ನವದೆಹಲಿ :ದೆಹಲಿಯಲ್ಲಿ ನಡೆಯುತ್ತಿರುವ ಆಕ್ಸಿಜನ್ ಉಪಕರಣಗಳ ಕಾಳದಂಧೆಗೆ ಸಂಬಂಧಿಸಿದಂತೆ ನಗರದ ಹಲವು ಜನಪ್ರಿಯ ರೆಸ್ಟೊರೆಂಟ್​​ಗಳ ಮಾಲೀಕ ನವ್​​ನೀತ್​ ಕಾಲ್ರ ಮೇಲೆ ಇದೀಗ ಪೊಲೀಸರ ದೃಷ್ಟಿ ನೆಟ್ಟಿದೆ. ಕಾಲ್ರಗೆ ಸೇರಿದ ಮೂರು ರೆಸ್ಟೊರೆಂಟ್​ಗಳಲ್ಲಿ ಆಕ್ಸಿಜನ್ ಕಾನ್ಸಂಟ್ರೇಟರ್​ಗಳ ಅಕ್ರಮ ದಾಸ್ತಾನುಗಳು ಪತ್ತೆಯಾಗಿದೆ ಎನ್ನಲಾಗಿದೆ.
ನಿನ್ನೆ ಲೋಧಿ ಕಾಲೋನಿಯ ನೆಗೆ ಜು ರೆಸ್ಟೊಬಾರ್​​ನ ಶೋಧಕಾರ್ಯ ನಡೆಸಿದ ದೆಹಲಿ ಪೊಲೀಸರು, ಆಕ್ಸಿಜನ್ ಕಾನ್ಸಂಟ್ರೇಟರ್​ಗಳನ್ನು ದುಬಾರಿ ಬೆಲೆಗೆ ಮಾರುತ್ತಿದ್ದ ನಾಲ್ವರನ್ನು ಬಂಧಿಸಿದ್ದರು. ಅವರ ಮಾಹಿತಿಯ ಮೇಲೆ ಒಟ್ಟು 419 ಉಪಕರಣಗಳನ್ನು ಪೊಲೀಸರು ಜಪ್ತಿ ಮಾಡಿಕೊಂಡಿದ್ದರು. ಅದು ಬಿಸಿನೆಸ್​ಮನ್​ ಕಾಲ್ರಗೆ ಸೇರಿದ ರೆಸ್ಟೊರೆಂಟ್​ ಎಂದು ತಿಳಿದುಬಂದಿತ್ತು.
ಇದನ್ನೂ ಓದಿ:ಉಚಿತವಾಗಿ ಲಸಿಕೆ ಒದಗಿಸಿ ಎಂದು ಸುಪ್ರೀಂ ಕೋರ್ಟ್​ ಮೆಟ್ಟಿಲೇರಿದ ದೀದಿ ಸರ್ಕಾರ
ಇಂದು ಬೆಳಿಗ್ಗೆ ಅದೇ ಲೋಧಿ ಕಾಲೋನಿಯ ಟೌನ್​ ಹಾಲ್​ ರೆಸ್ಟೊರೆಂಟ್​ ಮೇಲೆ ಪೊಲೀಸರು ರೇಡ್​ ನಡೆಸಿದಾಗ ಒಂಭತ್ತು ಕಾನ್ಸಂಟ್ರೇಟರ್​ಗಳು ಪತ್ತೆಯಾಗಿವೆ. ಖಾನ್ ಮಾರ್ಕೆಟ್​ನಲ್ಲಿರುವ ಖಾನ್​ ಚಾಚಾ ಎಂಬ ಮತ್ತೊಂದು ರೆಸ್ಟೊರೆಂಟ್​ಗೆ ರೇಡ್​ ಮಾಡಿದಾಗ ಅಲ್ಲಿ 100 ಆಕ್ಸಿಜನ್ ಕಾನ್ಸಂಟ್ರೇಟರ್​ಗಳು ಸಿಕ್ಕಿವೆ. ಎರಡೂ ರೆಸ್ಟೊರೆಂಟ್​ಗಳು ಕಾಲ್ರಗೆ ಸೇರಿದವು ಎನ್ನಲಾಗಿದೆ. ಒಟ್ಟು, 524 ಕಾನ್ಸಂಟ್ರೇಟರ್​ಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.
ಖಾನ್​ ಚಾಚಾ ರೆಸ್ಟೊರೆಂಟ್​​ನ ಹೊರಗೆ ಜನರು ಆಕ್ಸಿಜನ್ ಉಪಕರಣ ಖರೀದಿಸಲು ಕ್ಯೂ ನಿಂತಿರುವ ವಿಡಿಯೋ ಮತ್ತು ಕಾಲ್ರ ಉಪಕರಣಗಳ ಪೂರೈಕೆ ಬಗ್ಗೆ ಮಾತನಾಡಿರುವ ವಾಟ್ಸಾಪ್​ ಚಾಟ್​ಗಳ ಫೋಟೋಗಳನ್ನು ಇಂಡಿಯಾ ಟುಡೇ ಪ್ರಸಾರ ಮಾಡಿದೆ ಎನ್ನಲಾಗಿದೆ. ಈ ಎಲ್ಲ ಮಾಹಿತಿಯ ಹಿನ್ನೆಲೆಯಲ್ಲಿ ದೆಹಲಿ ಪೊಲೀಸರು ಆಕ್ಸಿಜನ್ ಉಪಕರಣಗಳ ಕಾಳದಂಧೆಯ ಸೂತ್ರಧಾರ ಎಂಬ ಅನುಮಾನದ ಮೇಲೆ ನವ್​​ನೀತ್​ ಕಾಲ್ರ ಹುಡುಕಾಟದಲ್ಲಿ ತೊಡಗಿದ್ದಾರೆ ಎನ್ನಲಾಗಿದೆ.
ಪರಿಣಾಮಕಾರಿ ಕ್ರಮ ತೆಗೆದುಕೊಂಡರೆ ಮೂರನೇ ಅಲೆ ತಡೆಯಬಹುದು : ಡಾ.ವಿಜಯರಾಘವನ್
ಬಾಲಿವುಡ್​ ನಟಿ ಶಿಲ್ಪ ಶೆಟ್ಟಿ ಕುಟುಂಬದ ಆರು ಜನಕ್ಕೆ ಕರೊನಾ


ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:ten + fifteen =
Remember me
