ವಿಜಯವಾಡ:ಮದುವೆ ಮಂಟಪದಿಂದ ವಧುವನ್ನು ಕಿಡ್ನಾಪ್ ಮಾಡುವಂತಹ ದೃಶ್ಯಗಳನ್ನು ಸಾಮಾನ್ಯವಾಗಿ ಸಿನಿಮಾಗಳಲ್ಲಿ ನೋಡಿರುತ್ತೇವೆ. ಆದರೆ, ನಿಜ ಜೀವನದಲ್ಲೂ ಇಂಥದ್ದೊಂದು ಘಟನೆ ಆಂಧ್ರ ಪ್ರದೇಶದಲ್ಲಿ ನಡೆದಿದೆ. ಆದರೆ, ವಧುವನ್ನು ಕಿಡ್ನಾಪ್​ ಮಾಡುವ ಪ್ರಯತ್ನವಂತೂ ಇಲ್ಲಿ ಫಲಿಸಲಿಲ್ಲ.
ಆಂಧ್ರದ ಕಡಿಯಂ ಗ್ರಾಮದ ವೆಂಕಟ ನಂದು ಮತ್ತು ಕರ್ನೂಲ್ ಜಿಲ್ಲೆಯ ಚಗಲಮರ್ರಿ ಮಂಡಲದ ಸ್ನೇಹಾ ಪರಸ್ಪರ ಪ್ರೀತಿ ಮಾಡುತ್ತಿದ್ದರು. ಇಬ್ಬರು ಒಂದೇ ಕಾಲೇಜಿನ ವಿದ್ಯಾರ್ಥಿಗಳು. ತಮ್ಮ ಪ್ರೀತಿಗೆ ಹಿರಿಯರು ಒಪ್ಪಿಗೆ ನೀಡುವುದಿಲ್ಲ ಅಂತ ಓದುವಾಗಲೇ ಮದುವೆಯಾಗಿಬಿಡೋಣ ಎಂದು ನಿರ್ಧರಿಸಿದರು. ಅದೇ ರೀತಿ ಏಪ್ರಿಲ್​ 13ರಂದು ವಿಜಯವಾಡದ ದುರ್ಗಾ ದೇವಸ್ಥಾನದಲ್ಲಿ ವಿವಾಹವಾದರು.
ಇದಾದ ಬಳಿಕ ವೆಂಕಟನಂದು ಅವರ ಮನೆಯಲ್ಲಿ ಈ ವಿಚಾರ ಗೊತ್ತಾಗಿ, ಇಬ್ಬರಿಗೂ ಶಾಸ್ತ್ರೋಕ್ತವಾಗಿ ಮದುವೆ ಮಾಡಲು ಹಿರಿಯರು ಒಪ್ಪಿದರು. ಏಪ್ರಿಲ್​ 21ರ ಭಾನುವಾರ ಮದುವೆ ಮಾಡುವುದಾಗಿ ವಧುಗಿನ ಪಾಲಕರಿಗೂ ಸಂದೇಶ ರವಾನಿಸಲಾಗಿತ್ತು. ಮದುವೆ ಸಮಾರಂಭದ ವಿಳಾಸವನ್ನೂ ನೀಡಿಲಾಗಿತ್ತು. ಈ ಕ್ರಮದಲ್ಲಿ ಮುಹೂರ್ತದ ವೇಳೆ ಫಂಕ್ಷನ್ ಹಾಲ್​ಗೆ ನುಗ್ಗಿದ ಸ್ನೇಹಾಳ ತಾಯಿ, ಸಹೋದರ ಮತ್ತು ಸೋದರಸಂಬಂಧಿಗಳು ಆಕೆಯನ್ನು ಮದುವೆ ಸ್ಥಳದಿಂದ ಬಲವಂತವಾಗಿ ಎಳೆದೊಯ್ಯಲು ಯತ್ನಿಸಿದರು. ಅಲ್ಲದೆ, ಆಕೆಯನ್ನು ತಡೆಯಲು ಬಂದವರ ಮೇಲೆ ಖಾರದಪುಡಿಯನ್ನು ಎರಚಿ, ಗಲಾಟೆ ಸಹ ಮಾಡಿದರು.
కంట్లో కారం కొట్టి.. పెళ్లి కూతురును కిడ్నాప్ చేసేందుకు ప్రయత్నించిన దుండగులు.
రాజమండ్రి రూరల్ కడియంలో పెళ్లి జరుగుతుండగా కొందరు దుండగులు కంట్లో కారం కొట్టి పెళ్లి కూతురును కిడ్నాప్ చేసేందుకు యత్నించారు.pic.twitter.com/XCH4NRFAqx
— Telugu Scribe (@TeluguScribe)April 22, 2024

ಆದರೆ, ಅಪಹರಣ ಯತ್ನವನ್ನು ವರ, ಆತನ ಕುಟುಂಬದವರು ಹಾಗೂ ಸ್ನೇಹಿತರು ವಿಫಲಗೊಳಿಸಿದ್ದಾರೆ. ಗಲಾಟೆಯಲ್ಲಿ ವರನ ಸ್ನೇಹಿತರೊಬ್ಬರು ತೀವ್ರವಾಗಿ ಗಾಯಗೊಂಡಿದ್ದಾರೆ. ಇದೀಗ ಸ್ನೇಹಾಳ ಕುಟುಂಬಸ್ಥರು ಹಲ್ಲೆ, ಅಪಹರಣ ಯತ್ನ ಮತ್ತು ಚಿನ್ನ ಕಳ್ಳತನ ಸೇರಿದಂತೆ ಹಲವಾರು ಕ್ರಿಮಿನಲ್ ಆರೋಪಗಳನ್ನು ಎದುರಿಸುತ್ತಿದ್ದಾರೆ. ಮದುವೆಗೆ ಯಾಕೆ ವಿರೋಧ ವ್ಯಕ್ತಪಡಿಸಿದರು ಎಂಬುದಕ್ಕೆ ಕಾರಣ ತಿಳಿದುಬಂದಿಲ್ಲ.
ಈ ಘಟನೆ ಕುರಿತು ಮಾತನಾಡಿದ ಕಡಿಯಂ ಸರ್ಕಲ್ ಇನ್ಸ್‌ಪೆಕ್ಟರ್ ಬಿ. ತುಳಸಿಧರ್, ವೀರಬಾಬು ಕುಟುಂಬದವರು ಸ್ನೇಹಾ ಕುಟುಂಬದ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿದ್ದಾರೆ. ತನಿಖೆ ನಡೆಯುತ್ತಿದ್ದೆ ಎಂದಿದ್ದಾರೆ.(ಏಜೆನ್ಸೀಸ್​)
ನಾನು ಮೂರು ಮದ್ವೆಯಾಗಿದ್ರೂ ಈತನೊಂದಿಗೆ ಮಾತ್ರ ತುಂಬಾ ಖುಷಿಯಾಗಿದ್ದೀನಿ! ನಟಿ ಲಕ್ಷ್ಮೀ ಓಪನ್ ಟಾಕ್

ಶ್ರೀಲೀಲಾ ಕೆರಿಯರ್​ ಕ್ಲೋಸ್​ ಅಂದವರಿಗೆ ಖಡಕ್​ ಉತ್ತರ ಕೊಟ್ಟ ಕನ್ನಡತಿ! ನಿಜಕ್ಕೂ ಕ್ರೇಜಿ ಪ್ರಾಜೆಕ್ಟ್​ ಇದು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × two =
Remember me
