ಅಮರಾವತಿ:ಆಂಧ್ರಪ್ರದೇಶ ಲೋಕಸಭೆ ಹಾಗೂ ವಿಧಾನಸಭೆ ಚುನಾವಣೆಗೆ ದಿನಗಣನೆ ಶುರುವಾಗಿದೆ. ಆಂಧ್ರದಲ್ಲಿ ಚುನಾವಣಾ ರಾಜಕೀಯ ಗರಿಗೆದರಿದ್ದು, ಇಂದು (ಶನಿವಾರ) ತೆಲುಗು ನಟ ನಿಖಿಲ್ ಸಿದ್ದಾರ್ಥ್‌ ತೆಲುಗು ದೇಶಂ ಪಕ್ಷ ಸೇರ್ಪಡೆಯಾಗಿದ್ದಾರೆ.
ಇದನ್ನೂ ಓದಿ:ಆಂಧ್ರಪ್ರದೇಶ ಚುನಾವಣೆ: ಟಿಡಿಪಿಯ ಅಭ್ಯರ್ಥಿಗಳ ಅಂತಿಮ ಪಟ್ಟಿ ಬಿಡುಗಡೆ!
ಮುಂಬರುವ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ನಿಖಿಲ್​ ಅವರು ಸ್ಪರ್ಧಿಸುವ ಬಗ್ಗೆ ಹಲವು ದಿನಗಳಿಂದ ಸುದ್ದಿಯಾಗಿತ್ತು. ನಿಖಿಲ್​ ಅವರು ಯಾವ ಪಾರ್ಟಿ ಸೇರಿಕೊಳ್ತಾರೆ. ಎಲ್ಲಿಂದ ಚುನಾವಣೆಗೆ ಸ್ಪರ್ಧೆ ಮಾಡ್ತಾರೆ ಅನ್ನೋದು ಸಸ್ಪೆನ್ಸ್ ಆಗಿತ್ತು. ಅಂತಿಮವಾಗಿ ತೆಲುಗು ದೇಶಂ (ಟಿಡಿಪಿ) ಪಕ್ಷದ ಪ್ರಧಾನ ಕಾರ್ಯದರ್ಶಿ ನಾರಾ ಲೋಕೇಶ್​ ಅವರ ಸಮ್ಮುಖದಲ್ಲಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.
ನಟ ನಿಖಿಲ್ ಈ ಬಾರಿ ಪ್ರತ್ಯಕ್ಷ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎನ್ನಲಾಗಿದೆ. ಆದರೆ ತೆಲುಗು ದೇಶಂ ಪಕ್ಷದ ಪರವಾಗಿ ರಾಜ್ಯಾದ್ಯಂತ ಸ್ಟಾರ್ ಪ್ರಚಾರದಲ್ಲಿ ಭಾಗವಹಿಸಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಟಿಡಿಪಿ ಅಂತಿಮ ಪಟ್ಟಿ ಬಿಡುಗಡೆ: ತೆಲುಗು ದೇಶಂ ಪಕ್ಷವು 4 ಲೋಕಸಭೆ ಮತ್ತು 9 ವಿಧಾನಸಭಾ ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸಿದೆ. ಈ ಪಟ್ಟಿಯನ್ನು ಶುಕ್ರವಾರ ಘೋಷಣೆ ಮಾಡಲಾಗಿದೆ. ವಿಜಯನಗರಂ ಟಿಡಿಪಿ ಸಂಸದ ಅಭ್ಯರ್ಥಿಯಾಗಿ ಅಪ್ಪಲನಾಯ್ಡು ಮತ್ತು ಒಂಗೋಲ್ ಸಂಸದ ಅಭ್ಯರ್ಥಿಯಾಗಿ ಮಾಗುಂಟ ಶ್ರೀನಿವಾಸರೆಡ್ಡಿ ಅವರ ಹೆಸರನ್ನು ಅಂತಿಮಗೊಳಿಸಿದೆ.
ನನ್ನದು ಪಕ್ಕಾ ಲವ್‌ ಮ್ಯಾರೇಜ್‌, ಆದರೆ ಒಂದು ಕಂಡೀಷನ್….: ನಟ ವಿಜಯ್​ ಮನದಾಳದ ಮಾತು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × 1 =
Remember me
