ತು ಎಷ್ಟೇ ಆಧುನಿಕವಾಗಿ ಮುಂದುವರಿದರೂ ಇನ್ನೂ ಕೆಲವರು ಮೂಢನಂಬಿಕೆಗಳು ಮತ್ತು ಹಳೆಯ ಸಂಪ್ರದಾಯಗಳನ್ನು ಆಚರಿಸುತ್ತಿರುವುದು ನಿಜಕ್ಕೂ ಆಘಾತಕಾರಿ ಸಂಗತಿ. ಒಡಿಶಾದ ಮಯೂರ್‌ಭಂಜ್ ಜಿಲ್ಲೆಯ ಕುಟುಂಬವೊಂದು ಹಾವು ಕಚ್ಚಿದ ತಮ್ಮ ಮಗನನ್ನು ಆಸ್ಪತ್ರೆಯ ಬದಲಿಗೆ ಮಾಂತ್ರಿಕನ ಬಳಿಗೆ ಕರೆದೊಯ್ದ ಪರಿಣಾಮ ಪ್ರೀತಿಯ ಪುತ್ರನನ್ನು ಕಳೆದುಕೊಂಡಿದೆ.
ಮಯೂರ್​ಭಂಜ್ ಜಿಲ್ಲೆಯ ಬರಡಾ ಪೊಲೀಸ್ ವ್ಯಾಪ್ತಿಯ ಸಾಸನ್ ಪಂಚಾಯಿತಿಯ ಬಡದಿಹಿ ಗ್ರಾಮದಲ್ಲಿ ಇಂತಹ ಹಳೆಯ ಪದ್ಧತಿ ಮತ್ತು ಆಚರಣೆಗಳು ಇನ್ನೂ ಜೀವಂತವಾಗಿವೆ. ಎರಡು ದಿನಗಳ ಹಿಂದಷ್ಟೇ ಬಡದಿಹಿ ಗ್ರಾಮದ ಚೈತನ್ಯ ತೂಡು ಎಂಬುವರ ಮಗ ಕಂದ್ರಾ ತೂಡು ದನ ಮೇಯಿಸಲು ಹೋಗಿದ್ದ. ಈ ವೇಳೆ ಆತನಿಗೆ ವಿಷಕಾರಿ ಹಾವು ಕಚ್ಚಿತ್ತು. ಕಚ್ಚಿದ ನಂತರವೂ ಕಂದ್ರಾ ಹಾವನ್ನು ಕೋಲಿನಿಂದ ಥಳಿಸಿದ್ದ. ಅಲ್ಲದೆ, ಕಡಿತದ ನೋವಿನಿಂದ ನರಳುತ್ತಿದ್ದರೂ ಹಾವನ್ನು ಹಿಡಿದೇ ಮನೆಗೆ ತಲುಪಿ ನಡೆದ ಘಟನೆಯನ್ನು ವಿವರಿಸಿದ್ದ.
ಸ್ವಲ್ಪ ಹೊತ್ತಿನ ಬಳಿಕ ಕಂದ್ರಾ ತೀವ್ರವಾಗಿ ಅಸ್ವಸ್ಥಗೊಂಡನು ಮತ್ತು ಇದ್ದಕ್ಕಿದ್ದಂತೆ ಪ್ರಜ್ಞಾಹೀನನಾದನು. ಈ ವೇಳೆ ಆತನನ್ನು ಆಸ್ಪತ್ರೆಗೆ ಕರೆದೊಯ್ಯುವ ಬದಲು ಊರಿನ ಮಾಂತ್ರಿಕ ಬಳಿ ಪಾಲಕರು ಕರೆದೊಯ್ದಿದ್ದಾರೆ. ಕೆಲವರು ಆಸ್ಪತ್ರೆಗೆ ಕರೆದೊಯ್ಯುವಂತೆ ಸಲಹೆ ನೀಡಿದರು ಸಹ ಮಂತ್ರದ ಮೂಲಕ ವಾಸಿ ಮಾಡುತ್ತಾರೆ ಎಂಬ ಮೂಢನಂಬಿಕೆಯಿಂದ ಮಾಂತ್ರಿಕನ ಬಳಿ ಕರೆದೊಯ್ದಿದ್ದಾರೆ.
ಮಾಂತ್ರಿಕನ ಪ್ರಯತ್ನವೂ ವಿಫಲವಾಗಿ ಕಂದ್ರಾ ತೊಡು ಆರೋಗ್ಯ ಸ್ಥಿತಿ ಇನ್ನಷ್ಟು ಹದಗೆಟ್ಟಿತು. ಈ ವೇಳೆ ಗ್ರಾಮಸ್ಥರು ತುಂಬಾ ಮನವಿ ಮಾಡಿದಾಗ ಆಸ್ಪತ್ರೆಗೆ ದಾಖಲಿಸಲು ಒಪ್ಪಿದರು. ಆದರೆ, ಅಷ್ಟರಲ್ಲಾಗಲೇ ಆತನ ಪ್ರಾಣ ಪಕ್ಷಿ ಹಾರಿ ಹೋಗಿತ್ತು. ಇದೀಗ ಮಗನನ್ನು ಕಳೆದುಕೊಂಡ ಕುಟುಂಬ ಶೋಕ ಸಾಗರದಲ್ಲಿ ಮುಳುಗಿದೆ.(ಏಜೆನ್ಸೀಸ್​)
ಈ 3 ಪ್ರಮುಖ ಕಾರಣಗಳಿಂದಲೇ ಶ್ರೀಲಂಕಾ ವಿರುದ್ಧ ಟೀಮ್​ ಇಂಡಿಯಾ ಹೀನಾಯ ಸೋತಿದ್ದು!

ಆ ಭಾರತೀಯ ನಟನ ಮಾತುಗಳಿಂದ ನನ್ನ ಜೀವನವೇ ಬದಲಾಯಿತು: ಜಾನ್ ಸೀನಾ ಅಚ್ಚರಿ ಹೇಳಿಕೆ

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:14 + thirteen =
Remember me
